More

    ಬಲವಂತದ ಮದುವೆ ನಿಲ್ಲಿಸಲು ಫೇಸ್​ಬುಕ್​ ಮೂಲಕ ಅಪ್ರಾಪ್ತೆಯ ಮನವಿ: ನೆರವಿಗೆ ಧಾವಿಸಿದ ಬೆಂಗಳೂರು ಪೊಲೀಸರು

    ಬೆಂಗಳೂರು: ಮನೆಯವರು ಬಲವಂತವಾಗಿ ಮದುವೆ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಳಲು ತೊಡಿಕೊಂಡ ಅಪ್ರಾಪ್ತ ಬಾಲಕಿಯ ನೆರವಿಗೆ ಬೆಂಗಳೂರು ನಗರ ಪೊಲೀಸರು ಧಾವಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಹದಿನೈದು ವರ್ಷದ ಬಾಲಕಿಗೆ ಕುಟುಂಬದವರು ಬಲವಂತವಾಗಿ ಮದ್ವೆ ನಿಶ್ಚಯ ಮಾಡಿರುವ ಹಿನ್ನೆಲೆಯಲ್ಲಿ ಸ್ನೇಹಿತೆಯ ಫೇಸ್​ಬುಕ್​ ಮೂಲಕ ಬೆಂಗಳೂರು ಸಿಟಿ ಪೊಲೀಸ್​​ ಫೇಸ್​ಬುಕ್​ ಖಾತೆಗೆ ಬಾಲಕಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದಾಳೆ. ತಂದೆಯ ನಂಬರ್ ಹಾಕಿ ತಿಳಿ ಹೇಳಲು ಬಾಲಕಿ ಕೋರಿದ್ದಾಳೆ. ಬಾಲಕಿಯ ಪೋಸ್ಟ್​ಗೆ ಸ್ಪಂದಿಸಿರುವ ನಗರ ಪೊಲೀಸರು ನೆರವಿಗೆ ಧಾವಿಸಿದ್ದಾರೆ.

    ಇದೇ ತಿಂಗಳು 30 ರಂದು ಬಾಲ್ಯ ವಿವಾಹಕ್ಕೆ ಬಾಲಕಿಯ ಪೋಷಕರು ಮುಂದಾಗಿದ್ದರು. ಹೀಗಾಗಿ ಬೆಂಗಳೂರು ಪೊಲೀಸರು ಮೈಸೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಂದಹಾಗೆ ಬಾಲಕಿ ಮೈಸೂರು ಜಿಲ್ಲೆಯ ಜಯಪುರ ಗ್ರಾಮದವಳಾಗಿದ್ದು, 9ನೇ ತರಗತಿಯವರೆಗೂ ಓದಿದ್ದಾಳೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts