More

    ಸಚಿವ ಬಿ.ಸಿ. ಪಾಟೀಲ್ ಮೊದಲ ಭೇಟಿ ಎಲ್ಲಿಗೆ?

    ಚಿತ್ರದುರ್ಗ: ಸಚಿವನಾದರೆ ಮೊದಲಿಗೆ ನಗರದ ಮುರುಘಾಮಠಕ್ಕೆ ಭೇಟಿ ಕೊಡುತ್ತೇನೆ ಎಂದು ಹೇಳಿದ್ದ ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್ ತಮ್ಮ ಮಾತನ್ನು ಉಳಿಸಿಕೊಳ್ಳುವರೇ ಎಂಬುದು ಸದ್ಯದ ಕುತೂಹಲ.

    ಮುರುಘಾಮಠದಲ್ಲಿ 2018 ನವೆಂಬರ್ 2 ರಂದು ನಡೆದ ಜಮುರಾ ನಾಟಕೋತ್ಸವದಲ್ಲಿ ಮಾತನಾಡಿದ್ದ ಅವರು ರಾಜ್ಯ ರಾಜಕೀಯದಲ್ಲಿ ಆಗಲಿರುವ ಬದಲಾವಣೆಗಳ ಮುನ್ಸೂಚನೆ ನೀಡಿದ್ದರು. ಆಗ ಅವರು ಕಾಂಗ್ರೆಸ್ ಶಾಸಕ. ಈ ಬಾರಿ ಬಿಜೆಪಿಯಿಂದ ಗೆದ್ದು, ಸಚಿವರಾಗಿದ್ದಾರೆ.

    ನಾಲ್ಕನೇ ಬಾರಿಗೆ ಶಾಸಕರಾದ ಪಾಟೀಲರು ಯಡಿಯೂರಪ್ಪ ಸಂಪುಟ ಸೇರಿದ್ದು, 40 ವರ್ಷಗಳಿಂದ ಕ್ಷೇತ್ರಕ್ಕಿದ್ದ ಸಚಿವ ಸ್ಥಾನದ ಬರ ನೀಗಿದೆ. ತಂದೆ ತಾಯಿ ಹಾಗೂ ಶ್ರೀ ಜಗಜ್ಯೋತಿ ಬಸವೇಶ್ವರರ ಹೆಸರಲ್ಲಿ ಅವರು ಪ್ರಮಾಣ ವಚನವನ್ನೂ ಸ್ವೀಕರಿಸಿದ್ದಾರೆ. ಸಿಎಂ ಯಡಿಯೂರಪ್ಪ ಅವರೇನೋ ಪಾಟೀಲ್‌ಗೆ ಕೊಟ್ಟಿದ್ದ ಮಾತನ್ನು ಉಳಿಸಿಕೊಂಡಿದ್ದಾರೆ. ಈಗ ಮಾತು ಉಳಿಸಿಕೊಳ್ಳುವ ಸರದಿ ಪಾಟೀಲರದು.

    ಕೌರವನ ಮಾತೇನು: ಪೊಲೀಸ್ ವೃತ್ತಿ, ನಟನೆ ಪ್ರವೃತ್ತಿಯಾಗಿದ್ದಾಗ ಶ್ರೀಮಠಕ್ಕೆ ಭೇಟಿ ಕೊಟ್ಟಿದ್ದ ನನಗೆ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು ಎತ್ತ ರಕ್ಕೆ ಬೆಳೆಯುವಂತೆ ಆಶೀರ್ವದಿಸಿದ್ದರು. ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಸಿನಿಮಾಕ್ಕಾಗಿ ಸ್ವಾಮೀಜಿ ಮೇಕಪ್‌ನಲ್ಲೇ ನಾನು ಈ ಹಿಂದೆ ಶರಣರನ್ನು ಭೇಟಿಯಾಗಿದ್ದೆ.

    ನನ್ನನ್ನು ಕ್ಷೇತ್ರದ ಜನ ಮೂರು ಬಾರಿ ಎಂಎಲ್‌ಎ ಮಾಡಿದ್ದಾರೆ. ಸ್ಥಳದ ಮಹಿಮೆ, ಶರಣರ ಆಶೀರ್ವಾದ, ಈ ಸಭೆಯ ಸದಾಶಯದಂತೆ ಸಚಿವನಾದರೆ, ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಶ್ರೀಮಠಕ್ಕೆ ಮೊದಲ ಭೇಟಿ ಕೊಟ್ಟು ಶರಣರ ಆಶೀರ್ವಾದ ಪಡೆಯುತ್ತೇನೆಂದು ಬಿ.ಸಿ. ಪಾಟೀಲ್ ಹೇಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts