More

    ಕೊನೆಗೂ ಜಾಗತಿಕ ಒತ್ತಡಕ್ಕೆ ಮಣಿದ ಚೀನಾ ಮತ್ತು ಡಬ್ಲ್ಯುಎಚ್​ಒ

    ನವದೆಹಲಿ: ಕರೊನಾ ವೈರಾಣು ಉಗಮದ ಕುರಿತು ತನಿಖೆಗೆ ಒಳಪಡುವಂತೆ ಜಾಗತಿಕವಾಗಿ ನಿರ್ಮಾಣವಾಗಿದ್ದ ಒತ್ತಡಕ್ಕೆ ಚೀನಾ ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಮಣಿದಿವೆ. ಕರೊನಾ ವೈರಾಣು ವಿಷಯವನ್ನು ಬಹಿರಂಗಪಡಿಸುವ ವಿಷಯವಾಗಿ ಚೀನಾದ ಆಣತಿಯಂತೆ ನಡೆದುಕೊಂಡಿದ್ದರ ಬಗ್ಗೆ ಡಬ್ಲ್ಯುಎಚ್​ಒ ತನಿಖೆಗೆ ಒಳಪಡಲಿದೆ.

    ಕರೊನಾ ವೈರಾಣುವಿನ ಉಗಮ ಮತ್ತು ಹರಡುವಿಕೆ ಕುರಿತು ಚೀನಾದ ವಿರುದ್ಧ ತನಿಖೆ ನಡೆಯಬೇಕು ಎಂದು ಯುರೋಪಿಯನ್​ ಒಕ್ಕೂಟ ಡಬ್ಲ್ಯುಎಚ್​ಒದಲ್ಲಿ ನಿಲುವಳಿ ಸೂಚನೆ ಮಂಡಿಸಲು ಸಿದ್ಧತೆ ನಡೆಸಿತ್ತು. ಇದಕ್ಕೆ ಭಾರತ ಸೇರಿ 120 ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸಿದ್ದವು. ಈ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡುವಂತೆ ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಅವರಿಗೆ ಸೂಚಿಸಲಾಗಿತ್ತು. ಆದರೆ ಮೊದಲಿಗೆ ಇದಕ್ಕೆ ನಿರಾಕರಿಸಿದ್ದ ಚೀನಾ, ಇದೀಗ ಜಾಗತಿಕ ಒತ್ತಡಕ್ಕೆ ಮಣಿದು ತನಿಖೆಗೆ ಒಳಪಡಲು ನಿರ್ಧರಿಸಿದೆ.

    ಇದನ್ನೂ ಓದಿ: ಕರೊನಾ ಸ್ಪ್ರೆಡರ್ಸ್​ ಎಂದು ಚುಡಾಯಿಸಿದ, ಪೊಲೀಸರಿಂದ ಅಂದರ್​ ಆದ!

    ತನಿಖೆಗೆ ಒಳಪಡಲು ಸಿದ್ಧ. ಆದರೆ, ಮೊದಲಿಗೆ ಜಾಗತಿಕವಾಗಿ ಹಬ್ಬಿರುವ ಕರೊನಾ ಪಿಡುಗನ್ನು ಸಮರ್ಥವಾಗಿ ಹಿಮ್ಮೆಟ್ಟಿಸುವ ಬಗ್ಗೆ ಗಮನಹರಿಸೋಣ. ಅದು ನಿಯಂತ್ರಣಕ್ಕೆ ಬಂದ ಬಳಿಕ ತನಿಖೆ ನಡೆಯಲಿ ಎಂದು ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಹೇಳಿದ್ದಾರೆ.

    ಯುರೋಪಿಯಿನ್​ ಒಕ್ಕೂಟ ರೂಪಿಸಿ, ಮಂಡಿಸಿರುವ ನಿಲುವಳಿ ಕುರಿತು ಡಬ್ಲ್ಯುಎಚ್​ಒದಲ್ಲಿ ಮಂಗಳವಾರ ಚರ್ಚೆಗಳು ಆರಂಭವಾಗುವ ಸಾಧ್ಯತೆ ಇದೆ. ಇದೀಗ ತನಿಖೆಗೆ ಆದೇಶಿಸುವ ಕ್ರಮ ಕೇವಲ ಔಪಚಾರಿಕವಾಗಿದೆ. ಇದನ್ನು ವಿರೋಧಿಸುವವರು ಯಾರೂ ಇಲ್ಲವಾಗಿದ್ದಾರೆ ಎಂದು ಡಬ್ಲ್ಯುಎಚ್​ಒದ ರಾಜತಾಂತ್ರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮುಂದೂಡಿಕೆಯಾಗಿದ್ದ ದ್ವಿತೀಯ ಪಿಯು ಇಂಗ್ಲಿಷ್​ ಪರೀಕ್ಷೆ ನಡೆಯುವ ದಿನ ಮತ್ತು ಸಮಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts