More

    ಜಿಲ್ಲಾಸ್ಪತ್ರೆ ಆವರಣದಲ್ಲಿ ಫ್ಲೂ ಕಾರ್ನರ್ ಸ್ಥಾಪನೆ

    ಚಿತ್ರದುರ್ಗ: ಜಿಲ್ಲಾಸ್ಪತ್ರೆ ಆವರಣದಲ್ಲಿ ಶನಿವಾರ ಫ್ಲೂ-ಕಾರ್ನರ್ ಆರಂಭಿಸಲಾಗಿದೆ. ಇದಕ್ಕಾಗಿ ಹಲವು ತಜ್ಞ ವೈದ್ಯರು, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

    ಸಾಮಾನ್ಯ ಶೀತ, ನೆಗಡಿ, ಕೆಮ್ಮು, ಜ್ವರವೆಂದು ಆಸ್ಪತ್ರೆಗೆ ಬರುವಂಥ ರೋಗಿಗಳ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಅವರ ವಾಸದ ವಿವರ, ಟ್ರಾವೆಲ್ ಹಿಸ್ಟರಿ ಸಂಗ್ರಹಿಸಲಾಗುತ್ತದೆ.

    ಕರೊನಾ ಸೋಂಕಿನ ಶಂಕೆ ಇದ್ದರೆ ಅಂಥವರನ್ನು ಕೂಡಲೇ ಐಸೋಲೇಶನ್ ವಾರ್ಡ್‌ಗೆ ದಾಖಲಿಸಲಾಗುತ್ತದೆ. ಸಾಮಾನ್ಯ ಜ್ವರ ಇತ್ಯಾದಿಗಳಿದ್ದಲ್ಲಿ ಚಿಕಿತ್ಸೆ ನೀಡಿ ಮನೆಗೆ ಕಳಿಸಲಾಗುವುದು ಎಂದು ಡಾ.ಜೆ.ಡಿ.ವೆಂಕಟೇಶ್ ಹೇಳಿದರು.

    ಜಿಲ್ಲಾ ಕ್ಷಯ ರೋಗ ನಿಯಂತ್ರ ಣಾಧಿಕಾರಿ ಡಾ.ಚಂದ್ರಶೇಖರ್, ಡಾ.ಶಿಲ್ಪಾ ಮತ್ತಿತರ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಇದ್ದರು.

    ಏಪ್ರಿಲ್ 9ರ ವರೆಗೆ ಕಾರ್ಯನಿರ್ವಹಣೆ: ಡಾ.ಜೆ.ಡಿ.ವೆಂಕಟೇಶ್, ಡಾ.ಎಸ್.ಪಿ.ದಿನೇಶ್, ಡಾ.ಎಸ್.ಎಂ.ಶ್ರೀಧರ್, ಡಾ.ಪಿ.ಎಚ್.ಜಯರಾಮ್, ಡಾ.ಈ.ಸತೀಶ್, ಡಾ.ಡಿ.ಪ್ರಕಾಶ್, ಡಾ.ಜಿ.ಎನ್.ದೇವರಾಜ್, ಡಾ.ಕೆ.ಆರ್.ರಂಗೇಗೌಡ, ಡಾ.ಕೆ.ಶಿವಕುಮಾರ್, ಡಾ.ಬಿ.ವೈ.ರೂಪಶ್ರೀ, ಡಾ.ಮಲ್ಲಪ್ಪ, ಡಾ.ಬಿ.ಎನ್.ರವಿಕುಮಾರ್, ಡಾ.ಲಕ್ಷ್ಮೀದೇವಿ, ಡಾ.ಉಮಾ, ಡಾ.ಪಿ.ಆರ್.ಅನುರಾಧಾ, ಡಾ.ಎಸ್.ಎಚ್.ದೇವರಾಜ್, ಡಾ.ತಿಮ್ಮೇಗೌಡ, ಡಾ.ಶ್ರೀರಾಮ್ ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ಕ್ರಮವಾಗಿ ಏ.9ರ ವರೆಗೆ ಪ್ಲೂೃ ಕಾರ್ನರ್‌ಗೆ ನಿಯೋಜಿಸಲಾಗಿದೆ.

    ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ತಪಾಸಣೆ: ಕರೊನಾ ಸೋಂಕು ತಡೆ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮೂಲಕ ಆರೋಗ್ಯ ತಪಾಸಣೆಗೆ ಆರ್.ವಿನೋತ್ ಪ್ರಿಯಾ ಶನಿವಾರ ಹಸಿರು ನಿಶಾನೆ ತೋರಿಸಿದರು. ಬೆಳಗ್ಗೆ ಜಿಲ್ಲಾಧಿಕಾರಿಯನ್ನು ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆಗೆ ಒಳಪಡಿಸುವ ಮೂಲಕ ಆರೋಗ್ಯ ತಪಾಸಣೆಗೆ ಚಾಲನೆ ನೀಡಲಾಯಿತು.

    ಡಿಎಚ್‌ಒ ಡಾ.ಸಿ.ಎಲ್.ಪಾಲಾಕ್ಷ ಮಾತನಾಡಿ, ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿ ಕಚೇರಿಗೆ ನಿತ್ಯವೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವುದರಿಂದ ಸಿಬ್ಬಂದಿ ಹಾಗೂ ಸಾರ್ವಜನಿಕರ ಆರೋಗ್ಯ ತಪಾಸಣೆ ಅನಿವಾರ್ಯ ಎಂದರು.

    ಆದ್ದರಿಂದ ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಆರೋಗ್ಯ ಇಲಾಖೆ ಮೂವರು ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ತಪಾಸಣೆ ವೇಳೆ ಜ್ವರದ ಲಕ್ಷಣಗಳು ಕಂಡುಬಂದಲ್ಲಿ ಮಾಹಿತಿ ಸಂಗ್ರಹಿಸಿ ಚಿಕಿತ್ಸೆಗೆ ಸಲಹೆ ನೀಡಲಾಗುವುದು. ಮಾ.31ರ ವರೆಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಪಾಸಣೆ ನಡೆಯಲಿದೆ ಎಂದು ತಿಳಿಸಿದರು.

    ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್.ಜೆ.ಬಸವರಾಜಪ್ಪ ಮಾತನಾಡಿ, ತಪಾಸಣೆ ವೇಳೆ ದೇಹದ ತಾಪಮಾನ 100 ಡಿಗ್ರಿ ಫ್ಯಾರನೆಟ್‌ಕ್ಕಿಂತ ಹೆಚ್ಚಿದ್ದಲ್ಲಿ ಅದನ್ನು ಜ್ವರವೆಂದು ಪರಿಗಣಿಸಿ ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುವುದು ಎಂದರು.
    ಜಿಪಂ ಸಿಇಒ ಎಸ್.ಹೊನ್ನಾಂಬ, ಎಡಿಸಿ ಸಿ.ಸಂಗಪ್ಪ ಮತ್ತಿತರರು ಇದ್ದರು.

    ಬ್ಯಾಂಕ್‌ಗಳಲ್ಲಿ ಸ್ಯಾನಟೈಸರ್: ಚಿತ್ರದುರ್ಗ ಬಿ.ಡಿ.ರಸ್ತೆ ಸಹಿತ ಜನದಟ್ಟಣೆಯಿಂದ ಕೂಡಿರುವ ನಗರದ ಕೆಲ ಬ್ಯಾಂಕ್‌ಗಳಲ್ಲಿ ಸರತಿಯಲ್ಲಿ ಬ್ಯಾಂಕ್ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಆದರೂ ಕೆಲ ಬ್ಯಾಂಕ್‌ಗಳ ಎಟಿಎಂ, ಇ-ಲಾಂಚ್ ಹಾಗೂ ಹಲವು ಬ್ಯಾಂಕ್‌ಗಳಲ್ಲಿ ಗ್ರಾಹಕರ ದಟ್ಟಣೆ ಎಂದಿನಂತೆ ಇತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts