More

    25ರೊಳಗೆ ಕಾಮಗಾರಿ ಪೂರ್ಣಗೊಳಿಸಿ

    ಚಿತ್ರದುರ್ಗ: ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿ ಪ್ರಗತಿಯಲ್ಲಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮಾರ್ಚ್ 25ರೊಳಗೆ ಪೂರ್ಣಗೊಳಿಸುವಂತೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್ ನಗರ, ಪುರಸಭೆ, ಪಟ್ಟಣ ಪಂಚಾಯಿತಿ ಮುಖ್ಯಸ್ಥರಿಗೆ ಸೂಚಿಸಿದರು.

    ಡಿಸಿ ಕಚೇರಿಯಲ್ಲಿ ಸೋಮವಾರ ಪ್ರಗತಿ ಪರಿಶೀಲಿಸಿದ ಅವರು, ಕಾಮಗಾರಿಗಳ ಟೆಂಡರ್ ಬಾಕಿ ಇದ್ದರೇ ಈ ವಾರದೊಳಗೆ ಕರೆಯಬೇಕು. ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ಕಲ್ಯಾಣ ಯೋಜನೆಗಳಡಿ ನೆರವು ನೀಡಬೇಕು ಎಂದರು.

    ಕ್ರಮ ಜರುಗಿಸಿ; ಕಸ ಸಾಗಾಟ ವೇಳೆ ರಸ್ತೆಯಲ್ಲಿ ಕಸ ಚೆಲ್ಲದಂತೆ ವಾಹನಗಳಲ್ಲಿ ಇದಕ್ಕಾಗಿ ಅಗತ್ಯ ವ್ಯವಸ್ಥೆ ಕಲ್ಪಿಸುವುದು ಗುತ್ತಿಗೆದಾರರ ಕರ್ತವ್ಯ. ಇದನ್ನು ನಿರ್ಲಕ್ಷಿಸಿದರೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು. ನಗರ, ಪಟ್ಟಣಗಳ ಸ್ವಚ್ಛತೆಗೆ ಆದ್ಯತೆ ಕೊಡುವ ನಿಟ್ಟಿನಲ್ಲೂ ಅಧಿಕಾರಿಗಳು ಗಮನ ಹರಿಸಬೇಕು ಎಂದು ತಿಳಿಸಿದರು.

    ವಸ್ತು ಪ್ರದರ್ಶನ: ನಾಯಕನಹಟ್ಟಿ ಜಾತ್ರೆಯಲ್ಲಿ ಸ್ವಚ್ಛತೆ ಹಾಗೂ ಕಸ ವಿಂಗಡಣೆ, ವಿಲೇ, ಮರು ಬಳಕೆಗೆ ಸಂಬಂಧಿಸಿದಂತೆ ವಸ್ತುಪ್ರದರ್ಶನ ಏರ್ಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಚಿತ್ರದುರ್ಗ ನಗರಸಭೆ ಆಯುಕ್ತ ಜಿ.ಟಿ.ಹನುಮಂತರಾಜು, ಚಳ್ಳಕೆರೆ ನಗರಸಭೆ ಆಯುಕ್ತ ಪಾಲಯ್ಯ, ಹಿರಿಯೂರು ನಗರಸಭೆ ಆಯುಕ್ತ ಶಿವಪ್ರಸಾದ್, ಹೊಸದುರ್ಗ ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು, ಹೊಳಲ್ಕೆರೆ ಪಪಂ ಮುಖ್ಯಾಧಿಕಾರಿ ಎ.ವಾಸಿಂ, ನಾಯಕನಹಟ್ಟಿ ಪಪಂ ಮುಖ್ಯಾಧಿಕಾರಿ ಭೂತಯ್ಯ, ಮೊಳಕಾಲ್ಮೂರು ಪಪಂ ಮುಖ್ಯಾಧಿಕಾರಿ ಕಾಂತರಾಜ್ ಮತ್ತಿತರ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts