More

    ಮುಳಬಾಗಿಲಿನ ಆವನಿ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನೊಳಗೆ ಚಿರತೆ ಸೆರೆ

    ಮುಳಬಾಗಿಲು: ಆವನಿ ಗ್ರಾಮದ ಪುರಾಣ ಪ್ರಸಿದ್ಧ ಸೀತಾಪಾರ್ವತಿ ಬೆಟ್ಟದ ತಪ್ಪಲಿನ ಅಂತರಗಂಗೆ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನೊಳಗೆ ಗಂಡು ಚಿರತೆ ಮಂಗಳವಾರ ಮುಂಜಾನೆ ಸೆರೆಯಾಗಿದೆ.

    ಬೆಟ್ಟದ ತಪ್ಪಲಿನಲ್ಲಿರುವ ಮಂಜುನಾಥ್ ಎಂಬುವವರ ಮನೆ ಸಮೀಪ ಬೋನು ಇರಿಸಲಾಗಿತ್ತು. ಮುಂಜಾನೆ ಬೋನಿನಲ್ಲಿದ್ದ ಕೋಳಿ ತಿನ್ನಲು ಬಂದು ಸೆರೆಯಾಗಿದೆ. ಆರ್‌ಎಫ್‌ಒ ಕೆ. ಎನ್. ರವಿಕೀರ್ತಿ, ಅರಣ್ಯಾಧಿಕಾರಿಗಳಾದ ಕೃಷ್ಣಮೂರ್ತಿ, ಕೆ.ಆರ್.ಭರತ್‌ಕುವಾರ್, ಗಾರ್ಡ್ ಅನಿಲ್ ಆಗಮಿಸಿ ಚಿರತೆಯನ್ನು ವಶಕ್ಕೆ ಪಡೆದಿದ್ದಾರೆ.

    ಎರಡು ವರ್ಷಗಳಿಂದ ಆವನಿ, ದೇವರಾಯಸಮುದ್ರ ಬೆಟ್ಟ-ಗುಡ್ಡಗಳಲ್ಲಿ ಮೂರು ಚಿರತೆಗಳು ಕಾಣಿಸಿಕೊಂಡಿದ್ದು, ಬೋನು ಇರಿಸಲಾಗಿತ್ತಾದರೂ ಬಿದ್ದಿರಲಿಲ್ಲ. ಇದೀಗ ಮೂರು ಚಿರತೆಗಳಲ್ಲಿ ಒಂದು ಚಿರತೆ ಸೆರೆಯಾಗಿದ್ದು, ಮತ್ತೆರಡು ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯೋನ್ಮುಖವಾಗಬೇಕಿದೆ.

    ಆವನಿ ದೇವರಾಯಸಮುದ್ರ ಬೆಟ್ಟಗಳ ನಡುವೆ 3 ಚಿರತೆಗಳು ಸಂಚರಿಸುತ್ತಿದ್ದ ವಾಹಿತಿ ಕಲೆಹಾಕಿದ್ದು, ಅದರಂತೆ ಎರಡು ವರ್ಷಗಳಿಂದ ಚಿರತೆ ಸೆರೆಗೆ ಬೋನು ಇರಿಸಲಾಗಿತ್ತು. ಈಗ ಸೆರೆಸಿಕ್ಕಿರುವ ಚಿರತೆಯನ್ನು ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ವನ್ಯಜೀವಿ ಅರಣ್ಯ ಧಾಮದಲ್ಲಿ ಬಿಡಲಾಗುವುದು.
    ಕೆ.ಎನ್.ರವಿಕೀರ್ತಿ, ಆರ್‌ಎಫ್‌ಒ ಮುಳಬಾಗಿಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts