More

    ಚಿಂಚೋಳಿ: 371(ಜೆ) ವಿಧಿಗಾಗಿ ಆಸ್ತಿ ಮಾರಾಟ- ಸುರೇಶ ಸಜ್ಜನ್​

    ಚಿಂಚೋಳಿ: ಹೈದರಾಬಾದ್ (ಈಗಿನ ಕಲ್ಯಾಣ) ಕರ್ನಾಟಕದ ಸಮಗ್ರ ಅಭಿವೃದ್ಧಿ ರೂವಾರಿಯಾಗಿದ್ದ ಮಾಜಿ ಸಚಿವ ವೈಜನಾಥ ಪಾಟೀಲ್ ಅವರು 371(ಜೆ) ವಿಧಿ ಜಾರಿಗಾಗಿ ತಮ್ಮ ಆಸ್ತಿಯನ್ನು ಮಾರಿ ಹೋರಾಟ ರೂಪಿಸಿದ್ದರ ಫಲವಾಗಿ ವಿಶೇಷ ಸ್ಥಾನಮಾನ ಸಿಕ್ಕಿದ್ದು, ಶಿಕ್ಷಣ, ಉದ್ಯೋಗ, ಪ್ರಗತಿಯಲ್ಲಿ ಈ ಭಾಗ ಮುಂದೆ ಸಾಗುತ್ತಿದೆ ಎಂದು ಕಲಬುರಗಿ, ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್ ಹೇಳಿದರು.

    ಕೇತಕಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಭಾಂಗಣದಲ್ಲಿ ಹೈಕ ಹೋರಾಟ ಸಮಿತಿ ಶನಿವಾರ ಹಮ್ಮಿಕೊಂಡಿದ್ದ ವೈಜನಾಥ ಪಾಟೀಲರ 4ನೇ ಪುಣ್ಯಸ್ಮರಣೆ ಹಾಗೂ ಪಾಟೀಲ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಪಾಟೀಲರ ನಿರಂತರ ಹೋರಾಟದ ಫಲದಿಂದಲೇ 371 (ಜೆ) ಜಾರಿಯಾಗಿದೆ. ಅವರ ಜೀವನ, ಹೋರಾಟದ ಹಾದಿಯನ್ನು ಸರ್ಕಾರ ಪಠ್ಯದಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು.

    ಇಂದಿನ ಹೋರಾಟಗಾರರಿಗೆ ವೈಜನಾಥ ಪಾಟೀಲ್ ಮಾದರಿ ಮತ್ತು ಪ್ರೇರಣೆ. ಯಾವುದೇ ಸ್ವಾರ್ಥವಿಲ್ಲದೆ ದಶಕಗಳ ಕಾಲ ಜನ ಮತ್ತು ಮುಂದಿನ ಪೀಳಿಗಾಗಿ ಹೋರಾಡಿದ್ದು, ಯುವ ಪೀಳಿಗೆ ಅವರ ಆದರ್ಶ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

    ಡಾ.ಶಿವಶರಣಪ್ಪ ಮೋತಕಪಲ್ಲಿ ವಿಶೇಷ ಉಪನ್ಯಾಸ ನೀಡಿದರು. ಶ್ರೀ ಕರುಣೇಶ್ವರ ಶಿವಾಚಾರ್ಯ, ಶ್ರೀ ಶಿವಕುಮಾರ ಶಿವಾಚಾರ್ಯ, ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯ, ಶ್ರೀ ವಿಜಯಮಹಾಂತೇಶ್ವರ ಶಿವಾಚಾರ್ಯ ಸಾನ್ನಿಧ್ಯ ವಹಿಸಿದ್ದರು.

    ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್, ಕಾಂಗ್ರೆಸ್ ಜಿಲ್ಲಾ ವಕ್ತಾರ ಸುಭಾಷ ರಾಠೋಡ್, ಹೋರಾಟ ಸಮಿತಿ ಅಧ್ಯಕ್ಷ ಡಾ.ವಿಕ್ರಮ ಪಾಟೀಲ್, ಜಿಪಂ ಮಾಜಿ ಸದಸ್ಯ ಗೌತಮ ಪಾಟೀಲ್, ಪ್ರಮುಖರಾದ ಡಾ.ಬಸವೇಶ್ವರ ಪಾಟೀಲ್, ಗಿರೀಶ ಕಡ್ಲೇವಾಡ, ಅಶೋಕ ಪಾಟೀಲ್, ಮಧುಸೂದನರೆಡ್ಡಿ ರೋಡ್‌ಕಲ್ಲೂರ, ಶ್ರೀಮಂತ ಕಟ್ಟಿಮನಿ, ಮಹಿಪಾಲರೆಡ್ಡಿ ಮುನ್ನೂರ, ರವಿರಾಜ ಕೊರವಿ, ರಸೂಲ್ ಪಟೇಲ್, ಅಬ್ದುಲ್ ಬಾಸೀದ್, ಕೆ.ಎಂ. ಬಾರಿ, ಭೀಮಶೆಟ್ಟಿ ಮುರುಡಾ, ಬಸವರಾಜ ಮಾಲಿ, ಶಿವಶಂಕರ, ಪ್ರಭುಲಿಂಗ ಲೇವಡಿ, ಕುಪೇಂದ್ರರಾವ, ಸಂತೋಷ ಗಡಂತಿ, ಶಾಂತವೀರ ಹೀರಾಪುರ, ಚಿತ್ರಶೇಖರ ಪಾಟೀಲ್, ಗೋಪಾಲರೆಡ್ಡಿ ಇತರರಿದ್ದರು.

    ಮೂವರು ಸಾಧಕರಿಗೆ ಪಾಟೀಲ್ ಪ್ರಶಸ್ತಿ
    ಹೈಕ ಹೋರಾಟ ಸಮಿತಿಯು ಪ್ರಸಕ್ತ ವರ್ಷ ಹೋರಾಟ ಜೀವಿ, ಮಾಜಿ ಸಚಿವ ವೈಜನಾಥ ಪಾಟೀಲ್ ಹೆಸರಿನಲ್ಲಿ `ಪಾಟೀಲ್’ ಪ್ರಶಸ್ತಿ ನೀಡಲು ಆರಂಭಿಸಿದೆ. ಈ ಬಾರಿ ಮಾಜಿ ಉಪ ಸಭಾಪತಿ ಚಂದ್ರಶೇಖರರೆಡ್ಡಿ ದೇಶಮುಖ ಮದನಾ, ಬೀದರ್‌ನ ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇನ್ನೊಬ್ಬರಾದ ವಿಧಾನ ಪರಿಷತ್ ಮಾಜಿ ಸದಸ್ಯ ಖಾಜಿ ಅರ್ಷದ್ ಅಲಿ ಅನಾರೋಗ್ಯದಿಂದಾಗಿ ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕೆ ಗೈರಾಗಿದ್ದರು. ಪುರಸ್ಕಾರ 5 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts