More

    ಸಂಬಳ ನೀಡದಿದ್ದಕ್ಕೆ ಲಾರಿಯನ್ನೇ ಕಳವು ಮಾಡಿದ ಚಾಲಕ

    ಬಣಕಲ್:ಲಾಕ್​ಡೌನ್​ನಿಂದ ಮಾಲೀಕ ಸಂಬಳ ನೀಡಲಿಲ್ಲ ಎಂಬ ಕಾರಣಕ್ಕೆ ಕಡೂರಿನಿಂದ ಟಿಪ್ಪರ್ ಲಾರಿ ಕಳವು ಮಾಡಿಕೊಂಡು ಮೂಡಿಗೆರೆಗೆ ಹೊರಟಿದ್ದ ಚಾಲಕನನ್ನು ಕೊಟ್ಟಿಗೆಹಾರ ಚೆಕ್​ಪೋಸ್ಟ್​ನಲ್ಲಿ ಬಂಧಿಸಿ ಟಿಪ್ಪರ್ ವಶಪಡಿಸಿಕೊಳ್ಳಲಾಗಿದೆ.

    ಮೂಡಬಿದರೆಯ ರಂಗಪ್ಪ ಎಂಬುವರು ಕಡೂರಿನ ಟಿಪ್ಪರ್ ಮಾಲೀಕರ ಬಳಿ ಡ್ರೖೆವರ್ ಆಗಿ ಕೆಲಸ ಮಾಡುತ್ತಿದ್ದರು. ಲಾಕ್​ಡೌನ್ ಸಂದರ್ಭದಲ್ಲಿ ಸಂಬಳ ಕೊಟ್ಟಿಲ್ಲ ಎಂಬ ಕಾರಣಕ್ಕೆ ಟಿಪ್ಪರ್ ಲಾರಿಯನ್ನು ಕಳವು ಮಾಡಿಕೊಂಡು ಮೂಡಿಗೆರೆಗೆ ತೆರಳುತ್ತಿದ್ದಾಗ ಕೊಟ್ಟಿಗೆಹಾರ ಚೆಕ್​ಪೋಸ್ಟ್​ನಲ್ಲಿ ಸಿಕ್ಕುಬಿದ್ದಿದ್ದಾನೆ. ಲಾಕ್​ಡೌನ್ ಸಂದರ್ಭದಲ್ಲಿ ಎಲ್ಲಿಗೆ ಹೋಗುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿದಾಗ ಸಂಬಳ ಕೊಡದ ಕಾರಣ ಟಿಪ್ಪರ್ ತೆಗೆದುಕೊಂಡು ಮೂಡಿಗೆರೆಗೆ ಹೋಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts