More

    ನರೇಗಾದಲ್ಲಿ ಯಂತ್ರ ಬಳಸಿದರೆ ಕ್ರಮ

    ಚಿತ್ರದುರ್ಗ: ನರೇಗಾ ಕಾಮಗಾರಿಗಳಲ್ಲಿ ಯಂತ್ರೋಪಕರಣಗಳನ್ನು ಬಳಸಿದರೆ ತಮ್ಮನ್ನೇ ಹೊಣೆ ಮಾಡುವುದಾಗಿ ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತ (ನರೇಗಾ) ಅನಿರುದ್ಧ ಚವ್ಹಾಣ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

    ಗುರುವಾರ ಜಿಪಂ ಸಭಾಂಗಣದಲ್ಲಿ ತಾಪಂ, ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ, ಪಂ.ರಾಜ್ ಇಂಜಿನಿಯರಿಂಗ್ ಮತ್ತಿತರ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿರು.

    ಸಮುದಾಯ ಆಧಾರಿತ ಕಾಮಗಾರಿಗಳಿಗಿಂತ ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ಕೊಡಬೇಕು. ಯಂತ್ರಗಳನ್ನು ಬಳಸದೇ ಜನರ ಕೈಗೆ ಹೆಚ್ಚಿನ ಕೆಲಸ ಕೊಡುವುದರೊಂದಿಗೆ ಜಾಬ್ ಕಾರ್ಡ್‌ಗಳ ಸಂಖ್ಯೆಯನ್ನೂ ಹೆಚ್ಚಿಸಬೇಕು ಎಂದರು.

    ಅರಣ್ಯ ಇಲಾಖೆ, ಬರದ ಜಿಲ್ಲೆ ಚಿತ್ರದುರ್ಗದಲ್ಲಿ ಹೆಚ್ಚು ಸಸಿಗಳನ್ನು ನೆಟ್ಟು ಬೆಳೆಸಬೇಕು. ಕೃಷಿ ಇಲಾಖೆ ಬದು ನಿರ್ಮಾಣ, ಕೃಷಿ ಹೊಂಡದಂಥ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳುವಂತೆ ಫಲಾನುಭವಿ ರೈತರನ್ನು ಪ್ರೋತ್ಸಾಹಿಸಬೇಕು. ತೋಟಗಾರಿಕೆ, ರೇಷ್ಮೆ ಇಲಾಖೆಗಳು ರೈತರಿಗೆ ಕೆಲಸ ಕೊಡಬೇಕು ಎಂದು ಸೂಚಿಸಿದರು.

    ನಿತ್ಯವೂ ಕಾಮಗಾರಿ ನಡೆಯಬೇಕು: ಜಿಲ್ಲೆಯ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ನಿತ್ಯವೂ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಈವರೆಗೆ ಜಿಲ್ಲೆಯಲ್ಲಿ 1.83 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. 189 ಗ್ರಾಪಂಗಳ ಪೈಕಿ 188ರಲ್ಲಿ ನರೇಗಾ ಕಾಮಗಾರಿಗಳು ಆರಂಭವಾಗಿವೆ ಎಂದು ಜಿಪಂ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ ಮಾಹಿತಿ ನೀಡಿದರು.

    ಜಿಪಂ ಸಿಇಒ ಎಸ್.ಹೊನ್ನಾಂಬ, ತಾಪಂ ಇಒಗಳು ಹಾಗೂ ವಿವಿಧ ಇಲಾಖೆ ಹಿರಿಯ ಅಧಿಕಾರಿಗಳಿದ್ದರು.

    ಕಾಮಗಾರಿಗಳ ಪರಿಶೀಲನೆ: ಸಭೆಗೂ ಮುನ್ನ ಆಯುಕ್ತರು, ಹೊಳಲ್ಕೆರೆ ತಾಲೂಕು ದುಮ್ಮಿ, ಚಿರಾತನಹಳ್ಳಿ, ಆರ್.ನುಲೇನೂರು, ಚಿತ್ರದುರ್ಗ ತಾಲೂಕು ಕುರುಬರಹಳ್ಳಿ ಹಾಗೂ ಮುದ್ದಾಪುರಕ್ಕೆ ಭೇಟಿ ನೀಡಿ ಬದು ನಿರ್ಮಾಣ, ಕೃಷಿಹೊಂಡ, ಕೆರೆ ಹೂಳೆತ್ತುವುದು, ರೇಷ್ಮೆ ಬೆಳೆ ಮತ್ತಿತರ ಕಾಮಗಾರಿಗಳನ್ನು ವೀಕ್ಷಿಸಿದರು. ಇದೇ ವೇಳೆ ಹಲವೆಡೆ ನರೇಗಾ ಫಲಾನುಭವಿಗಳೊಂದಿಗೆ ಸಮಾಲೋಚನೆ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts