More

    ಜೋಗಿಮಟ್ಟೀಲಿ ಸಾಂಬಾರ್ ಜಿಂಕೆ ಪ್ರತ್ಯಕ್ಷ

    ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ಕೋಟೆನಾಡಿನ ಬಯಲುಸೀಮೆ ಊಟಿ ಎಂದೇ ಪ್ರಸಿದ್ಧಿಯಾಗಿರುವ ಜೋಗಿಮಟ್ಟಿ ವನ್ಯಜೀವಿಧಾಮದಲ್ಲಿ ಸಾಂಬಾರ್ ಜಿಂಕೆ ಪತ್ತೆ ಆಗಿದೆ.

    38.8 ಚದರ ಮೈಲಿ (10048.97ಹೆ.) ವಿಸ್ತೀರ್ಣದ ಈ ಅರಣ್ಯದಲ್ಲಿರುವ ಅತ್ಯಮೂಲ್ಯ ಪ್ರಾಣಿ, ಪಕ್ಷಿ ಇತ್ಯಾದಿ ಜೀವ ಹಾಗೂ ಸಸ್ಯ ಸಂಕುಲಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 1940 ಜುಲೈ 8ರಂದು ಇದನ್ನು ಮೀಸಲು ಅರಣ್ಯವೆಂದು ಘೋಷಿಸಿ ಸಂರಕ್ಷಿಸಲಾಗುತ್ತಿದೆ.

    ನಂತರದಲ್ಲಿ ಈ ಪ್ರದೇಶ ಪರಿಸರ ಸೂಕ್ಷ್ಮತೆಯನ್ನು ಅರಿತು 2015 ಡಿಸೆಂಬರ್ 23ರಂದು ರಾಜ್ಯ ಸರ್ಕಾರ ವನ್ಯಜೀವಿಧಾಮವೆಂದು ಘೋಷಿಸಿತ್ತು.

    ಚಿರತೆ, ಕರಡಿ, ಕೃಷ್ಣಮೃಗ, ಬಾವಲಿ, ಕತ್ತೆ ಕಿರುಬ, ಮುಳ್ಳುಹಂದಿ, ತೋಳ, ನರಿ, ಕಾಡುಬೆಕ್ಕು, ಮುಂಗಸಿ, ಚುಕ್ಕೆ ಜಿಂಕೆ, ಕಾಡು ಹಂದಿ, ಕೊಂಡುಕುರಿ ಇತ್ಯಾದಿ 19ಕ್ಕೂ ಹೆಚ್ಚು ಪ್ರಮುಖ ಪ್ರಾಣಿಗಳು. ಕಿಂಗ್‌ಫಿಶರ್, ಬ್ಲೂ ಜಾಯ್, ಹಾಕ್, ಬ್ಲೂ ಫಿಜನ್, ನವಿಲು, ಬ್ಲೂ ಜಾಯ್, ಗ್ರೇ ಬಾಬ್ಲಾರ್, ಜಂಗಲ್ ಮೈನ್, ಇಂಡಿಯನ್ ರಾಬಿನ್ ಮೊದಲಾದ 35ಕ್ಕೂ ಅಧಿಕ ಪಕ್ಷಿಗಳು.

    ಹೆಬ್ಬಾವು, ಗಾರ್ಡನ್ ಲಿಜಾರ್ಡ್, ಕಾಳಿಂಗ ಸರ್ಪ, ರ‌್ಯಾಟ್ ಸ್ನೇಕ್ ಇತ್ಯಾದಿ 9ಕ್ಕೂ ಹೆಚ್ಚು ವಿಧದ ಸರಿಸೃಪಗಳು ಹಾಗೂ ಆಕರ್ಷಕ ಚಿಟ್ಟೆ ಮೊದಲಾದ ಪ್ರಾಣಿ,ಪಕ್ಷಿ ಹಾಗೂ ಸಸ್ಯ ಸಂಪತ್ತು ಇಲ್ಲಿದೆ. ಇತ್ತೀಚೆಗೆ (ಏಳೆಂಟು ದಿನಗಳ ಹಿಂದೆ) ಅರಣ್ಯಾಧಿಕಾರಿಗಳ ರಾತ್ರಿ ಸಂಚಾರದ ವೇಳೆ ಸಾಂಬಾರ್ ಜಿಂಕೆ ಕುಟುಂಬ ಕಂಡು ಬಂದಿದೆ.

    ಅದರಲ್ಲಿ ಒಂದು ಕ್ಯಾಮರಾಕ್ಕೆ ಸೆರೆ ಸಿಕ್ಕಿದೆ. ಕೆಲವು ಮರಿಗಳೊಂದಿಗೆ ಎರಡು ದೊಡ್ಡ ಸಾಂಬಾರ್ ಜಿಂಕೆಗಳು ಕಂಡು ಬಂದಿವೆ. ಇದರಿಂದಾಗಿ ವನ್ಯಜೀವಿಧಾಮವೆಂದು ಘೋಷಣೆಯಾದ ನಾಲ್ಕು ವರ್ಷಗಳಲ್ಲಿ ಜೋಗಿಮಟ್ಟಿ ಅಪರೂಪದ ಪ್ರಾಣಿ, ಪಕ್ಷಿಗಳ ಅವಾಸ ಸ್ಥಾನವಾಗಿ ಅಭಿವೃದ್ಧಿ ಆಗುತ್ತಿರುವ ಭರವಸೆ ಮೂಡಿಸಿದೆ.

    ಡಿಸಿಎಫ್ ಚಂದ್ರಶೇಖರ್ ನಾಯಕ್ ಹೇಳಿಕೆ: ಈ ಮೊದಲು ಸಾಂಬಾರ್ ಜಿಂಕೆ ಜೋಗಿಮಟ್ಟಿ ಅರಣ್ಯದಲ್ಲಿ ಕಂಡು ಬಂದಿರಲಿಲ್ಲ,ಇತ್ತೀಚೆಗೆ ನಮ್ಮ ಅಧಿಕಾರಿಯೊಬ್ಬರಿಗೆ ಮರಿ ಗಳೊಂದಿಗೆ ಇದ್ದ ಎರಡು ಸಾಂಬರ್ ಜಿಂಕೆಗಳು ಬಂದಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts