More

    ಶ್ರೀಗಳಿಗೆ ಸದ್ಗುರು, ವಾಲ್ಮೀಕಿ ವಜ್ರ ಪ್ರಶಸ್ತಿ ಪ್ರದಾನ

    ಚಿತ್ರದುರ್ಗ: ತಾಲೂಕಿನ ಬೆಳಗಟ್ಟ ಗ್ರಾಮದ ಶ್ರೀ ಗುರು ಕರಿಬಸವೇಶ್ವರಜ್ಜಯ್ಯ ಸ್ವಾಮಿ ಮಠದಲ್ಲಿ ಶಿವರಾತ್ರಿ ದಿನದಂದು ಆರಂಭವಾಗಿ ಮಾ.1 ರವರೆಗೆ ನಡೆಯುವ ಮಹಾಶಿವರಾತ್ರಿ ಮಹೋತ್ಸವ ಮಂಗಳವಾರದಂದು ನಡೆದ 19ನೇ ಮಹಾರಥೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀ ಕಬೀರಾನಂದಾಶ್ರಮದ ಶಿವಲಿಂಗನಾನಂದ ಸ್ವಾಮೀಜಿಗೆ ಸಮನ್ವಯ ಸದ್ಗುರು ಹಾಗೂ ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಅವರಿಗೆ ವಾಲ್ಮೀಕಿ ವಜ್ರ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

    ಈ ವೇಳೆ ಮಾತನಾಡಿದ ಶಿವಲಿಂಗಾನಂದ ಶ್ರೀಗಳು,ಯಾವುದೇ ಜಾತಿ, ಲಿಂಗ ತಾರತಮ್ಯವಿಲ್ಲದೆ ಎಲ್ಲರೂ ಸೇರಿ ಸಮನ್ವಯವಾದರೆ ಬದುಕು ಆನಂದಮಯವಾಗಿರುತ್ತದೆ. ಸ್ವಲ್ಪ ವಿಷಮವಾದರೂ ವಿಷಕಾರಿಯಾಗುತ್ತದೆ. ಹಾಗಾಗಿ ಎಲ್ಲರ ಭಾವನೆಗಳು ಒಂದು ಗೂಡ ಬೇಕೆಂದರು.

    ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ಭಾರತ ವಿಶ್ವದಲ್ಲೇ ಪವಿತ್ರ ಪುಣ್ಯಭೂಮಿ. ಇಡೀ ವಿಶ್ವಕ್ಕೆ ಸಂದೇಶ ಮಾರ್ಗದರ್ಶನ ನೀಡಿದ ದೇಶ ನಮ್ಮದು. ಬಸವಾದಿ ಶಿವಶರಣರು, ಸಾಧು-ಸಂತರು,ದಾರ್ಶನಿಕರಿಗೆ ಜನ್ಮ ಕೊಟ್ಟಿದೆ ಭಾರತ. ಹುಟ್ಟು-ಸಾವಿನ ನಡುವೆ ಮಾನವನ ಬದುಕು ಸಾರ್ಥಕವಾಗ ಬೇಕೆಂದರು.

    ಸಮಾರಂಭ ಉದ್ಘಾಟಿಸಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿದರು.ಗ್ರಾ.ಪಂ.ಅಧ್ಯಕ್ಷೆ ಚಿತ್ರಮ್ಮ,ಪ್ರಮುಖರಾದ ಎಸ್.ಎನ್.ಕಾಶಿ ವಿಶ್ವನಾಥ ಶ್ರೇಷ್ಠಿ, ಪಿ.ಎಸ್. ನಾಗರಾಜಶೆಟ್ಟಿ, ವಿ.ಎಲ್.ಪ್ರಶಾಂತ್,ಯುಗಧರ್ಮ ರಾಮಣ್ಣ, ಅನುಸೂಯ ಬಿ.ಟಿ.ಸಿದ್ದೇಶ್, ನೆಲ್ಲಿಕಟ್ಟೆ ಎಸ್.ಸಿದ್ದೇಶ್,ಸೋಮೇಂದ್ರ ಇದ್ದರು. ಪಿಎಚ್‌ಡಿ ಪದವಿ ಪಡೆದ ಡಾ.ಆಶಾ ಬೆಳಗಟ್ಟ,ಕೆಎಎಸ್ ಪರೀಕ್ಷೆ ಉತ್ತೀರ್ಣ ಟಿ.ಎಸ್.ವಿಷ್ಣುವರ್ಧನ್ ರೆಡ್ಡಿ ಹಾಗೂ ಬೆಳಗಟ್ಟದ ಮಾರುತಿ ಪ್ರೌಢಶಾಲೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts