More

    ನವೋದಯ ವಿದ್ಯಾರ್ಥಿಗಳಿಗೆ ತವರು ಭಾಗ್ಯ

    ಚಿತ್ರದುರ್ಗ: ಲಾಕ್‌ಡೌನ್ ಘೋಷಣೆಯಿಂದಾಗಿ ಅನಿರೀಕ್ಷಿತವಾಗಿ ಪ್ರಯಾಣ ಸ್ಥಗಿತಗೊಳಿಸಿ ಮಧ್ಯಪ್ರದೇಶದ ಇಂದೋರು ಬಳಿಯ ಚಂದ್ರ ಶೇಖರ ಡ್ಯಾಂ ಜವಾಹರ ನವೋದಯ ವಿದ್ಯಾಲಯದಲ್ಲಿ 40ಕ್ಕೂ ಹೆಚ್ಚು ದಿನಗಳಿಂದ ಉಳಿದಿರುವ ಚಿತ್ರದುರ್ಗ ಜಿಲ್ಲೆ 23 ವಿದ್ಯಾರ್ಥಿಗಳಿಗೆ ತವರು ಜಿಲ್ಲೆಗೆ ಮರುಳುವ ಭಾಗ್ಯ ಸಿಕ್ಕಿದೆ.

    ಎಜುಕೇಷನ್ ಆ್ಯಂಡ್ ಕಲ್ಚರಲ್ ಎಕ್ಸಚೆಂಜ್ ಕಾರ್ಯಕ್ರಮದಡಿ ಒಂದು ವರ್ಷದ ಹಿಂದೆ ಇಂದೋರಿಗೆ ತೆರಳಿದ್ದ ಹಿರಿಯೂರು ತಾಲೂಕು ಉಡುವಳ್ಳಿ ನವೋದಯ ವಿದ್ಯಾಲಯ 23 ವಿದ್ಯಾರ್ಥಿಗಳನ್ನು ಚಿತ್ರದುರ್ಗಕ್ಕೆ ಕಳಿಸಲು ಮಾ.22ರಂದು ರೈಲ್ವೆ ಟಿಕೆಟ್ ಬುಕ್ ಆಗಿತ್ತು.

    ಆದರೆ, ಅಂದು ಪ್ರಧಾನಿ ಜನತಾ ಕರ್ಪ್ಯೂ ಹಾಗೂ ಮಾ.24ರಿಂದ ಲಾಕ್‌ಡೋನ್ ಘೋಷಿಸಿದ್ದರಿಂದಾಗಿ ಆ ಎಲ್ಲ ವಿದ್ಯಾರ್ಥಿಗಳು ಈವರೆಗೂ ಅಲ್ಲಿಯೇ ಉಳಿಯವಂತಾಗಿದ್ದು, ಸಂಸದ ಎ.ನಾರಾಯಣಸ್ವಾಮಿ ವಿದ್ಯಾರ್ಥಿಗಳನ್ನು ಕರೆತರಲು ನಡೆಸಿದ್ದ ಪ್ರಯತ್ನವೂ ವಿಫಲವಾಗಿತ್ತು.

    ವಿದ್ಯಾರ್ಥಿಗಳನ್ನು ಹಿಂದಕ್ಕೆ ಕರೆತರುವ ಸಂಬಂಧ ಮಧ್ಯಪ್ರದೇಶ ಸರ್ಕಾರ ಒಪ್ಪಿಗೆ ಕೊಟ್ಟಿದ್ದು, ಜಿಲ್ಲಾಡಳಿತದೊಂದಿಗೆ ಮಾತನಾಡುವುದಾಗಿ ಸಂಸದರು ತಿಳಿಸಿದ್ದಾರೆ.

    ಏನತ್ಮಧ್ಯೆ ವಿದ್ಯಾರ್ಥಿಗಳನ್ನು ಕರೆ ತರಲು ಅನುಮತಿ ಕೊಡಲಾಗಿದೆ, ಮಧ್ಯಪ್ರದೇಶಕ್ಕೆ ಇಲ್ಲಿಂದಲೇ ಕೆಎಸ್ ಆರ್‌ಟಿಸಿ ಬಸ್ ತೆರಳಲಿದೆ ಎಂದು ಡಿಸಿ ಆರ್.ವಿನೋತ್ ಪ್ರಿಯಾ ವಿಜಯವಾಣಿಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts