More

    ಅಮೆರಿಕಕ್ಕಿಂತ ಚೀನಾ ಶ್ರೀಮಂತ; ಹತ್ತು ರಾಷ್ಟ್ರಗಳಲ್ಲಿ ಶೇಖರವಾಗಿದೆ ಜಗತ್ತಿನ ಶೇಕಡ 60 ಸಂಪತ್ತು

    ನವದೆಹಲಿ: ಜಗತ್ತಿನ ಅತಿಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕವನ್ನು ಹಿಂದಿಕ್ಕಿ ಚೀನಾ ಈಗ ನಂ.1 ರಾಷ್ಟ್ರವೆನಿಸಿಕೊಂಡಿದೆ. ಕಳೆದ ಎರಡು ದಶಕದಲ್ಲಿ ಜಾಗತಿಕ ಸಂಪತ್ತು ಮೂರು ಪಟ್ಟು ಹೆಚ್ಚಾಗಿದೆ ಎಂದು ಮೆಕ್ಕಿನ್ಸೆ ಆಂಡ್ ಕಂಪನಿಯ ಸಂಶೋಧನಾ ವಿಭಾಗದ ವರದಿ ಹೇಳಿದೆ. ಈ ವರದಿಯು 10 ರಾಷ್ಟ್ರಗಳ ಬ್ಯಾಲೆನ್ಸ್​ಶೀಟ್ ಸಿದ್ಧಪಡಿಸಿದ್ದು, ಜಗತ್ತಿನ ಆದಾಯದಲ್ಲಿ ಶೇಕಡ 60 ಈ ರಾಷ್ಟ್ರಗಳಲ್ಲಿ ಹಂಚಿಕೆಯಾಗಿದೆ ಎಂಬ ಅಂಶದತ್ತ ಬೆಳಕು ಚೆಲ್ಲಿದೆ.

    ಜಗತ್ತಿನ ಸಂಪತ್ತು 2000ನೇ ಇಸವಿಯಲ್ಲಿ 156 ಲಕ್ಷ ಕೋಟಿ ಡಾಲರ್ (11614.30 ಲಕ್ಷ ಕೋಟಿ ರೂಪಾಯಿ) ಇದ್ದದ್ದು, 2020ರ ವೇಳೆಗೆ 514 ಲಕ್ಷ ಕೋಟಿ ಡಾಲರ್ (38267.63 ಲಕ್ಷ ಕೋಟಿ ರೂಪಾಯಿ) ಆಗಿದೆ. ಚೀನಾದ ಸಂಪತ್ತು 2000ನೇ ಇಸವಿಯಲ್ಲಿ 7 ಲಕ್ಷ ಕೋಟಿ ಡಾಲರ್ (521.15 ಲಕ್ಷ ಕೋಟಿ ರೂ.) ಇದ್ದದ್ದು 2020ರಲ್ಲಿ 120 ಲಕ್ಷ ಕೋಟಿ ಡಾಲರ್ (8934.08 ಲಕ್ಷ ಕೋಟಿ ರೂಪಾಯಿ) ಆಗಿದೆ. 20 ವರ್ಷಗಳಲ್ಲಿ 113 ಲಕ್ಷ ಕೋಟಿ ಡಾಲರ್ (8412.92 ಲಕ್ಷ ಕೋಟಿ ರೂಪಾಯಿ) ಹೆಚ್ಚಳವಾಗಿದೆ. ಇದು ಅಮೆರಿಕವನ್ನು ಒಟ್ಟು ಸಂಪತ್ತಿನ ವಿಚಾರದಲ್ಲಿ ಹಿಂದಿಕ್ಕುವುದಕ್ಕೆ ಚೀನಾಕ್ಕೆ ನೆರವಾಗಿದೆ. ಇದೇ ಅವಧಿಯಲ್ಲಿ ಅಮೆರಿಕದ ಸಂಪತ್ತು 90 ಲಕ್ಷ ಕೋಟಿ ಡಾಲರ್ (6700.56 ಲಕ್ಷ ಕೋಟಿ ರೂಪಾಯಿ)ಗಿಂತ ಸ್ವಲ್ಪ ಹೆಚ್ಚು ಏರಿಕೆಯಾಗಿದೆ ಅಷ್ಟೇ ಎಂದು ಜ್ಯೂರಿಚ್​ನಲ್ಲಿರುವ ಮೆಕ್ಕಿನ್ಸೆ ಗ್ಲೋಬಲ್ ಇನ್​ಸ್ಟಿಟ್ಯೂಟ್​ನ ಪಾಲುದಾರ ಜನ್ ಮಿಶ್ಚೆಕೆ ಹೇಳಿದ್ದಾರೆ.

    ರಿಯಲ್​ಎಸ್ಟೇಟ್​ನಲ್ಲಿ ಅತಿಹೆಚ್ಚು: ಜಗತ್ತಿನಲ್ಲಿ ಸಂಪತ್ತು ಶೇಖರಣೆ ರಿಯಲ್​ಎಸ್ಟೇಟ್ ಕ್ಷೇತ್ರದಲ್ಲೇ ಹೆಚ್ಚು. ಸದ್ಯದ ಡೇಟಾ ಪ್ರಕಾರ, ವಿಶ್ವದ ಸಂಪತ್ತಿನ ಶೇಕಡ 68 ರಿಯಲ್​ಎಸ್ಟೇಟ್ ಮೇಲೆ ಹೂಡಿಕೆಯಾಗಿದೆ. ಉಳಿದ ಸಂಪತ್ತು ಮೂಲಸೌಕರ್ಯ, ಮಷಿನರಿ, ಉಪಕರಣ ಮತ್ತು ಇತರೆಡೆ ಹೂಡಿಕೆಯಾಗಿದೆ. ಬೌದ್ಧಿಕ ಆಸ್ತಿ, ಪೇಟೆಂಟ್​ಗಳ ಪಾಲು ಅತ್ಯಂತ ಕಡಿಮೆ ಎಂದು ವರದಿ ಹೇಳಿದೆ.

    ಸಂಪತ್ತಿನ ಮೌಲ್ಯ ಅತಿ ಏರಿಕೆಗೆ ಕಳವಳ: ಕಳೆದ 2 ದಶಕಗಳಲ್ಲಿ ಕೆಲವು ರಾಷ್ಟ್ರಗಳಲ್ಲಿ, ಕೆಲವೇ ಕೆಲವು ಕುಟುಂಬಗಳಲ್ಲಿ ಸಂಪತ್ತಿನ ಮೌಲ್ಯ ಅತಿಯಾಗಿ ಏರಿಕೆ ಯಾಗುತ್ತಿರುವ ಬಗ್ಗೆ ವರದಿ ಕಳವಳ ವ್ಯಕ್ತಪಡಿಸಿದೆ. ಇವರ ಆದಾಯಕ್ಕೆ ಹೋಲಿಸಿದರೆ ಸಂಪತ್ತಿನ ಮೌಲ್ಯ ದೀರ್ಘಾವಧಿಯಲ್ಲಿ ಹೆಚ್ಚು ಬೆಲೆ ಬಾಳತೊಡಗಿವೆ. ಇದು ಸಂಪತ್ತಿನ ಏರಿಕೆಯ ಸುಸ್ಥಿರತೆಯ ಬಗ್ಗೆ ಕೂಡ ಸಂದೇಹ ಮೂಡಿಸಿದೆ. ಹಣದುಬ್ಬರದ ಹೊರತಾಗಿಯೂ ನಿವ್ವಳ ಸಂಪತ್ತಿನ ಏರಿಕೆ ಅನೇಕ ರೀತಿಯಲ್ಲಿ ಪ್ರಶ್ನಾರ್ಹವಾಗಿದೆ. ಇದರಿಂದ ಉಂಟಾಗಲಿರುವ ಅಡ್ಡ ಪರಿಣಾಮಗಳು ಅನೇಕ ಎಂದು ಜನ್ ಮಿಶ್ಚೆಕೆ ವಿವರಿಸಿದ್ದಾರೆ.

    ಶೇ.10 ಶ್ರೀಮಂತರ ಕುಟುಂಬದ್ದೇ ಪ್ರಾಬಲ್ಯ: ಅತಿ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿರುವ ಮುಂಚೂಣಿಯ ಚೀನಾ ಮತ್ತು ಅಮೆರಿಕಗಳಲ್ಲಿ ಮೂರನೇ ಎರಡಂಶದಷ್ಟು ಸಂಪತ್ತು ಕೇವಲ ಶೇ. 10 ಕುಟುಂಬಗಳಲ್ಲಿ ಉಳಿದು ಕೊಂಡಿದೆ. ಅವರ ಸಂಪತ್ತಿನ ಮೌಲ್ಯ ವೃದ್ಧಿಯಾಗುತ್ತಲೇ ಇದೆ.

    2008ರ ಆರ್ಥಿಕ ಹಿಂಜರಿತ: ಜಾಗತಿಕ ಸಂಪತ್ತಿನಲ್ಲಿ ಈ ಅತಿಯಾದ ಏರಿಕೆ ಹಲವು ಅಡ್ಡ ಪರಿಣಾಮ ಉಂಟುಮಾಡಬಹುದು. ಅಮೆರಿಕದಲ್ಲಿ 2008ರಲ್ಲಿ ಉಂಟಾದ ಆರ್ಥಿಕ ಹಿಂಜರಿತ ಕೂಡ ಇಂಥದ್ದೇ ಅಸಮತೋಲನದ ಪರಿಣಾಮ. ರಿಯಲ್ ಎಸ್ಟೇಟ್ ಮೌಲ್ಯದಲ್ಲಿ ಉಂಟಾಗುತ್ತಿರುವ ಈ ಏರಿಕೆ ಅನೇಕರಿಗೆ ವಸತಿಯನ್ನು ಕಸನಾಗಿಯೇ ಇರಿಸಬಹುದು. ಆರ್ಥಿಕ ಬಿಕ್ಕಟ್ಟಿನ ಅಪಾಯ ಹೆಚ್ಚಾಗಬಹುದು. ಚೀನಾದಲ್ಲೂ ಈ ರೀತಿಯ ಬೆಳವಣಿಗೆಗಳು ಆಗುವ ಸಾಧ್ಯತೆಗಳಿವೆ ಎಂದು ಜನ್ ಮಿಶ್ಚೆಕೆ ಹೇಳಿದರು.

    ಭಾರತದ ಆರ್ಥಿಕತೆ 2,234 ಲಕ್ಷ ಕೋಟಿ ರೂ.: ಭಾರತ ಒಟ್ಟಾರೆ ಆರ್ಥಿಕತೆ 3 ಟ್ರಿಲಿಯನ್ ಡಾಲರ್ ಇದನ್ನು 3 ಟ್ರಿಲಿಯನ್ ಡಾಲರ್ (2234 ಲಕ್ಷ ಕೋಟಿ ರೂ) ಇದ್ದು, ಇದನ್ನು 2025ರ ಹೊತ್ತಿಎ 5 ಟ್ರಿಲಿಯನ್ ಡಾಲರ್​ಗೆ (3724 ಲಕ್ಷ ಕೋಟಿ ರೂ.) ಏರಿಸಲು ಸರ್ಕಾರ ಬಯಸಿದೆ.

    ‘ಯುವರತ್ನ’ ಪುನೀತ್ ರಾಜ್​ಕುಮಾರ್‌ಗೆ ರಾಷ್ಟ್ರಮಟ್ಟದ ‘ಸಿದ್ದಶ್ರೀ’ ಪ್ರಶಸ್ತಿ ಘೋಷಣೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts