More

    ಮಕ್ಕಳ ಕಲಿಕೆ ಜತೆ ಆರೋಗ್ಯ ಕಾಳಜಿ ಅಗತ್ಯ

    ಕಾನಹೊಸಹಳ್ಳಿ: ಅಂಗನವಾಡಿ ಕೇಂದ್ರಗಳಲ್ಲಿ ಚಿಣ್ಣರ ಶಿಕ್ಷಣ ಕಲಿಕೆ ಜತೆಗೆ ಆರೋಗ್ಯದ ಕಾಳಜಿವಹಿಸಿ ಎಂದು ಗ್ರಾಪಂ ಅಧ್ಯಕ್ಷ ಎ.ಸಿ.ಚೇತನ್ ತಿಳಿಸಿದರು.

    ಇದನ್ನೂ ಓದಿ: ಗೆಣಸು ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಸಿಹಿ: ನಿಯಮಿತವಾಗಿ ತಿನ್ನಿ ಚಮತ್ಕಾರ ನೋಡಿ

    ಕಾನಹೊಸಹಳ್ಳಿಯಲ್ಲಿ ಅಂಗನವಾಡಿ ಸಿ ಕೇಂದ್ರದ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಅಂಗನವಾಡಿ ಸಿ ಕೇಂದ್ರ ಬಾಡಿಗೆ ಕಟ್ಟಡದಲ್ಲಿ ಇದದ್ದರಿಂದ ಸರಕಾರಿ ಹಳೆಯ ಶಾಲೆಯ ಕಟ್ಟಡದ ಕೊಠಡಿಯನ್ನು ಗ್ರಾಪಂಯಿಂದ ರಿಪೇರಿ ಮಾಡಿಸಿ ಅಂಗನವಾಡಿ ಕೇಂದ್ರ ನಡೆಯಲು ಅನುಕೂಲ ಮಾಡಲಾಗಿದೆ.

    ಕೇಂದ್ರಕ್ಕೆ ಆಗಮಿಸುವ ಚಿಣ್ಣರಿಗೆ ಸರಕಾರದಿಂದ ವಿತರಿಸುವ ಪೌಷ್ಟಿಕ ಆಹಾರ ನೀಡುವುದರ ಜತೆಗೆ ಶಿಕ್ಷಣ ಕಲಿಕೆಯ ಆಸಕ್ತಿಯನ್ನು ಮೂಡಿಸಬೇಕು. ಅಲ್ಲದೆ, ಕೇಂದ್ರದ ಸುತ್ತಲಿನ ಪರಸರವನ್ನು ಸ್ವಚ್ಛವಾಗಿಡಿ ಎಂದು ಸಲಹೆ ನೀಡಿದರು.

    ಬಿಇಒ ಪದ್ಮನಾಭ ಕರಣಂ, ಗ್ರಾಪಂ ಉಪಾಧ್ಯಕ್ಷೆ ನೇತ್ರಾವತಿ ಮಂಜುನಾಥ, ಪಿಡಿಒ ಬಿ.ಬಸಮ್ಮ, ಕಾರ್ಯದರ್ಶಿ ಸುಂಕದ ನಾಗರಾಜ, ಗ್ರಾಪಂ ಸದಸ್ಯರಾದ ವನಜಾಕ್ಷಿ ಅಜ್ಜಣ್ಣ, ಲಕ್ಷ್ಮೀ ಚೌಡಪ್ಪ, ಕಲಾವತಿ ಸಿದ್ಧಲಿಂಗಪ್ಪ, ಲಕ್ಷ್ಮೀ ರಜನಿಕಾಂತ್,

    ಉಮಾದೇವಿ, ಟಿ.ಸಿದ್ದಪ್ಪ, ಅಡವಿ ನಾಗರಾಜ್, ಇಸಿಒ ಜಿಲಾನ್, ಸಿಆರ್ ಪಿ ಲೋಕೇಶ್, ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿ ತಪಸ್ವಿ, ನಿವೃತ್ತ ಶಿಕ್ಷಕ ಮಲ್ಡೆಪ್ಪರ ನಾಗಪ್ಪ, ಅಂಗನವಾಡಿ ಕಾರ್ಯಕರ್ತೆಯರಾದ ಪಾಹಿಮಾ, ಮಂಜುಳಾ, ಶಶಿರೇಖಾ, ಆಶಾ ಕಾರ್ಯಕರ್ತೆ ಶಶಿಕಲಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts