More

    ಕರೊನಾ ಕರಡು ನಿರ್ಣಯದ ವಿಷಯದಲ್ಲಿ ಅಮೆರಿಕ-ಚೀನಾ ‘ಶೀತಲ ಸಮರ’

    ವಾಷಿಂಗ್ಟನ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕರೊನಾ ವೈರಸ್ ಕುರಿತ ಕರಡು ನಿರ್ಣಯ ಕುರಿತು ಅಮೆರಿಕ ಹಾಗೂ ಚೀನಾ ಮಧ್ಯೆ ತಿಕ್ಕಾಟ ಆರಂಭವಾಗಿದೆ.

    ಕರಡು ನಿರ್ಣಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಉಲ್ಲೇಖಿಸಿರುವ ಕೆಲವು ಅಂಶಗಳು ಅಮೆರಿಕದ ಪರವಾಗಿ ಇಲ್ಲ. ಚೀನಾದ ಪರವಾಗಿವೆ ಎನ್ನಿಸುವಂತಿವೆ. ಹಾಗಾಗಿ ಈ ಘರ್ಷಣೆ ಶುರುವಾಗಿದೆ.

    ‘‘ಇದು ಒಂದು ರೀತಿಯಲ್ಲಿ ಪಕ್ಷಪಾತ ಧೋರಣೆಯಾಗಿದೆ. ಮಾರಣಾಂತಿಕ ವೈರಸ್ ಕರೊನಾ ಬಗ್ಗೆ ಜಗತ್ತಿಗೆ ಸಮರ್ಪಕವಾಗಿ ತಿಳಿಸುವಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾ ವಿಫಲವಾಗಿವೆ’’ ಎಂದು ಅಮೆರಿಕ ಅಸಮಾಧಾನ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ನಿರ್ಣಯ ಪಾರದರ್ಶಕವಾಗಿರಲಿ ಎಂದೂ ಅದು ಆಗ್ರಹಿಸಿದೆ.
    ಮತ್ತೊಂದು ಕಡೆ ಚೀನಾದ ಪ್ರತಿನಿಧಿಗಳು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಈ ನಿರ್ಣಯ ಮಂಡನೆಯಾಗುವುದು ಮತ್ತು ಅಂಗೀಕಾರವಾಗುವುದನ್ನು ವಿಳಂಬಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ ರಾಜ್ಯದಲ್ಲಿ ಮದ್ಯ ಮಾರಾಟ, ಮದ್ಯಪಾನ ನಿಷೇಧಿಸಬೇಕು: ಸಚಿವ ಸಿ.ಟಿ. ರವಿ ಪ್ರತಿಪಾದನೆ

    ಏತನ್ಮಧ್ಯೆ ಅಮೆರಿಕ ಮತ್ತು ಚೀನಾ ರಾಯಭಾರಿಗಳು ಟ್ವಿಟರ್‌ನಲ್ಲಿ ಕೂಡ ಪರಸ್ಪರ ದೂರುತ್ತಾ, ದೋಷಾರೋಪಣೆ ಮಾಡುತ್ತಾ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದ್ದಾರೆ.

    ವಿಶ್ವಸಂಸ್ಥೆಯ ಅಮೆರಿಕ ರಾಯಭಾರಿ ಕೆಲ್ಲಿ ಕ್ರ್‌ಟಾ ಟ್ವೀಟ್ ಮಾಡಿ, ಲಕ್ಷಾಂತರ ಜನರ ಸಾವಿಗೆ ಕಾರಣವಾಗಿರುವ ಕರೊನಾ ವೈರಸ್ ಬಗ್ಗೆ ಚೀನಾದ ಕಮ್ಯೂನಿಸ್ಟ್ ಸರ್ಕಾರಕ್ಕೆ ಎಷ್ಟು ತಿಳಿದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿರುವ ಚೀನಾ ರಾಯಭಾರಿ ಜಾಂಗ್ ಜುನ್, ಸತ್ಯಾಸತ್ಯತೆಗಳು ಮೇಜಿನ ಮೇಲಿವೆ, ಚೀನಾವನ್ನು ದೂಷಿಸುವುದರಿಂದ ಜವಾಬ್ದಾರಿಯಿಂದ ಪಲಾಯನ ಸಾಧ್ಯವಿಲ್ಲ ಎಂದಿದ್ದಾರೆ.
    ವಾದ-ಪ್ರತಿವಾದಗಳು ಏನೇ ಇದ್ದರೂ, ಈ ವಿಷಯದಲ್ಲಿ ಅಮೆರಿಕ ಮತ್ತು ಚೀನಾ ರಾಜಿ ಮಾಡಿಕೊಳ್ಳಬೇಕು ಎಂದು ್ರಾನ್ಸ್, ಟ್ಯುನೀಷಿಯಾ ಮತ್ತಿತರ ದೇಶಗಳು ಒತ್ತಾಯಿಸುತ್ತಿವೆ.

    ಕರೊನಾ ರೋಗಿಗಳ ಮೇಲೆ ಎಚ್‌ಐವಿ ಔಷಧ ಪ್ರಯೋಗಿಸಲು ಎಚ್‌ಐವಿ ಔಷಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts