More

    ಕೌಶಲ ಹೆಚ್ಚಿಸಿಕೊಂಡರೆ ಆತ್ಮವಿಶ್ವಾಸ ವೃದ್ಧಿ

    ಶಿವಮೊಗ್ಗ: ಶಿಕ್ಷಣ ಪಡೆಯುವುದರಿಂದ ಉತ್ತಮ ಭವಿಷ್ಯ ನಿರ್ಮಾಣ ಸಾಧ್ಯ. ಹೀಗಾಗಿ ವಿದ್ಯಾರ್ಥಿಗಳು ಅಧ್ಯಯನದಲ್ಲಿ ಒಳ್ಳೆಯ ಸಾಧನೆ ಮಾಡಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ವಿಷ್ಣುಮೂರ್ತಿ ಅಭಿಪ್ರಾಯಪಟ್ಟರು.

    ನಗರದ ಎಟಿಎನ್‌ಸಿ ಕಾಲೇಜಿನಲ್ಲಿ ಆಯೋಜಿಸಿದ್ದ ಆಚಾರ್ಯ ಅದ್ವಿತೀಯ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದ ಅವರು, ಸ್ಪರ್ಧೆಗಳಲ್ಲಿ ಸೋಲು-ಗೆಲುವು ಸಾಮಾನ್ಯ. ಬಹುಮಾನ ದೊರೆಯಲಿಲ್ಲ ಎಂದು ಬೇಸರ ಮಾಡಿಕೊಳ್ಳಬಾರದು. ಕೌಶಲ ಹೆಚ್ಚಿಸಿಕೊಳ್ಳುವ ಜತೆಗೆ ಮುಂದಿನ ಹಂತಗಳಲ್ಲಿ ಸಾಧನೆ ಮಾಡಲು ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬೇಕು ಎಂದರು.
    ಕುವೆಂಪು ವಿವಿ ಕುಲಸಚಿವ (ಮೌಲ್ಯಮಾಪನ) ಪ್ರೊ. ಎಸ್.ಎಂ.ಗೋಪಿನಾಥ್ ಮಾತನಾಡಿ, ನಿರಾಸಕ್ತಿಯಿಂದ ಸ್ನೇಹ, ಸಂಬಂಧ, ಭಾವನೆಗಳು ಕಡಿಮೆಯಾಗುತ್ತದೆ. ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬಂತೆ ಪ್ರಾಪಂಚಿಕ ಜ್ಞಾನವೂ ಮುಖ್ಯ ಎಂದು ಹೇಳಿದರು.
    ಉದ್ಯಮಿ ನಿವೇದನ್ ನೆಂಪೆ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಏನು ಸಾಧನೆ ಮಾಡಬೇಕೆಂಬ ಬಗ್ಗೆ ಸ್ಪಷ್ಟ ಗುರಿ ಹೊಂದಿರಬೇಕು. ಹಂತ ಹಂತವಾಗಿ ಪ್ರಯತ್ನಿಸುವುದರಿಂದ ಗುರಿಯೆಡೆಗೆ ಸಾಗಬೇಕು. ಪರಿಶ್ರಮಕ್ಕೆ ತಕ್ಕ ಫಲ ಸಿಗುವುದರಲ್ಲಿ ಸಂಶಯ ಬೇಡ ಎಂದು ತಿಳಿಸಿದರು.
    ವೈದ್ಯ ಡಾ. ರಾಹುಲ್ ದೇವರಾಜ್ ಮಾತನಾಡಿ, ವಿದ್ಯಾರ್ಥಿಗಳು ಸಂಸ್ಕಾರಯುತ ಜೀವನಶೈಲಿ ರೂಢಿಸಿಕೊಳ್ಳಬೇಕು. ಪಾಲಕರು, ಹಿರಿಯರು ಹಾಗೂ ದೇಶದ ಗೌರವ ಕಾಪಾಡುವಂತೆ ಬದುಕು ಕಟ್ಟಿಕೊಳ್ಳಬೇಕು. ನಿಮ್ಮ ಆಯ್ಕೆಯ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
    ಎನ್‌ಇಎಸ್ ನಿರ್ದೇಶಕ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಪ್ರಾಚಾರ್ಯೆ ಪ್ರೊ.ಪಿ.ಆರ್.ಮಮತಾ ಮಾತನಾಡಿದರು. ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಸ್.ಎಸ್.ವಾಗೀಶ್, ಉದ್ಯಮಿ ಜಿ.ವಿಜಯಕುಮಾರ್, ಉಪನ್ಯಾಸಕರಾದ ಪ್ರೊ. ಎಸ್.ಜಗದೀಶ್, ಪ್ರೊ. ಕೆ.ಎಂ.ನಾಗರಾಜು, ಪ್ರೊ. ಎನ್.ಮಂಜುನಾಥ್, ಪ್ರೊ. ಜಿ.ರವಿಕುಮಾರ್, ಪ್ರೊ. ಕೆ.ವಿ.ಗಿರಿಧರ್ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts