More

    ಹಸಿ ಹಸಿಯಾಗಿ ಹಾವನ್ನು ತಿಂದವನ ಶ್ವಾಸಕೋಶದಲ್ಲಿ ರಾಶಿರಾಶಿ ಹುಳು!

    ಬೀಜಿಂಗ್​: ಚೀನಾದಲ್ಲಿ ಪ್ರಾಣಿ, ಪಕ್ಷಿಗಳನ್ನು ಹಸಿಹಸಿಯಾಗಿ ತಿನ್ನುವವರ ಸಂತತಿ ಬಹುದೊಡ್ಡದಿದೆ. ಇಂದು ಇಡೀ ವಿಶ್ವವೇ ಕರೊನಾ ಪೀಡಿತವಾಗಿ, ಸ್ಯಾನಿಟೈಸರ್​ನಲ್ಲಿ ಕೈತೊಳೆಯುವಂತೆ ಆಗಿರುವುದು ಈ ಕಾರಣಕ್ಕೆ ಎಂಬ ವಾದವೂ ಇದೆ.

    ಈ ವಾದಕ್ಕೆ ಪುಷ್ಟಿ ಕೊಡುವ ರೀತಿಯಲ್ಲಿ ಚೀನಾದ ಒಬ್ಬ ವ್ಯಕ್ತಿ ಹಸಿಹಸಿಯಾಗಿ ಹಾವು, ಜಲಚರಗಳನ್ನು ತಿನ್ನುವ ಹವ್ಯಾಸ ಇಟ್ಟುಕೊಂಡಿದ್ದ. ಅದೊಮ್ಮೆ ಹಾವಿನ ಪಿತ್ತಕೋಶವನ್ನೇ ಬಗೆದು ತಿಂದಿದ್ದ. ಇದಾದ ನಂತರದಲ್ಲಿ ಪರಿಣಾಮ ಮಾತ್ರ ಘೋರವಾಗಿತ್ತು.

    ಇದನ್ನೂ ಓದಿ: ಪಾಕಿಸ್ತಾನವನ್ನು ಹೇಗೆ ನಿರ್ಬಂಧಿಸಬೇಕು ಎಂಬುದು ಭಾರತಕ್ಕೆ ಗೊತ್ತಿದೆ

    ವ್ಯಾಂಗ್​ ಎಂಬ ಉಪನಾಮ ಹೊಂದಿರುವ ಈ ವ್ಯಕ್ತಿಗೆ ಕೆಲದಿನಗಳಿಂದ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ವೈದ್ಯರಲ್ಲಿ ಹೋಗಿ ತೋರಿಸಿದಾಗ ಶ್ವಾಸಕೋಶದ ಸ್ಕ್ಯಾನಿಂಗ್​ ಮಾಡಿಸಲು ಸಲಹೆ ನೀಡಿದರು. ಅದರಂತೆ ಸ್ಕ್ಯಾನ್​ ಮಾಡಿಸಿದಾಗ, ಆತನ ಶ್ವಾಸಕೋಶದಲ್ಲಿ ಸಾಲು ಸಾಲು ಹುಳುಗಳು ತುಂಬಿರುವುದು ಕಂಡುಬಂದಿತು.

    ಈ ಸಮಸ್ಯೆಗೆ ಪ್ಯಾರಾಗೊನಿಮಿಯಾಸಿಸ್​ ಎಂದು ಕರೆಯಲಾಗುತ್ತದೆ. ಇದು ಆಹಾರ ಆಧಾರಿತವಾದ ಪರಾವಲಂಬಿ ಜೀವಿಗಳಿಂದಾಗುವ ಸೋಂಕು. ಆಹಾರವನ್ನು ಬೇಯಿಸದೆ ಹಸಿಹಸಿಯಾಗಿ ತಿಂದಾಗ ಅಥವಾ ಅಶುದ್ಧವಾದ ನೀರನ್ನು ಕುಡಿದಾಗ ಇಂಥ ಸೋಂಕು ತಗಲುತ್ತದೆ ಎಂದು ಚೀನಾದ ವೈದ್ಯ ಝಹೋ ಹೈಯಾನ್​ ವಿವರಿಸಿದ್ದಾರೆ.

    ‘ಕರೊನಾ ಹೋರಾಟದ ಮಧ್ಯೆ ಕಂಡುಬಂತು ದೇಶದ ಒಗ್ಗಟ್ಟು…’- ವಿಡಿಯೋ ಶೇರ್​ ಮಾಡಿ, ‘ಪ್ರಣಾಮಗಳು’ ಎಂದ್ರು ಪ್ರಧಾನಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts