More

    ಸಮಸ್ಯೆ ಅರಿಯಲು ಶಿಕ್ಷಕರ ನಿಯೋಜನೆ

    ಚಿತ್ರದುರ್ಗ: ಲಾಕ್‌ಡೌನ್ ವೇಳೆ ಸಾರ್ವಜನಿಕರ ಕುಂದು ಕೊರತೆ ಆಲಿಸಲು ಹಾಗೂ ಪರಿಹಾರ ಕಲ್ಪಿಸಲು ಜಿಲ್ಲಾಡಳಿತ ಪ್ರತಿ ತಾಲೂಕಿಗೆ 200-250 ಶಿಕ್ಷಕರನ್ನು ನೇಮಿಸಿದೆ.

    ಕಂದಾಯ ಗ್ರಾಮ, ನಗರ ಪ್ರದೇಶದ ವಾರ್ಡ್‌ಗಳಲ್ಲಿ ಆಹಾರ ಪದಾರ್ಥ ವಿತರಣೆ, ಕುಡಿಯುವ ನೀರು ಸರಬರಾಜು ಹಾಗೂ ವೈದ್ಯಕೀಯ ಸೇವೆಗಳು, ರೈತರ ಸಮಸ್ಯೆ ಇತ್ಯಾದಿ ದೂರುಗಳನ್ನು ಸ್ವೀಕರಿಸಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ರವಾನಿಸುತ್ತಾರೆ.

    ಸಕ್ಕರೆ ಕಾಯಿಲೆ, ಅಸ್ತಮಾ, ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಸರ್ಕಾರ ನೀಡುವ ಉಚಿತ ಔಷಧ ವಿತರಣೆ ಮೊದಲಾದ ಹಲವು ಕುಂದು ಕೊರತೆಗಳನ್ನು ಸ್ವೀಕರಿಸಿ ಪರಿಹಾರ ಒದಗಿಸಲಿದ್ದಾರೆ.

    ಇದರೊಂದಿಗೆ ಕೋವಿಡ್-19 ಹರಡುವಿಕೆ ನಿಯಂತ್ರಣ ಹಾಗೂ ರೋಗ ಲಕ್ಷಣಗಳ ಅರಿವು ಮೂಡಿಸುತ್ತಿದ್ದಾರೆ. ಗ್ರಾಮ ಅಥವಾ ವಾರ್ಡ್‌ಗಳಲ್ಲಿ ಸಭೆ, ಸಮಾರಂಭಗಳಾಗದಂತೆ ಎಚ್ಚರ ವಹಿಸುತ್ತಿದ್ದಾರೆ. ಇದೇ ವೇಳೆ ಶಿಕ್ಷಕರು ತಮ್ಮ ವ್ಯಾಪ್ತಿ ಪ್ರದೇಶದ ವಿದ್ಯಾರ್ಥಿಗಳಿಗೆ 21 ದಿನದ ಬಿಸಿಯೂಟದ ಆಹಾರ ಸಾಮಗ್ರಿ ತಲುಪಿಸುತ್ತಿದ್ದಾರೆ ಎಂದು ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts