More

    ಆತಂಕ ತಂದ ಸೋಂಕಿತನ ಟ್ರಾವೆಲ್ ಹಿಸ್ಟರಿ

    ಚಿತ್ರದುರ್ಗ: ಚಳ್ಳಕೆರೆ ತಾಲೂಕು ಕೋಡಿಹಳ್ಳಿಯ ವ್ಯಕ್ತಿಯಲ್ಲಿ (ಪಿ-994) ಕರೊನಾ ಸೋಂಕು ದೃಢವಾಗುತ್ತಿದ್ದಂತೆ, ಆತನ ಟ್ರಾವೆಲ್ ಹಿಸ್ಟರಿ ಜಿಲ್ಲಾಡಳಿತ ಹಾಗೂ ಚಳ್ಳಕೆರೆ ತಾಲೂಕು ಆಸುಪಾಸು ಪ್ರದೇಶದ ಜನರ ಆತಂಕಕ್ಕೆ ಕಾರಣವಾಗಿದೆ.

    ಸೋಂಕಿತ ವ್ಯಕ್ತಿ ಕೋಡಿಹಳ್ಳಿಯಿಂದ 3 ಕಿ.ಮೀ. ದೂರದ ಚಿಕ್ಕೆಹಳ್ಳಿ ಬಂಧುಗಳ ಮನೆಗೆ ಹೋಗಿ ಬಂದಿದ್ದಾನೆ. ಆದ್ದರಿಂದ ಕೋಡಿಹಳ್ಳಿ, ಚಿಕ್ಕೇಹಳ್ಳಿ ಸೇರಿ 5 ಕಿ.ಮೀ. ವ್ಯಾಪ್ತಿಯನ್ನು ಕಂಟೈನ್‌ಮೆಂಟ್ ಜೋನ್ ಎಂದು ಗುರುತಿಸಿ ಸೀಲ್‌ಡೌನ್ ಮಾಡಲಾಗಿದೆ.

    ಜತೆಗೆ ಸೋಂಕಿತನ ಕುಟುಂಬ ಸದಸ್ಯರು ಪ್ರಯಾಣಿಸಿದ್ದ ಕಾರು ಚಾಲಕನ ಮಾಹಿತಿ ಜಿಲ್ಲಾಡಳಿತ ಸಂಗ್ರಹಿಸುತ್ತಿದೆ ಹಾಗೂ ತಮಿಳುನಾಡು ಅಥವಾ ಕರ್ನಾಟಕ ಸರ್ಕಾರದ ಅನುಮತಿ ಪಡೆಯದೇ ಕೋಡಿಹಳ್ಳಿಗೆ ಬಂದಿದ್ದಲ್ಲದೆ, ನಂತರದಲ್ಲೂ ಮಾಹಿತಿ ನೀಡಿರಲಿಲ್ಲ.

    ಜೈಲಿಗೆ ಹಾಕುವುದಿಲ್ಲ: ಅನ್ಯ ಸ್ಥಳಗಳಿಂದ ಬಂದವರ ಮಾಹಿತಿಯನ್ನು ಜನರು ತಿಳಿಸಬೇಕು. ಸರ್ಕಾರ ಯಾರನ್ನೂ ಜೈಲಿಗೆ ಹಾಕುವುದಿಲ್ಲ. ಪರಸ್ಥಳಗಳಿಂದ ಬಂದವರಾಗಲಿ ಅಥವಾ ಅಲ್ಲಿಯ ನಿವಾಸಿಗಳು ಮಾಹಿತಿ ತಿಳಿಸದಿದ್ದರೆ ಇಂಥ ಸನ್ನಿವೇಶದಲ್ಲಿ ಇಡೀ ಏರಿಯಾನೇ ಕಂಟೋನ್‌ಮೆಂಟ್ ಜೋನ್ ಆಗುತ್ತಿದೆ ಎಂದು ಡಿಸಿ ವಿನೋತ್ ಪ್ರಿಯಾ ಎಚ್ಚರಿಸಿದ್ದಾರೆ.

    ಸೋಂಕಿತನ ವಿರುದ್ಧ ಕಾನೂನು ಕ್ರಮ: ಚೆನ್ನೈನಿಂದ ಬಂದರೂ ಮಾಹಿತಿ ಕೊಡದೇ ಇದ್ದ ಕೋಡಿಹಳ್ಳಿಯ ಸೋಂಕಿತ ಹಾಗೂ ಆತನ ಮಾವನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೋಡಿಹಳ್ಳಿ ಹಾಗೂ ಚಿಕ್ಕೆಹಳ್ಳಿ ಗ್ರಾಮಗಳ ಪ್ರತಿ ಮನೆಗಳಲ್ಲೂ ಆರೋಗ್ಯ ಸಮೀಕ್ಷೆ ನಡೆಸಲಾಗುವುದು ಹಾಗೂ ಸೋಂಕಿತನ ಪ್ರಾಥಮಿಕ ಸಂಪರ್ಕ ಬಂದಿರುವ 46 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಸೋಂಕಿತನ ಓಡಾಟದ ಮಾಹಿತಿ: ಮೇ 5ರಂದು ಚೆನ್ನೈನಿಂದ ಹೊಸೂರು ಮಾರ್ಗ ಚಳ್ಳಕೆರೆ ತಾಲೂಕು ಕೋಡಿಹಳ್ಳಿಗೆ, 7ರಂದು ತಳಕು, ಬೇಡರೆಡ್ಡಿಹಳ್ಳಿ, ಹಿರೇಹಳ್ಳಿಗೆ ಹೋಗಿ ಗ್ರಾಮಕ್ಕೆ ಮರಳಿರುವುದು. 8ರಂದು ಮನ್ನೇಕೋಟೆ ಗ್ರಾಮಕ್ಕೆ ತೆರಳಿ ಕೋಡಿಹಳ್ಳಿಗೆ ಹಿಂತಿರುಗಿರುವುದು. 10ರಂದು ಕೋನಸಾಗರ, ನಾಗಸಮುದ್ರ, ಸಿದ್ದಾಪುರ, ಮಲ್ಲಾಪುರ (ರಾಯದುರ್ಗ) ಹಾಗೂ ತಳಕು ಮತ್ತು ಚಳ್ಳಕೆರೆಗೆ ಹೋಗಿ ಗ್ರಾಮಕ್ಕೆ ಹಿಂತಿರುಗಿರುವುದು.

    ಕೊಂಡ್ಲಹಳ್ಳಿ: ಕೋಡಿಹಳ್ಳಿಯಲ್ಲಿ ಪತ್ತೆಯಾದ ಸೋಂಕಿತರ ಸಂಬಂಧಿಕರು ಮೊಳಕಾಲ್ಮೂರು ತಾ.ಮೊಗಲಹಳ್ಳಿಯಲ್ಲಿ ನಡೆದ ಮದುವೆಗೆ ಬಂದಿದ್ದರು ಎಂಬ ಶಂಕೆ ಹಿನ್ನೆಲೆಯಲ್ಲಿ ತಹಸೀಲ್ದಾರ್ ಎಂ.ಬಸವರಾಜ್ ನೇತೃತ್ವದ ತಂಡ ಶನಿವಾರ ಭೇಟಿ ಮಾಹಿತಿ ಸಂಗ್ರಹಿಸಿತು.
    ಈ ವೇಳೆ ಬಿ.ಜಿ.ಕೆರೆ ಪಿಡಿಒ ಗುರುರಾಜ್ ಅವರಿಗೆ ದೂರವಾಣಿ ಕೆರೆ ಮಾಡಿದ ತಹಸೀಲ್ದಾರ್, ಗ್ರಾಮದಲ್ಲಿ ಸ್ವಚ್ಛತೆ ಬಗ್ಗೆ ಗಮನ ಹರಿಸುವಂತೆ ತಾಕೀತು ಮಾಡಿದರು.
    ವಿಎ ಉಮೇಶ್, ಬಿ.ಜಿ.ಕೆರೆ ಆರೋಗ್ಯ ಕೇಂದ್ರದ ಲೋಕೇಶ್ವರಪ್ಪ, ಚಂದ್ರಮತಿ, ಕುಮಾರ್, ಕೌಸಲ್ಯಾ, ಗ್ರಾಮ ಸಹಾಯಕರಾದ ನಾಗರಾಜ್, ಬೊಮ್ಮಣ್ಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts