More

    ಶರಣರಿಗೆ ಪುಷ್ಪಾಭಿಷೇಕ ಮೂಲಕ ಉತ್ಸವಕ್ಕೆ ತೆರೆ

    ಚಿತ್ರದುರ್ಗ: ಶರಣ ಸಂಸ್ಕೃತಿ ಉತ್ಸವ ಸಮಿತಿ ಗೌರವಾಧ್ಯಕ್ಷರಾದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಭೋವಿ ಗುರುಪೀಠದಿಂದ ಶ್ರೀ ಶಿವಮೂರ್ತಿ ಮುರುಘಾ ಶರಣರಿಗೆ ಪುಷ್ಪಾಭಿಷೇಕ ಹಾಗೂ ಬೆಂಗಳೂರಲ್ಲಿ ೆಬ್ರವರಿಯಲ್ಲಿ ಜರುಗಿದ್ದ ಅಸಂಖ್ಯ ಪ್ರಮಥರ ಗಣಮೇಳದ ಯಶಸ್ಸಿನ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಗೌರವ ಸರ್ಮರ್ಪಣೆಯೊಂದಿಗೆ ಅ.22ರಂದು ಆರಂಭವಾಗಿದ್ದ ಶರಣ ಸಂಸ್ಕೃತಿ ಉತ್ಸವಕ್ಕೆ ಬುಧವಾರ ತೆರೆ ಬಿದ್ದಿತು.
    ಈ ವೇಳೆ ಮಾತನಾಡಿದ ವಿಜಯೇಂದ್ರ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಹಿಂದಿನ ಅವಧಿಯಲ್ಲಿ ಎಷ್ಟೇ ಪ್ರತಿರೋಧ ಎದುರಾದರು ನಾಡಿನ ಮಠಗಳಿಗೆ ಅನುದಾನ ನೀಡಿದರು. ಲಿಂಗಾಯಿತ ವೀರಶೈವ ಮಠಗಳಿಗೆ ಮಾತ್ರವೆನ್ನದೇ ಎಲ್ಲ ವರ್ಗದ ಮಠಗಳಿಗೂ ಅನುದಾನ ಮಂಜೂರು ಮಾಡಿದ್ದನ್ನು ನೆಪಿಸಿದರು.
    ಅಕ್ಷರ, ಅನ್ನದಾಸೋಹ ಒದಗಿಸುವ ನಿಟ್ಟಿನಲ್ಲಿ ನಾಡಿನ ಮಠಗಳು, ಸರ್ಕಾರಕ್ಕೆ ಸರಿ ಸಮನಾಗಿ ಕೆಲಸ ಮಾಡುತ್ತಿವೆ. ಇಂಥ ಮಠಗಳ ಪ್ರಗತಿ ಗಮನದಲ್ಲಿ ಇಟ್ಟುಕೊಂಡು ಹಾಗೂ ಅವುಗಳ ಸಾಮಾಜಿಕ ಚಿಂತನೆ, ನ್ಯಾಯದ ಪರಿಕಲ್ಪನೆಯನ್ನು ಪ್ರೋತ್ಸಾಹಿಸಲು ಯಡಿಯೂರಪ್ಪ ಅಂದು ಆ ತೀರ್ಮಾನ ತೆಗೆದುಕೊಂಡರು ಎಂದರು.
    ಸಾನ್ನಿಧ್ಯ ವಹಿಸಿದ್ದ ಡಾ.ಶಿವಮೂರ್ತಿ ಮುರುಘಾ ಶರಣರು,ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಬಿಜೆಪಿ ರಾಜ್ಯಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ,ಎನ್.ಜಯಣ್ಣ,ಚನ್ನಬಸವ ಸ್ವಾಮೀಜಿ,ಯಶವಂತರಾವ್ ಪಾಟೀಲ್,ಬಿಜೆಪಿ ಮುಖಂಡ ಎಸ್.ಲಿಂಗಮೂರ್ತಿಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಾದರ್ ಎಂ.ಎಸ್.ರಾಜು,ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಚಿಕ್ಕಂದವಾಡಿ ತಿಪ್ಪೇಸ್ವಾಮಿ,ನಾನಾ ಮಠಾಧೀಶರು ಇದ್ದರು. ಮಂಗಳೂರಿನ ಬಾಯ್‌ಜೋನ್ ನತ್ಯ ಅಕಾಡೆಮಿ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts