ಬೆಳಗ್ಗೆ ಪಾಸಿಟಿವ್, ರಾತ್ರಿ ನೆಗೆಟಿವ್, ಜಿಲ್ಲೆಯಲ್ಲಿ ಮತ್ತೆ ಕರೊನಾ ವರದಿ ಗೊಂದಲ

1 Min Read
ಬೆಳಗ್ಗೆ ಪಾಸಿಟಿವ್, ರಾತ್ರಿ ನೆಗೆಟಿವ್, ಜಿಲ್ಲೆಯಲ್ಲಿ ಮತ್ತೆ ಕರೊನಾ ವರದಿ ಗೊಂದಲ

ಚಿಕ್ಕಮಗಳೂರು: ಸೋಮವಾರ ಬೆಳಗ್ಗೆ ಟ್ರಾಫಿಕ್ ಪೊಲೀಸ್ ಠಾಣೆ ಸಿಬ್ಬಂದಿಯೊಬ್ಬರ ಕರೊನಾ ವರದಿ ಪಾಸಿಟಿವ್ ಬಂದಿದ್ದರಿಂದ ಆತಂಕಕ್ಕೆ ಒಳಗಾಗಿದ್ದರು. ಆದರೆ ರಾತ್ರಿ ರ್ಯಾಂಡಮ್ ಟೆಸ್ಟ್​ನ ವರದಿ ನೆಗೆಟಿವ್ ಬಂದಿದ್ದಕ್ಕೆ ನಿರಾಳರಾದರು.

ವಿಜಯಪುರಕ್ಕೆ ಹೋಗಿಬಂದಿದ್ದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೊಬ್ಬರು ಜು.10ರಂದು ಗಂಟಲು ದ್ರವ ಪರೀಕ್ಷೆಗೆ ನೀಡಿದ್ದರು. ಜು.20ರಂದು ಬೆಳಗ್ಗೆ ಆಸ್ಪತ್ರೆ ಸಿಬ್ಬಂದಿ ಕರೆ ಮಾಡಿ ಸೋಂಕು ತಗುಲಿದೆ. ಆರೋಗ್ಯ ಸಿಬ್ಬಂದಿ ಬಂದು ನಿಮ್ಮನ್ನು ಕರೆದುಕೊಂಡು ಹೋಗುತ್ತಾರೆ. ನೀವು ಮನೆಯಲ್ಲೇ ಇರಬೇಕೆಂದು ಸೂಚಿಸಿದರು.

ಗಂಟೆಯಾದರೂ ಆರೋಗ್ಯ ಇಲಾಖೆ ಸಿಬ್ಬಂದಿ ಬಾರದಿದ್ದಾಗ ಪೊಲೀಸ್ ಸಿಬ್ಬಂದಿಯೇ ಹೋಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದ ಟ್ರಾಫಿಕ್ ಠಾಣೆ ಹಾಗೂ ಪಕ್ಕದ ಡಿವೈಎಸ್​ಪಿ ಕಚೇರಿಯ 25ಕ್ಕೂ ಹೆಚ್ಚು ಸಿಬ್ಬಂದಿ ಸ್ವಯಂ ಕ್ವಾರಂಟೈನ್​ಗೆ ಒಳಗಾಗಿ ಎರಡೂ ಕಚೇರಿಯನ್ನು ಸ್ಯಾನಿಟೈಸ್ ಮಾಡಿ ಸೀಲ್​ಡೌನ್ ಮಾಡಲಾಯಿತು.

ಜು.10ರಂದು ನೀಡಿದ ಗಂಟಲು ದ್ರವದ ವರದಿ 11 ದಿನಗಳ ನಂತರ ಬಂದ ಹಿನ್ನೆಲೆಯಲ್ಲಿ ಡಿವೈಎಸ್​ಪಿ ಪಾಸಿಟಿವ್ ಬಂದ ಸಿಬ್ಬಂದಿಯನ್ನು ಮಧ್ಯಾಹ್ನ ರ್ಯಾಂಡಮ್ ಟೆಸ್ಟ್​ಗೆ ಒಳಪಡಿಸುವಂತೆ ಸೂಚಿಸಿದ್ದಾರೆ. ರ್ಯಾಂಡಮ್ ಟೆಸ್ಟ್​ನಲ್ಲಿ ಸಿಬ್ಬಂದಿ ವರದಿ ನೆಗೆಟಿವ್ ಬಂದಿದ್ದರಿಂದ ಸ್ವಯಂ ಕ್ವಾರಂಟೈನ್​ಗೆ ಒಳಗಾದರು. ಉಳಿದ ಸಿಬ್ಬಂದಿ ಮಂಗಳವಾರ ಠಾಣೆಯ ಸೀಲ್​ಡೌನ್ ತೆರವುಗೊಳಿಸಿ ಕರ್ತವ್ಯಕ್ಕೆ ಹಾಜರಾದರು. ನೆಗೆಟಿವ್ ವರದಿ ಬಂದ ಸಿಬ್ಬಂದಿಗೆ 14 ದಿನ ಹೋಮ್ ಕ್ವಾರಂಟೈನ್​ಗೆ ಸೂಚಿಸಲಾಗಿದೆ.

See also  ಡಿಪ್ಲೊಮಾ, ಇಂಜಿನಿಯರಿಂಗ್​ ಪದವೀಧರರಾ? ಚಿಕ್ಕಮಗಳೂರಿನಲ್ಲಿದೆ ಸಮಾಲೋಚಕರ 18 ಹುದ್ದೆಗಳು
Share This Article