More

    ಕೋಟೆಗೆ ಬೇಕು ಭೂಪಟದಲ್ಲಿ ಸ್ಥಾನ

    ಚಿತ್ರದುರ್ಗ: ವೀರಗಲ್ಲು,ಶಾಸನ ಮತ್ತಿತರ ಐತಿಹಾಸಿಕ ಸ್ಮಾರಗಳ ಸಂರಕ್ಷಣೆಯ ಜಾಗೃತಿ ಪ್ರತಿಯೊಬ್ಬರಲ್ಲೂ ಮೂಡಬೇಕೆಂದು ಪುರಾತತ್ವ ಸಂಗ್ರಹಾಲಯ, ಪರಂಪರೆ ಇಲಾಖೆ ಸಹಾಯಕ ನಿರ್ದೇಶಕ ಪ್ರಹ್ಲಾದ್ ಹೇಳಿದರು.

    ಮಹಾತ್ಮಗಾಂಧೀಜಿ 150ನೇ ಜಯಂತಿ ಅಂಗವಾಗಿ ನೆಹರು ಯುವ ಕೇಂದ್ರ, ಪುರಾತತ್ವ ಸಂಗ್ರ ಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಮದಕರಿ ಯುವಕ ಸಂಘದ ಆಶ್ರಯದಲ್ಲಿ ನಗರದ ರಂಗಯ್ಯನಬಾಗಿಲು ಬಳಿ ಭಾನುವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಜಾಗೃತಿ ಮತ್ತು ಶ್ರಮದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಚಿತ್ರದುರ್ಗದಲ್ಲಿ ಅದ್ಭುತ ಕೋಟೆಯಿದೆ. ದೇಶ ವಿದೇಶಗಳಿಂದ ಇದನ್ನು ನೋಡಲು ಪ್ರವಾಸಿಗರು ಬರುತ್ತಾರೆ. ಆದರೂ ಇಲ್ಲಿ ಅಭಿ ವೃದ್ಧಿ ಆಗಿಲ್ಲ. ಮೂಲ ಸೌಲಭ್ಯಗಳ ಕೊರತೆಯಿಂದ ಕೋಟೆಯನ್ನು ಪ್ರವಾಸಿ ಭೂಪಟದಲ್ಲಿ ಸೇರಿಲ್ಲವೆಂದು ಬೇಸರಿಸಿದರು.

    ಜಿಲ್ಲೆಯಲ್ಲಿರುವ 850ಕ್ಕೂ ಹೆಚ್ಚು ಸ್ಮಾರಕ, ವೀರಗಲ್ಲು, ಶಾಸನಗಳ ರಕ್ಷಣೆಗೆ ಪಡೆ ಕಟ್ಟಬೇಕು. ಜತೆಗೆ ಜನರಲ್ಲಿ ಈ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

    ಆರ್.ಸತ್ಯಣ್ಣ, ಡಿ.ಗೋಪಾಲಸ್ವಾಮಿ, ರಾಜಮದಕರಿ ನಾಯಕ ಮಾತನಾಡಿದರು. ನೆಹರು ಯುವ ಕೇಂದ್ರದ ಯುವ ಸಮನ್ವಯಾಧಿಕಾರಿ ಎನ್.ಸುಹಾಸ್, ಕೂಬಾನಾಯ್ಕ, ಉಡುಸಾಲಪ್ಪ, ಭದ್ರಣ್ಣ, ಸೋಮಶೇಖರ್, ಮಾರುತಿ, ಪುನೀತ್ ಕುಮಾರ್, ಮನೋಜ್, ನಿಖಿಲ್, ವರುಣ್, ಪ್ರಜ್ವಲ್, ಕಾರ್ತಿಕ, ಕೃಷ್ಣ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts