More

    ಗುರು ಶಿಷ್ಯ ಪರಂಪರೆ ಅಮೂಲ್ಯ

    ಚಿತ್ರದುರ್ಗ: ಗುರು ಶಿಷ್ಯ ಪರಂಪರೆ ಅತ್ಯಮೂಲ್ಯವೆಂದು ಮೊಳಕಾಲ್ಮೂರು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪ ಪ್ರಾಚಾರ್ಯ ಎಸ್.ಸುರೇಂದ್ರನಾಥ್ ಹೇಳಿದರು.

    ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಮಾರಘಟ್ಟ, ಗೂಳಯ್ಯನಹಟ್ಟಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಳೇ ವಿದ್ಯಾರ್ಥಿಗಳ ಸಮ್ಮಿಲನ ಮತ್ತು ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ವೃತಿಯನ್ನು ಸೇವೆ ಎಂದು ಭಾವಿಸಿದಾಗ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ತಪ್ಪು ಸಾಮಾನ್ಯ. ಆದರೆ, ಅದನ್ನು ತಿದ್ದಿಕೊಂಡು ಮುಂದೆ ಸಾಗಬೇಕು ಎಂದು ಕಿವಿಮಾತು ಹೇಳಿದರು.

    ವಸತಿ ಶಾಲೆ ಹಳೆ ವಿದ್ಯಾರ್ಥಿಗಳಿಂದು ಸಮಾಜದ ನಾನಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳಿಂದ ಮತ್ತೆ ಹಳೆಯ ಸ್ನೇಹಿತರು ಒಂದಾಗಿ ಒಬ್ಬರಿಗೊಬ್ಬರು ಮಾರ್ಗದರ್ಶನ, ಸಹಕಾರ ನೀಡಲು ಸಹಾಯವಾಗುತ್ತದೆ ಎಂದರು.

    ಹಳೆ ವಿದ್ಯಾರ್ಥಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ದಿನೇಶ್ ಮಾತನಾಡಿ, ನಮ್ಮ ಗುರುಗಳು ಕಲಿಸಿದ ಪಾಠ, ಆತ್ಮವಿಶ್ವಾಸದಿಂದ ನಾನಿಂದು ಈ ಮಟ್ಟಕ್ಕೆ ಬರಲು ಸಾಧ್ಯವಾಯಿತು. ಮೂಲ ಸೌಕರ್ಯ ಕಡಿಮೆ ಇದ್ದರು ಶಿಕ್ಷಕರು ಪಾಠದ ಜತೆ ಜೀವನ ಮೌಲ್ಯಗಳನ್ನು ಹೇಳಿಕೊಟ್ಟರು. ಅಂದು ಕಲಿತ ಕನ್ನಡ ಕೆಎಎಸ್ ಪರೀಕ್ಷೆಗೆ ಸಹಕಾರಿಯಾಯಿತು ಎಂದು ತಿಳಿಸಿದರು.

    ಹಾವೇರಿ ಜಿಲ್ಲೆ ಬಿಇಒ ಎಚ್.ಶ್ರೀನಿವಾಸ್, ಹೊಳಲ್ಕೆರೆ ತಾಲೂಕು ದೈಹಿಕ ಶಿಕ್ಷಣ ನಿರ್ದೇಶಕ ರಾಜಪ್ಪ, ಹಿಂದಿ ಭಾಷಾ ನೋಡಲ್ ಅಧಿಕಾರಿ ಎಸ್.ಬಿ.ಮಹಾಲಿಂಗಪ್ಪ, ವಿಸ್ತರಣಾಧಿಕಾರಿ ಎನ್.ಆರ್.ಶೇಖರ್, ಶಿಕ್ಷಕರಾದ ಮೇನಕಾ, ವಿಮಲಾ, ನಾಗರಾಜ, ಪ್ರಶಾಂತ, ರಾಜೇಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts