More

    ಲಾಕ್‌ಡೌನ್ ಬಲೆಯೊಳಗೆ ಮೀನು ಕೃಷಿ

    ಚಿತ್ರದುರ್ಗ: ಲಾಕ್‌ಡೌನ್‌ನಿಂದ ರಾಜ್ಯದ ಒಳನಾಡು ಮತ್ಸೋದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಕೆರೆ ಹರಾಜು ಮೊತ್ತ ಸಂಗ್ರಹ ಇಲಾಖೆಗೆ ಸವಾಲಾಗಿದೆ. ಈ ಮಧ್ಯೆ ಮೀನು ಮಾರಾಟ ಪ್ರಮಾಣವೂ ಕುಸಿದು ಮೀನು ಕೃಷಿಕರು ಹಾಗೂ ಹರಾಜುದಾರರು ಆತಂಕಕ್ಕೀಡಾಗಿದ್ದಾರೆ.

    ಮೀನು ಸುಗ್ಗಿಯ ಈ ಅವಧಿಯಲ್ಲಿ ಲಾಕ್‌ಡೌನಿಂದ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ. ಸರ್ಕಾರ ಮಾಂಸ, ಮೀನು ಮಾರಾಟಕ್ಕೆ ಅನುಮತಿ ಕೊಟ್ಟಿದ್ದರೂ ಮೀನು ಖರೀದಿಸಿ ಮಾರಲು ವರ್ತಕರೇ ಹಿಂದೇಟು ಹೊಡೆಯುತ್ತಿದ್ದಾರೆ. ಮಾರಾಟಕ್ಕೆ ಹೆಚ್ಚಿನ ಸಮಯಾವಕಾಶ ಇಲ್ಲ ಎಂಬುದು ಇದಕ್ಕೆ ಕಾರಣ.

    ಮೀನು ಹಿಡಿಯಲು ಪರಸ್ಥಳಗಳಿಂದ ಮೀನುಗಾರರು ಬರಲು ಸಂಚಾರಕ್ಕೆ ಅವಕಾಶವಿಲ್ಲದ ಕಾರಣ ಶಿಕಾರಿ ಪ್ರಮಾಣವೂ ಕುಸಿದಿದೆ. ಹರಾಜಿನಲ್ಲಿ ಐದು ವರ್ಷ ಅವಧಿಗೆ ಕೆರೆಗಳನ್ನು ಪಡೆದವರು ಒಪ್ಪಂದದಂತೆ ಸಕಾಲಕ್ಕೆ ಹಣ ಪಾವತಿಸಿ ಅನುಮತಿ ನವೀಕರಿಸಿಕೊಳ್ಳಬೇಕಿದೆ. ಆದರೆ, ಕೋವಿಡ್-19ನಿಂದಾಗಿ ಹಣ ಪಾವತಿಸುವುದು ಕಷ್ಟವಾಗಿ ಹರಾಜುದಾರರಲ್ಲಿ ಆತಂಕ ಎದುರಾಗಿದೆ.

    ನಿಗದಿತ ಅವಧಿಯೊಳಗೆ ಹಣ ಪಾವತಿಸದಿದ್ದರೆ ಆದಾಯಕ್ಕೆ ಹೊಡೆತ ಬೀಳಬಹುದೆಂಬ ಆತಂಕ ಇಲಾಖೆಯಲ್ಲಿ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖೆ ನಿರ್ದೇಶನಾಲಯವೇ ಹಣ ಕಟ್ಟಿಸಿಕೊಳ್ಳುವ ಅವಧಿ ವಿಸ್ತರಣೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

    ಜಿಲ್ಲೆಯ 431 ಕೆರೆಗಳ ಪೈಕಿ 176 ದೊಡ್ಡವು. 152-ಗ್ರಾಪಂಗೆ ಸೇರಿವೆ. 100ಖಾಸಗಿ ಕೊಳ ಗಳಿವೆ. 3 ಜಲಾಶಯಗಳಿವೆ. 114 ಕೆರೆಗಳಲ್ಲಿ ಮಳೆಗಾಲ ವೇಳೆ 1.23 ಲಕ್ಷ ಮೀನುಮರಿ ಬಿತ್ತನೆ ಆಗಿತ್ತು. 130 ದೊಡ್ಡ ಕೆರೆಗಳಲ್ಲಿ 70 ಲಕ್ಷ ಹಾಗೂ 60 ಸಣ್ಣ ಕೆರೆಗಳಲ್ಲಿ 15.90 ಮೀನುಮರಿ ಬಿತ್ತನೆಯಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts