More

    ಚಿಂಚೋಳಿ: ಸ್ಲಂ ಬಡಾವಣೆಗಳಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಲಿ

    ಚಿಂಚೋಳಿ: ಮದ್ಯ ಮಾರಾಟದ ವಿರುದ್ಧ ಮಹಿಳೆಯರು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಆದರೆ ಇಲ್ಲಿವರೆಗೂ ಯಾವುದೇ ಕ್ರಮವಾಗಿಲ್ಲ. ಮೊದಲು ಸ್ಲಂ ಬಡಾವಣೆಗಳಲ್ಲಿ ಮದ್ಯ ಮಾರಾಟ ನಿಲ್ಲಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕು ಎಂದು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಹೇಳಿದರು.

    ಮಹಾಂತೇಶ್ವರ ಮಠದ ಸಭಾಂಗಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ), ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದಿಂದ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿ ನಿಮಿತ್ತ ದುಶ್ಚಟ ಮುಕ್ತಿ ಸಮಾಜ ನಿರ್ಮಾಣಕ್ಕಾಗಿ ಗಾಂಧಿ ಸ್ಮೃತಿ ಮತ್ತು ದುಶ್ಚಟಗಳ ವಿರುದ್ಧ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕಿನ ಗಡಿಭಾಗದಲ್ಲಿ ಅಕ್ರಮ ಸೇಂದಿ ಮಾರಾಟ ತಡೆಗಟ್ಟಬೇಕು. ಹೆತ್ತವರೇ ಮಕ್ಕಳ ಭವಿಷ್ಯ ರೂಪಿಸಬೇಕು. ಧರ್ಮಸ್ಥಳ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಮಾತನಾಡಿದರು.

    ರಟಕಲ್ ವೀರಕ್ತ ಮಠದ ಶ್ರೀ ಸಿದ್ದರಾಮ ದೇವರು, ತಾ.ಪಂ ಇಓ ಶಂಕರ್ ರಾಠೋಡ,ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ್ ಧನ್ನಿ, ಪುರಸಭೆ ಸದಸ್ಯೆ ಜಗದೇವಿ ಗಡಂತಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷೆ ನರಸಮ್ಮ ಆವಂಟಿ, ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ, ಕಸಾಪ ತಾಲೂಕು ಅಧ್ಯಕ್ಷ ಸುರೇಶ್ ದೇಶಪಾಂಡೆ, ರಾಜಶೇಖರ ಹೋಂದ್ರಾಣಿ, ಗೌತಮ್ ಬೋಮ್ಮನಳ್ಳಿ, ನರ್ಮದಾ, ಮಾರುತಿ ಗಂಜಗೇರಾ, ಶಂಕರಜೀ ಹಿಪ್ಪರಗಿ, ಲಕ್ಷ್ಮಣ ಆವಂಟಿ, ಸಂಗಮೇಶ, ಭವಾನಿ ಪಾರಾ, ಸೇರಿದಂತೆ ಅನೇಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts