More

  ಬಾಲ್ಯ ವಿವಾಹ ತಡೆದ ಜಿಲ್ಲಾ ಪಂಚಾಯಿತಿ ಸಿಇಒ, ಪಾಲಕರಿಂದ ಮುಚ್ಚಳಿಕೆ ಬರೆಸಿಕೊಂಡು ಅರಿವು

  ಕಾನಹೊಸಹಳ್ಳಿ: ಸಮೀಪದ ಪಾಲಯ್ಯನಕೋಟೆ ಗ್ರಾಮದಲ್ಲಿ ಭಾನುವಾರ ನಡೆಯಬೇಕಿದ್ದ ಇಬ್ಬರು ಅಪ್ರಾಪ್ತೆಯರ ಬಾಲ್ಯ ವಿವಾಹವನ್ನು ವಿಜಯನಗರ ಜಿಪಂ ಸಿಇಒ ಸದಾಶಿವ ಪ್ರಭು ನೇತೃತ್ವದ ತಂಡೆ ತಡೆದಿದೆ.

  ಗ್ರಾಮದ ಗುರಿಕಾರ ಕೊಟ್ರೇಶ ಮತ್ತು ಕೊಟ್ರಮ್ಮ ದಂಪತಿಯ ಇಬ್ಬರು ಅಪ್ರಾಪ್ತ ಪುತ್ರಿಯರ ವಿವಾಹ ವಿಷಯ ತಿಳಿದ ಜಿಪಂ ಸಿಇಒ ಸದಾಶಿವ ಪ್ರಭು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರೊಂದಿಗೆ ಶನಿವಾರ ರಾತ್ರಿ ಗ್ರಾಮಕ್ಕೆ ತೆರಳಿ, ಪಾಲಕರಿಗೆ ಬಾಲ್ಯವಿವಾಹ ಅರಿವು ಮೂಡಿಸಿ ಮದುವೆ ನಿಲ್ಲಿಸಿದ್ದಾರೆ.

  ಇದನ್ನೂ ಓದಿ: ಮದುವೆಮನೆಯಲ್ಲಿ ಆಹಾರ ಸೇವಿಸಿ ಆಸ್ಪತ್ರೆ ಸೇರಿದ 10 ಮಂದಿ ಬಾಲಕರು

  ನಂತರ ಮಾತನಾಡಿದ ಸಿಇಒ, ಬಾಲ್ಯ ವಿವಾಹ ಮಾಡುವುದು ಅಪರಾಧ. ಇದನ್ನು ಆಯೋಜಿಸುವ ಪಾಲಕರು, ಸಂಬಂಧಿಕರ ವಿರುದ್ಧ ಕೇಸ್ ದಾಖಲಿಸಲಾಗುತ್ತದೆ. ಬಾಲ್ಯ ವಿವಾಹದಿಂದ ಮಕ್ಕಳ ಬಾಲ್ಯ ಹಾಳಾಗುತ್ತದೆ. ಸಂಸಾರದ ಜವಾಬ್ದಾರಿ, ಹೆರಿಗೆ ತೊಂದರೆ ಹೀಗೆ ನಾನಾ ಸಮಸ್ಯೆ ಸುಳಿಗೆ ಸಿಲುಕುತ್ತಾರೆಂದು ಅರಿವಿನ ಮಾತನಾಡಿ, ಬಾಲ್ಯ ವಿವಾಹ ಮಾಡದಂತೆ ಪಾಲಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡರು.

  ಗ್ರಾಮಸಭೆ ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಬಾಲ್ಯ ವಿವಾಹ ದುಷ್ಪರಿಣಾಮ ಕುರಿತು ಅರಿವು ಮೂಡಿಸುವಂತೆ ಸ್ಥಳೀಯ ಆಡಳಿತಕ್ಕೆ ಸೂಚಿಸಿದರು. ಕೂಡ್ಲಿಗಿ ಸಿಡಿಪಿಒ ನಾಗನಗೌಡ, ತಾಲೂಕು ವೈದ್ಯಾಧಿಕಾರಿ ಡಾ.ಎಸ್.ಪಿ. ಪ್ರದೀಪ್, ಕಾನಹೊಸಹಳ್ಳಿ ಠಾಣೆ ಎಎಸ್‌ಐ ಎಸ್.ಕೆ.ಜಿಲಾನ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts