More

    ಕೋಟೆನಾಡು ಎಲ್ಲೆಡೆ ಹೈ ಅಲರ್ಟ್

    ಚಿತ್ರದುರ್ಗ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆಯಾಗಿದ್ದರ ಹಿನ್ನೆಲೆಯಲ್ಲಿ, ಪೊಲೀಸರು ಸೂಕ್ತ ಬಂದೋಬಸ್ತ್ ಮೂಲಕ ಜಿಲ್ಯಾದಂತ ಕಟ್ಟೆಚ್ಚರ ವಹಿಸಿದ್ದಾರೆ.

    ಡಿಆರ್‌ಡಿಒ, ಐಐಎಸ್‌ಸಿ, ಬಾರ್ಕ್ ಸಹಿತ ಚಳ್ಳಕೆರೆ ತಾಲೂಕಿನಲ್ಲಿರುವ ವೈಜ್ಞಾನಿಕ ತಾಣಗಳ ಕುರಿತಂತೆ ಸಂಬಂಧಿಸಿದ ಸಂಸ್ಥೆಗಳ ಪೊಲೀಸ್ ಹಿರಿಯ ಅಧಿಕಾರಿಗಳ ಸಮಾಲೋಚನೆ ನಡೆಸಿದ್ದು, ರಕ್ಷಣೆ ವ್ಯವಸ್ಥೆ ಮತ್ತಷ್ಟು ಬಿಗಿಗೊಳಿಸಲು ಕೋರಿದ್ದಾರೆ.

    ಚಿತ್ರದುರ್ಗದ ಕೋಟೆ ಮತ್ತಿತರ ಐತಿಹಾಸಿಕ ಸ್ಥಳ, ಬ್ಯಾಂಕ್, ಪೋಸ್ಟ್ ಆಫೀಸ್, ಮುರುಘಾ ಮಠ ಸಹಿತ ಧಾರ್ಮಿಕ ಸ್ಥಳ, ಬಸ್ ನಿಲ್ದಾಣ, ರೈಲು ನಿಲ್ದಾಣ ಸಹಿತ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳು, ವಾಣಿ ವಿಲಾಸ, ಗಾಯತ್ರಿ ಜಲಾಶಯ, ಕೋರ್ಟ್ ಕಚೇರಿಗಳು ಸಹಿತ ಜಿಲ್ಲೆಯ ಹಲವೆಡೆ ಪೊಲೀಸರ ನಿಗಾ ಹೆಚ್ಚಿಸಿದ್ದಾರೆ.

    ಮಂಗಳೂರಿನ ಸುದ್ದಿ ಪ್ರಚುರವಾಗುತ್ತಿದ್ದಂತೆ, ಪೊಲೀಸ್ ಅಧಿಕಾರಿಗಳೊಂದಿಗೂ ಪ್ರತ್ಯೇಕ ಸಮಾಲೋಚನೆ ನಡೆಸಿದ ಎಸ್ಪಿ ಡಾ.ಕೆ.ಅರುಣ್, ಸೂಕ್ತ ಬಂದೋಬಸ್ತ್‌ಗೆ ಆದೇಶಿಸಿದ್ದಾರೆ.

    ಈಗಾಗಲೇ ಬಾಂಬ್ ಪತ್ತೆ ದಳ, ಎಎಸ್‌ಸಿ ಟೀಮ್, ಶ್ವಾನದಳ, ಕ್ಯೂರ್‌ಟಿ ಸಿಬ್ಬಂದಿಯನ್ನು ಅಲರ್ಟ್ ಮಾಡುವುದರೊಂದಿಗೆ ಪ್ರಮುಖ ಸ್ಥಳಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ. ರೈಲು ನಿಲ್ದಾಣದಲ್ಲಿ ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ಜತೆ ಸ್ಥಳೀಯ ಪೊಲೀಸರು ಕೈ ಜೋಡಿಸಿದ್ದಾರೆ.

    40ಕ್ಕೂ ಹೆಚ್ಚು ಚೆಕ್‌ಪೋಸ್ಟ್: ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಕನಿಷ್ಠ 2, ಜಿಲ್ಲಾದ್ಯಂತ ಒಟ್ಟು 40ಕ್ಕೂ ಚೆಕ್‌ಪೋಸ್ಟ್‌ಗಳನ್ನು ತಕ್ಷಣ ಆರಂಭಿಸುವಂತೆ ಎಸ್ಪಿ ಪೊಲೀಸರಿಗೆ ಸೂಚಿಸಿದ್ದಾರೆ. ಯಾವುದೇ ಅನುಮಾನಸ್ಪದ ವ್ಯಕ್ತಿ, ವಸ್ತು ಕಂಡು ಬಂದರೆ ಕೂಡಲೇ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ. ದೂರವಾಣಿ ಸಂಖ್ಯೆ 08194-222782, ಮೊಬೈಲ್ ಸಂಖ್ಯೆ 9480803100 ಗೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಎಸ್ಪಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts