More

    ಮಕ್ಕಳ ಆರೋಗ್ಯದತ್ತ ಕಾಳಜಿ ವಹಿಸಿ

    ಚಿತ್ರದುರ್ಗ: ಮಕ್ಕಳ ಆರೋಗ್ಯ ಕುರಿತು ಶಿಕ್ಷಕರು, ಪಾಲಕರು ಕಾಳಜಿ ವಹಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.

    ನಗರದ ಸರ್ಕಾರಿ ಉರ್ದು ಮಾದರಿ ಶಾಲೆ ಮತ್ತು ಮೌಲಾನ ಆಜಾದ್ ಸರ್ಕಾರಿ ಅಲ್ಪಸಂಖ್ಯಾತರ ಶಾಲೆ ವಿದ್ಯಾರ್ಥಿಗಳಿಗೆ ಸೋಮವಾರ ಏರ್ಪಡಿಸಿದ್ದ ರಕ್ತದ ಗುಂಪಿನ ತಪಾಸಣಾ ಶಿಬಿರದಲ್ಲಿ ಮಾತನಾಡಿ, ಮೊದಲ ಹಂತದಲ್ಲಿ ತಾಲೂಕಿನ ಒಟ್ಟು 12 ಸಾವಿರ ಮಕ್ಕಳ ರಕ್ತದ ಗುಂಪಿನ ಪರೀಕ್ಷೆಯನ್ನು ನಡೆಸಲಾಗುವುದು.

    ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಮಾ.2ರಿಂದ 12ರ ವರೆಗೆ ರಾಷ್ಟ್ರೀಯ ಬಾಲಸ್ವಾಸ್ಥ್ಯಕಾರ್ಯಕ್ರಮದಡಿ ಮಕ್ಕಳ ಆರೋಗ್ಯ ತಪಾಸಣೆ ಆಯೋಜಿಸಲಾಗಿದೆ ಎಂದು

    102 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ತಪಾಸಣೆ ನಡೆಯಲಿದ್ದು,ಇದಕ್ಕಾಗಿ 8 ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದಲ್ಲಿ 1 ಪ್ರಯೋಗಶಾಲಾ ತಂತ್ರಜ್ಞರು,1 ಶುಶ್ರೂಷಕರು, 1 ವೈದ್ಯಾಧಿಕಾರಿಯಂತೆ ಕಾರ್ಯಕ್ರಮಕ್ಕೆ ನಿಯೋಜಿಸಲಾಗಿದ್ದು,ಸ್ವಾಸ್ಥ್ಯಕಿರಣ ತಂತ್ರಾಂಶದಲ್ಲಿ ದತ್ತಾಂಶ ಸಂಗ್ರಹಿಸಲಾಗುವುದು ಎಂದರು.

    ಶಿಕ್ಷಣ ಇಲಾಖೆ ಬಿ.ಆರ್.ಸಿ.ಈಶ್ವರಪ್ಪ ಮಾತನಾಡಿದರು. ನಗರದ ವಿವಿಧ ಶಾಲೆಗಳ ಒಟ್ಟು 1251 ಮಕ್ಕಳ ರಕ್ತದ ಗುಂಪಿನ ಪರೀಕ್ಷೆ ನಡೆಸಲಾಯಿತು.

    ತಾಲೂಕು ಆರೋಗ್ಯ ಶಿಕ್ಚಣಾಧಿಕಾರಿ ಎನ್.ಎಸ್.ಮಂಜುನಾಥ, ಬಿ.ಜಾನಕಿ, ಡಾ.ಮಹೇಂದ್ರ, ಡಾ.ಸುಪ್ರಿತಾ, ಡಾ.ವಾಣಿ, ಪ್ರಯೋಗಶಾಲ ತಂತ್ರಜ್ಞರಾದ ತಿಪ್ಪೇಸ್ವಾಮಿ, ರಾಘವೇಂದ್ರ ಸಿಂಗ್, ಮೀನಾಕ್ಷಿ, ಅಲಿ, ರಮೇಶ್ ನಾಯ್ಕ ಇಸಿಒ ಇನಾಯತ್, ಮುಖ್ಯಶಿಕ್ಷಕಿ ಫಿರ್ದೋಶ್ ಜರಿಯ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts