More

    ಉಮೇದುವಾರಿಕೆ ವಾಪಸ್ ಪಡೆದ ನಂತರ ಹೆರಿಗೆ !

    ಚಿಕ್ಕಮಗಳೂರು: ವೈದ್ಯರು ಸಂಭಾವ್ಯ ಹೆರಿಗೆ ದಿನ ತಿಳಿಸಿದ್ದಾರೆ. ಗ್ರಾಮಸ್ಥರು ಕೈಗೊಂಡ ನಿರ್ಣಯದ ಪ್ರಕಾರ ಅದೇ ದಿನ ಗ್ರಾಪಂ ಚುನಾವಣೆಗೆ ಸಲ್ಲಿಸಿರುವ ನಾಮಪತ್ರ ವಾಪಸ್ ಪಡೆಯಬೇಕು. ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಕೊನೆಗೂ ಗ್ರಾಮಸ್ಥರ ನಿರ್ಣಯದಂತೆ ಮಹಿಳೆ ಗ್ರಾಪಂ ಕಚೇರಿಗೆ ತೆರಳಿ ಉಮೇದುವಾರಿಕೆ ಹಿಂತೆಗೆದುಕೊಂಡು ಆಸ್ಪತ್ರೆಗೆ ದಾಖಲಾದರು. ಕೆಲವೇ ಸಮಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಈ ಘಟನೆ ನಡೆದದ್ದು ಚಿಕ್ಕಮಗಳೂರು ತಾಲೂಕಿನ ಐಡಿ ಪೀಠ ಗ್ರಾಮದಲ್ಲಿ.

    ಕಸ್ತೂರಿ ರಂಗನ್ ವರದಿ ವಿರೋಧಿಸಿ ಎಲ್ಲರೂ ನಾಮಪತ್ರ ಹಿಂತೆಗೆದುಕೊಳ್ಳಬೇಕು ಎಂದು ಐಡಿ ಪೀಠ ಗ್ರಾಮದಲ್ಲಿ ನಿರ್ಣಯ ಮಾಡಲಾಗಿತ್ತು. 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 10 ಜನ ಒಟ್ಟಿಗೆ ತೆರಳಿ ವಾಪಸ್ ಪಡೆದಿದ್ದರು.

    ಗರ್ಭಿಣಿಗೆ ಅದೇ ದಿನ ಹೆರಿಗೆಗೆ ಆಸ್ಪತ್ರೆಗೆ ದಾಖಲಾಗಬೇಕಿತ್ತು. ಆದರೆ ಕಸ್ತೂರಿ ರಂಗನ್ ವರದಿ ವಿರೋಧಿಸಿ ಗ್ರಾಮಸ್ಥರು ಚುನಾವಣೆ ಬಹಿಷ್ಕಾರದ ನಿರ್ಧಾರ ಕೈಗೊಂಡು ಎಲ್ಲರೂ ನಾಮಪತ್ರ ವಾಪಸ್ ಪಡೆಯಬೇಕು ಎಂಬ ನಿರ್ಧಾರ ಕೈಗೊಂಡಿದ್ದರು.

    ಸುಮಿತ್ರಾ ಅವರಿಗೆ ವೈದ್ಯರು ಡಿ.14 ರಂದು ಸಂಭಾವ್ಯ ಹೆರಿಗೆ ದಿನ ಎಂದು ಹೇಳಿದ್ದರು. ಆದರೂ ಗ್ರಾಮದ ಜನರ ತೀರ್ವನಕ್ಕೆ ಮನ್ನಣೆ ನೀಡಿ ಪತಿ ಸುಂದರ, ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಅನಿಲ್​ಕುಮಾರ್, ಆಶಾ ಕಾರ್ಯಕರ್ತೆ ದೇವಕಿ, ಸೌಮ್ಯಾ ಅವರ ಸಹಕಾರದಲ್ಲಿ ಗ್ರಾಪಂ ಕಚೇರಿಗೆ ತೆರಳಿ ನಾಮಪತ್ರ ವಾಪಸ್ ಪಡೆದು ಕೂಡಲೆ ಸರ್ಕಾರಿ ಆಸ್ಪತ್ರೆಗೆ ದಾಖಲಾದರು. ಆಸ್ಪತ್ರೆಗೆ ದಾಖಲಾದ ಕೆಲವೇ ಸಮಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ಕಸ್ತೂರಿ ರಂಗನ್ ವರದಿ ವಿರೋಧಿಸಿ ಯಾರೂ ನಾಮಪತ್ರ ಸಲ್ಲಿಸಬಾರದು ಎಂದು ಗ್ರಾಮದಲ್ಲಿ ತೀರ್ಮಾನ ಕೈಗೊಂಡಿದ್ದರು. ಆದರೆ ಇಬ್ಬರು ನಾಮಪತ್ರ ಸಲ್ಲಿಸಿದ್ದರಿಂದ ಜನರೇ ಬೆಂಬಲಿಸಿ ನಾಮಪತ್ರ ಹಾಕುವಂತೆ ಒತ್ತಾಯ ಮಾಡಿದ್ದರಿಂದ ಸುಮಿತ್ರಾ ಉಮೇದುವಾರಿಕೆ ಸಲ್ಲಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts