More

    ರಸ್ತೆ ನಿರ್ಮಿಸಿ ವರ್ಷ ಕಳೆದ ಬಳಿಕ ಚೀನಾದಿಂದ ಭಾರಿ ಪ್ರತೀಕಾರದ ಬೆದರಿಕೆ

    ನವದೆಹಲಿ: ಚೀನಾಕ್ಕೆ ಅಂಟಿಕೊಂಡಿರುವ ವಾಸ್ತವ ಗಡಿ ರೇಖೆಗೆ ತಕ್ಷಣವೇ ಸಂಪರ್ಕ ಒದಗಿಸುವಂತೆ ಭಾರತ ರಸ್ತೆಗಳನ್ನು ನಿರ್ಮಿಸುತ್ತಿರುವುದು ಚೀನಾದ ಪಾಲಿಗೆ ನುಂಗಲಾರದ ತುತ್ತಾಗಿದೆ. ಒಂದೆಡೆ ಕರೊನಾ ಜತೆ ಹೋರಾಡುತ್ತಿರುವ ಭಾರತಕ್ಕೆ ಅದು ಈಗ ಭಾರಿ ಪ್ರತೀಕಾರದ ಬೆದರಿಕೆ ಒಡ್ಡಲಾರಂಭಿಸಿದೆ.

    ಲಡಾಖ್​ ಪ್ರದೇಶದ ಬೈಜಿಂಗ್​ ಮತ್ತು ಲ್ಯೂಜಿನ್​ ಪ್ರದೇಶಕ್ಕೆ ಸಂಪರ್ಕ ಒದಗಿಸುವ ರೀತಿಯಲ್ಲಿ ಭಾರತ ರಸ್ತೆಯನ್ನು ನಿರ್ಮಿಸಿದೆ. ತನ್ಮೂಲಕ ಗಡಿಯ ರೂಪುರೇಷೆಯನ್ನು ಬದಲಿಸುವಲ್ಲಿ ಭಾರತ ಏಕಪಕ್ಷೀಯ ಕ್ರಮ ಕೈಗೊಂಡಿದೆ. ಜತೆಗೆ ಚೀನಾದ ಗಡಿಯನ್ನು ಅತಿಕ್ರಮಿಸಿದ್ದು, ಇದಕ್ಕೆ ಭಾರಿ ದಂಡ ತರಬೇಕಾಗುತ್ತದೆ ಎಂದು ಬೆದರಿಸಿದೆ.

    ಈ ವಿಷಯವಾಗಿನ ಭಾರತೀಯ ಸೇನೆ ಮತ್ತು ವಿದೇಶಾಂಗ ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರು ಕೆಲ ಅಧಿಕಾರಿಗಳು ದೇಶ ಕೋವಿಡ್​ 19ನಂಥ ಮಾರಕ ಪಿಡುಗಿನ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ಗಡಿಯಲ್ಲಿ ಪರಿಸ್ಥಿತಿ ತುಂಬಾ ಸೂಕ್ಷ್ಮ ಮತ್ತು ಉದ್ವಿಗ್ನಗೊಂಡಂತಾಗಿದೆ ಎಂದು ಹೇಳಿದ್ದಾರೆ.

    ಗಲ್ವಾನ್​ ನದಿ ಪ್ರದೇಶದಲ್ಲಿ ಭಾರತ ತನ್ನ ಗಡಿಯೊಳಗೆ ಸೀಮಿತಗೊಳಿಸಿಕೊಂಡು ರಸ್ತೆಯನ್ನು ನಿರ್ಮಿಸಿದೆ. ಪ್ಯಾಂಗಾಂಗ್​ ತ್ಸೋ ಸರೋವರದಿಂದ 200 ಕಿ.ಮೀ. ದೂರದಲ್ಲಿ ಶಯಾಕ್​ ಮತ್ತು ಗಲ್ವಾನ್​ ನದಿಗಳು ಸಂಗಮಿಸುವ ಪ್ರದೇಶದಲ್ಲಿ ಈ ರಸ್ತೆ ನಿರ್ಮಾಣಗೊಂಡಿದೆ. ಈ ಹೊಸ ರಸ್ತೆಯು ನದಿಯ ತಟವನ್ನು ಹಾದು ಹೋಗುವ ಡಾರ್​ಬಕ್​-ಶಯಾಕ್​-ದೌಲತ್​ ಬೇಗ್​ ಓಲ್ಡೀ (ಡಿಎಸ್​ಡಿಬಿಒ) ರಸ್ತೆಯಿಂದ ವಾಸ್ತವ ಗಡಿ ರೇಖೆಯತ್ತ ಸಂಪರ್ಕ ಒದಗಿಸುತ್ತದೆ. ಇದು ಚೀನಾದ ಆತಂಕಕ್ಕೆ ಕಾರಣವಾಗಿದೆ.

    ಇದನ್ನೂ ಓದಿ: ಆನ್​ಲೈನ್​ ಮದ್ಯಪ್ರಿಯರಿಗೆ ಬಿತ್ತಲ್ಲಪ್ಪೋ ಗಾಳ! ಎಣ್ಣೆ ಕುಡಿಯುವ ಮೊದಲೇ ಏರಿಬಿಟ್ಟಿತು ನಶೆ…

    ಗಲ್ವಾನ್​ ಪ್ರದೇಶದ ವಿಷಯವಾಗಿ ಭಾರತ ಮತ್ತು ಚೀನಾ ನಡುವೆ ಯಾವುದೇ ವಿವಾದವಿಲ್ಲ. ಆದರೆ ಪ್ಯಾಂಗಾಂಗ್​ ತ್ಸೋ ವಿಚಾರದಲ್ಲಿ ವಿವಾದವಿದೆ. ಆದರೆ ಕಳೆದ ಎರಡು ವರ್ಷಗಳಿಂದ ಈ ಪ್ರದೇಶದಲ್ಲಿ ಚೀನಾ ಯೋಧರು ಯಾವುದೇ ಅತಿಕ್ರಮಣ ಮಾಡಿರಲಿಲ್ಲ. ಆದರೆ, ಈಗ ನಮ್ಮ ಗಡಿ ಭಾಗದೊಳಗೆ ರಸ್ತೆ ನಿರ್ಮಿಸಿಕೊಂಡಿರುವುದಕ್ಕೆ ಆಕ್ಷೇಪಿಸುತ್ತಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

    ಕರಕೋರಾಮ್​ ಪಾಸ್​ನ ಬುಡದಲ್ಲಿರುವ ದೌಲತ್​ ಬೇಗ್​ ಓಲ್ಡೀಗೆ ಸಂಪರ್ಕಿಸುವ 255 ಕಿ.ಮೀ. ಉದ್ದದ ಡಿಎಸ್​ಡಿಬಿಒ ರಸ್ತೆ ಗಡಿ ಭಾಗಕ್ಕೆ ಸುಲಭ ಸಂಪರ್ಕ ಒದಗಿಸುತ್ತದೆ. ಶಯಾಕ್​ ಮತ್ತು ಟ್ಯಾಂಗಟ್ಸೆ ನದಿಗಳ ಪಕ್ಕದಲ್ಲೇ ಹಾದು ಹೋಗುವ ಈ ರಸ್ತೆಯ ನಿರ್ಮಾಣಕ್ಕೆ ತುಂಬಾ ಹಿಂದೆ ಯೋಜನೆ ರೂಪಿಸಲಾಗಿತ್ತು. ಇದರ ನಿರ್ಮಾಣ ಕಾರ್ಯ ಒಂದು ವರ್ಷದ ಹಿಂದೆಯೇ ಮುಗಿದಿದೆ ಎನ್ನಲಾಗಿದೆ.
    ಇದೀಗ ಈ ರಸ್ತೆಯ ನಿರ್ಮಾಣದಿಂದ ಸಿಟ್ಟಾಗಿರುವ ಚೀನಾ ಪ್ಯಾಂಗಾಂಗ್​ ತ್ಸೋ ಸರೋವರದಲ್ಲಿನ ತನ್ನ ಪಹರೆಯನ್ನು ಹೆಚ್ಚಿಸಿದ್ದು, ಹೆಚ್ಚುವರಿಯಾಗಿ ನಾಲ್ಕೈದು ಬೋಟ್​ಗಳನ್ನು ನಿಯೋಜಿಸಿದೆ. ಅಷ್ಟೇ ಅಲ್ಲ, ಸರೋವರದ ಉತ್ತರ ಭಾಗದಲ್ಲಿನ ಫಿಂಗರ್​ 2 (ಬೆಟ್ಟ ಮತ್ತು ಬೆಟ್ಟದ ತುದಿಗಳನ್ನು ಭಾರತೀಯ ಸೇನಾಪಡೆ ಫಿಂಗರ್​ ಎಂದು ಕರೆಯುತ್ತದೆ) ಪ್ರದೇಶದಲ್ಲಿ ಭಾರತೀಯ ಯೋಧರ ಪಹರೆಗೂ ಅಡ್ಡಿಪಡಿಸಲಾರಂಭಿಸಿದೆ.

    ಭಾರತೀಯ ಸೇನಾಪಡೆ ಫಿಂಗರ್​ 4ವರೆಗೂ ಪಹರೆ ಕಾಯುತ್ತಿದೆ. ಭಾರತದ ಪ್ರಕಾರ ವಾಸ್ತವ ಗಡಿರೇಖೆ ಫಿಂಗರ್​ 8ವರೆಗೆ ಹಬ್ಬಿದೆ. ಆದರೆ, ಚೀನಿ ಯೋಧರು ವಾಸ್ತವ ಗಡಿ ರೇಖೆ ಫಿಂಗರ್​ 2 ಅನ್ನು ಹಾದು ಹೋಗುವುದಾಗಿ ಪ್ರತಿಪಾದಿಸುತ್ತಾ, ತಗಾದೆ ತೆಗೆಯುತ್ತಿರುತ್ತಾರೆ. ಹಾಗೂ ಈ ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸಲು ಉಭಯ ರಾಷ್ಟ್ರಗಳ ಯೋಧರು ಜಟಾಪಟಿಗೆ ಇಳಿಯುವುದು ಸಾಮಾನ್ಯವಾಗಿದೆ.

    ಪೆಟ್ರೋಲ್​, ಡೀಸೆಲ್​ ಮಾರಾಟ ಮೊದಲಿನಂತಾಗಲು ಇನ್ನಾರು ತಿಂಗಳು ಬೇಕು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts