More

    ಕರೊನಾ ಸೋಂಕಿಗೆ ಕೋಟೆ ಬಾಗಿಲು ಬಂದ್

    ಚಿತ್ರದುರ್ಗ: ಕರೊನಾ ಸೋಂಕು ತಡೆಗೆ ದಿಡ್ಡಿ ಬಾಗಿಲು ಹಾಕಲು ಕೋಟೆನಾಡು ಸಿದ್ಧವಾಗಿದೆ. ಮಹಾಮಾರಿ ಕರೊನಾ ಹರುಡುವಿಕೆ ತಡೆಗಾಗಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂವಿಗೆ ಕೋಟೆನಾಡಿನಲ್ಲಿ ಸಾಕಷ್ಟು ಬೆಂಬಲ ಸಿಕ್ಕಿದೆ.

    ಮಾ.22ರ ಬೆಳಗ್ಗೆ 7ರಿಂದ ರಾತ್ರಿ 9ರ ವರೆಗೆ ಜನ ಹೊರಗೆ ಬರದಿರಲಿ ನಿರ್ಧರಿಸಿದ್ದಾರೆ. ವಿವಿಧ ಸಂಘ, ಸಂಸ್ಥೆಗಳು, ರಾಜಕೀಯ ಪಕ್ಷಗಳ ಧುರೀಣರು ಕರ್ಫ್ಯೂವಿಗೆ ಬೆಂಬಲ ಸೂಚಿಸಿದ್ದಾರೆ.

    ಕೆಎಸ್‌ಆರ್‌ಟಿಸಿ, ಖಾಸಗಿ ಬಸ್, ಆಟೋ, ಟೆಂಪೊ, ಟ್ಯಾಕ್ಸಿ ಓಡಾಟದಲ್ಲಿ ಭಾರೀ ಪ್ರಮಾಣದಲ್ಲಿ ವ್ಯತ್ಯಯವಾಗಲಿದೆ. ರಜೆ ಹಿನ್ನೆಲೆಯಲ್ಲಿ ಬ್ಯಾಂಕ್, ಕೋರ್ಟ್, ಕಚೇರಿಗಳೇನೂ ಇರುವುದಿಲ್ಲ. ಪರಿಣಾಮ ಜನಸಂದಣಿ ಕೂಡ ಕಡಿಮೆ ಇರಲಿದೆ.

    ಈಗಾಗಲೇ ಸಿನಿಮಾ ಮಂದಿರ, ಶಾಲಾ ಕಾಲೇಜುಗಳು ಬಂದ್ ಆಗಿವೆ. ಪ್ರಮುಖ ಪ್ರವಾಸಿ ತಾಣಗಳು, ದೇವಾಲಯಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಅಂಗಡಿ ಮುಂಗಟ್ಟು, ಮಾರುಕಟ್ಟೆಗಳು, ಮದ್ಯದಂಗಡಿ, ಹೋಟೆಲ್‌ಗಳೂ ಬಂದ್ ಆಗಲಿದ್ದು, ಜನರಿಗೆ ಒಂದು ದಿನದ ಕ್ವಾರಂಟೈನ್ ಅನಿವಾರ್ಯವಾಗಲಿದೆ.

    ಖಾಸಗಿ ಬಸ್‌ಗಳು ರಸ್ತೆಗೆ ಇಳಿಯುವುದಿಲ್ಲ: ಜಿಲ್ಲಾಧ್ಯಂತ ಭಾನುವಾರ ಖಾಸಗಿ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತವಾಗಲಿದೆ ಎಂದು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ತಿಳಿಸಿದ್ದಾರೆ. ನಗರದಲ್ಲಿರುವ 250 ಸಹಿತ ಜಿಲ್ಲಾದ್ಯಂತ 400ಕ್ಕೂ ಹೆಚ್ಚು ಖಾಸಗಿ ಬಸ್‌ಗಳಿದ್ದು, ಯಾವೊಂದು ಬಸ್‌ಗಳು ಸಂಚರಿಸುವುದಿಲ್ಲ ಎಂದಿದ್ದಾರೆ.

    ಸರ್ಕಾರಿ ಬಸ್ ಬಹುತೇಕ ಸ್ಥಗಿತ: ಕೆಎಸ್‌ಆರ್‌ಟಿಸಿ ಚಿತ್ರದುರ್ಗ ವಿಭಾಗ ವ್ಯಾಪ್ತಿಯ 150 ಎಕ್ಸಪ್ರೆಸ್ ಸಹಿತ 266ಗಳಲ್ಲಿ ಷೆಡ್ಯೂಲ್‌ಗಳಲ್ಲಿ ಬಹುತೇಕ ಸಂಚಾರ ಸ್ಥಗಿತವಾಗಲಿದೆ. ತೀರಾ ಅನಿವಾರ್ಯವೆನಿಸಿದ ಮಾರ್ಗಗಳಲ್ಲಿ ಪರಿಸ್ಥಿತಿ ಆಧರಿಸಿ ಬಸ್ಸುಗಳನ್ನು ಓಡಿಸಲು ಅನುಮತಿ ಕೊಡಲಾಗಿದೆ ಎಂದು ನಿಗಮದ ಡಿಸಿ ವಿಜಯಕುಮಾರ್ ತಿಳಿಸಿದ್ದಾರೆ.

    ರೈಲುಗಳ ಸಂಚಾರ ಸ್ಥಗಿತ: 22ರ ಮುಂಜಾನೆ 4ರಿಂದ ರಾತ್ರಿ 10ರ ವರೆಗೆ ಪ್ಯಾಸೆಂಜರ್ ರೈಲುಗಳ ಸಂಚಾರ ಸಂಪೂರ್ಣ ಸ್ಥಗಿತವಾಗಲಿದೆ. ಈಗಾಗಲೇ ರನ್ನಿಂಗ್ ಇರುವಂಥ ರೈಲುಗಳು ಭಾನುವಾರ ಪ್ರಯಾಣ ಸ್ಥಗಿತಗೊಳಿಸುವ ಸಾಧ್ಯತೆ ಹೆಚ್ಚಿದೆ. ರೈಲು ನಿಲ್ದಾಣಗಳಲ್ಲಿ ಕ್ಯಾಟರಿಂಗ್ ಸೇವೆ ಬಂದ್ ಆಗಿದೆ.

    ರೈಲ್ವೇ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ರೈಲ್ವೆ ಇಲಾಖೆ ಆಡಳಿತಾತ್ಮಕ ವಿಭಾಗಕ್ಕೆ ರಜೆ ಘೋಷಿಸಲಾಗಿದೆ. ಇಲಾಖೆ ಓಪನ್ ಲೈನ್ ಡಿಪಾರ್ಟ್‌ಮೆಂಟ್‌ನ ಅಧಿಕಾರಿ, ಸಿಬ್ಬಂದಿಗೆ ಶೇ.50 ಹಾಜರಾತಿಗೆ ಅನುಮತಿ ಕೊಡಲಾಗಿದೆ. ಚಿತ್ರದುರ್ಗದಿಂದಲೂ ಯಾವೊಂದು ರೈಲು ಸಂಚರಿಸುವುದಿಲ್ಲವೆಂದು ನೈಋತ್ಯ ರೈಲ್ವೆ ಮೂಲಗಳು ತಿಳಿಸಿವೆ.

    ರೈಲು ಸಂಚಾರ ಸ್ಥಗಿತವಾಗುವ ಹಿನ್ನೆಲೆಯಲ್ಲಿ ಶೇ.80ಕ್ಕೂ ಹೆಚ್ಚಿನ ಪ್ರಯಾಣಿಕರು ಬುಕ್ಕಿಂಗ್ ಕ್ಯಾನ್ಸೆಲ್ ಮಾಡಿಸಿದ್ದಾರೆ ಎನ್ನಲಾಗಿದ್ದು, ಆಕಸ್ಮಿಕವಾಗಿ ರೈಲು ನಿಲ್ದಾಣದಲ್ಲಿ ಉಳಿಯಬೇಕಾದ ಸನ್ನಿವೇಶದಲ್ಲಿ ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಇಲಾಖೆ ಮುಂದಾಗಿದೆ.

    ಹೋಟೆಲ್‌ಗಳು ಇರುವುದಿಲ್ಲ: ಭಾನುವಾರ ಇಡೀ ದಿನ ಜಿಲ್ಲಾದ್ಯಂತ ಯಾವೊಂದು ಹೋಟೆಲ್, ಬೇಕರಿಗಳು ಕಾರ್ಯನಿರ್ವಹಿಸುವುದಿಲ್ಲವೆಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಅರುಣ್‌ಕುಮಾರ್ ತಿಳಿಸಿದ್ದಾರೆ. ಕರ್ಫ್ಯೂ ಕಾರಣಕ್ಕೆ ಹೋಟೆಲ್‌ಗಳು ಸಂಪೂರ್ಣ ಮುಚ್ಚಿರುತ್ತವೆ. ಮಾ.23ರಿಂದ ಹಲವು ಹೋಟೆಲ್‌ಗಳಲ್ಲಿ ಪಾರ್ಸೆಲ್ ಸರ್ವಿಸ್ ಮಾತ್ರ ಲಭ್ಯವಾಗಲಿದೆ ಎಂದಿದ್ದಾರೆ.

    ಖಾಸಗಿ ಆಸ್ಪತ್ರೆಯಲ್ಲಿ ಒಪಿಡಿ ಸೇವೆ ಬಂದ್: ತರಕಾರಿ, ಹೂವಿನ ಮಾರುಕಟ್ಟೆಗಳು, ದಿನಸಿ ಅಂಗಡಿ, ಮಾಂಸ ಮಾರಾಟ ಇತ್ಯಾದಿ ವ್ಯಾಪಾರ ವಹಿವಾಟು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಭಾನುವಾರ ಒಪಿಡಿ ಸೇವೆ ಸ್ಥಗಿತವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts