More

    ಗಿಡ ನೆಟ್ಟರೆ ಆರೋಗ್ಯ ಉಚಿತ

    ಚಿತ್ರದುರ್ಗ: ಪರಿಸರ ರಕ್ಷಣೆ ಅರಣ್ಯ ಇಲಾಖೆ, ಸರ್ಕಾರದ ಕಾರ್ಯವಷ್ಟೇ ಆಗಬಾರದು. ಈ ಕೆಲಸದಲ್ಲಿ ಜನರು ಭಾಗಿಯಾಗಬೇಕು ಎಂದು ಪರಿಸರ ಪ್ರೇಮಿ ಜಿ.ರೇಖಾ ಹೇಳಿದರು.

    ನಗರದ ಚಳ್ಳಕೆರೆ ಮಾರ್ಗದ ರಸ್ತೆ ವಿಭಜಕದಲ್ಲಿ ಪ್ರೇರಣಾ ಸಂಸ್ಥೆ ಸೋಮವಾರ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಈಗಾಗಲೇ ನಗರ ಪ್ರದೇಶದ ಪ್ರಮುಖ ರಸ್ತೆ ಬದಿ, ಗುಡ್ಡಗಾಡುಗಳಲ್ಲಿ ಗಿಡ ನೆಡಲಾಗುತ್ತಿದೆ ಎಂದರು.

    ಸ್ವಚ್ಛತೆ, ಗಿಡ ಬೆಳೆಸುವುದು ಸೇರಿ ಅನೇಕ ಕಾರ್ಯಗಳು ಸರ್ಕಾರದು ಎಂಬ ಭಾವನೆ ಜನರಲ್ಲಿದೆ. ಇದರಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ, ಸಹಕಾರದಿಂದ ಮಾತ್ರ ಪರಿಸರದ ಉಳಿವು ಸಾಧ್ಯ ಎಂದು ಹೇಳಿದರು.

    ಮನೆ ಬಳಿ ಒಂದು ಗಿಡ ನೆಟ್ಟರೆ ಆರೋಗ್ಯ ಉಚಿತವಾಗಿ ದೊರೆಯಲಿದೆ. ಶುದ್ಧ ಗಾಳಿ, ತಂಪಾದ ವಾತಾವರಣ ಲಭಿಸಲಿದೆ. ಆದ್ದರಿಂದ ಗಿಡ ನೆಟ್ಟು ಪೋಷಿಸುವತ್ತ ಜನರು ಆಸಕ್ತಿ ತೋರಬೇಕು ಎಂದು ಮನವಿ ಮಾಡಿದರು.

    ಸಂಸ್ಥೆ ಅಧ್ಯಕ್ಷ ಟಿ.ಮಂಜುನಾಥ್ ಮಾತನಾಡಿ, ಪರಿಸರ ಉಳಿವು, ಗಿಡ ಮರಗಳ ಸಂಖ್ಯೆ ಹೆಚ್ಚಿಸಲು ಜನ ಸಹಕಾರ ಮುಖ್ಯ. ಪ್ರಾಣಿ- ಸಂಕುಲ ಉಳಿದರೆ ಮಾತ್ರ ಮನುಷ್ಯ ಜೀವನಕ್ಕೆ ನೆಮ್ಮದಿ. ಈ ನಿಟ್ಟಿನಲ್ಲಿ ನಗರ ಪ್ರದೇಶದ ರಸ್ತೆ ಬದಿ, ಖಾಲಿ ಜಾಗದಲ್ಲಿ ಗಿಡಗಳನ್ನು ನೆಡಲು ನಿರ್ಧರಿಸಿದ್ದು, ಚಾಲನೆ ನೀಡಿದ್ದೇವೆ ಎಂದರು.

    ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷ ಶ್ರೀನಿವಾಸ್, ಸಂಸ್ಥೆ ಪದಾಧಿಕಾರಿಗಳಾದ ಸಂತೋಶ್ ಭಜಂತ್ರಿ, ಸೋಮಶೇಖರ್, ಬಿ.ಎಂ.ದಯಾನಂದ, ಪ್ರಕಾಶ್, ರಾಜಪ್ಪ, ಸಂಪತ್ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts