More

    ಜನರ ಆರೋಗ್ಯ ಕಂಪನಿ ಕಾಳಜಿ

    ಚಿತ್ರದುರ್ಗ: ಸಮುದಾಯದ ಉತ್ತಮ ಆರೋಗ್ಯ, ಶಿಕ್ಷಣ ಸೇರಿ ಮೂಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ವೇದಾಂತ ಕಂಪನಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಸಂಸ್ಥೆ ಸಿಇಒ ಸೌವಿಕ್ ಮಜುಮದಾರ್ ಹೇಳಿದರು.

    ವೇದಾಂತ ಕಂಪನಿ ಕರ್ನಾಟಕ ಕಬ್ಬಿಣ ಅದಿರು ವಿಭಾಗದಿಂದ ಹಿರೆಗುಂಟನೂರು ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 20ನೇ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.

    ರಕ್ತದೊತ್ತಡ, ಇಸಿಜಿ, ಇಕೊ ಕಾರ್ಡಿಯೋಗ್ರಾಫ್, ಆಹಾರ ಕ್ರಮಗಳ ಕುರಿತು ತಜ್ಞರು ನೀಡಿದ ಸೂಚನೆ ತಪ್ಪದೆ ಪಾಲಿಸಬೇಕು. ಸಂಸ್ಥೆ ಹೊಂದಿರುವ ಸಂಚಾರ ಆರೋಗ್ಯ ಕೇಂದ್ರದ ಮೂಲಕ ಪ್ರತಿ ತಿಂಗಳು ನಾನಾ ಗ್ರಾಮಗಳ ಗ್ರಾಮಸ್ಥರಿಗೆ ಅವರ ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಸಲಾಗುವುದು ಎಂದರು.

    ಸಂಸ್ಥೆ ನಿರ್ದೇಶಕ ಕೃಷ್ಣರೆಡ್ಡಿ ಮಾತನಾಡಿ, ಜಿಲ್ಲೆ ಜನರ ಸಾಮಾಜಿ ಹಾಗೂ ಆರ್ಥಿಕ ಸದೃಢತೆಗೆ ಕಂಪನಿ ಕಾಳಜಿ ಹೊಂದಿದೆ. ಕುಗ್ರಾಮಗಳಲ್ಲೂ ಆರೋಗ್ಯ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

    ಬೆಂಗಳೂರಿನ ಸಾಗರ್ ಆಸ್ಪತ್ರೆ ಹಾಗೂ ಮೈರಾಡ ಸ್ವಯಂ ಸೇವಾ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಸಾವಿರಕ್ಕೂ ಹೆಚ್ಚು ಮಂದಿಗೆ ಹೃದಯ ಆರೋಗ್ಯ ತಪಾಸಣೆ ನಡೆಸಲಾಯಿತು. ಹೃದಯದ ಆರೋಗ್ಯ ಕುರಿತಂತೆ ತಜ್ಞರು ನಾಗರಿಕರಲ್ಲಿ ಜಾಗೃತಿ ಮೂಡಿಸಿದರು.

    ಹಿರೇಗುಂಟನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪರಮೇಶ್ವರಪ್ಪ, ಸಾಗರ್ ಆಸ್ಪತ್ರೆ ವೈದ್ಯ ಡಾ.ಕುಮಾರ್, ಡಾ.ಕೃಷ್ಣಮೂರ್ತಿ, ಐಒಕೆ ಅಧಿಕಾರಿ ರವಿನಾಯಕ ಮತ್ತಿತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts