More

    ಸಚಿವ ಸುಧಾಕರ್ ತಂದೆಗೆ ಕರೊನಾ: ಜಿಲ್ಲಾಧಿಕಾರಿ ಸೇರಿ ಹಲವರಿಗೆ ಆತಂಕ

    ಚಿಕ್ಕಬಳ್ಳಾಪುರ: ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರ ತಂದೆ ಕೇಶವರೆಡ್ಡಿ ಅವರಿಗೆ ಕರೊನಾ ಸೋಂಕು ಇರುವುದು ಸೋಮವಾರ ದೃಢಪಟ್ಟಿರುವುದು ಜಿಲ್ಲಾಡಳಿತಕ್ಕೆ ಆತಂಕವನ್ನು ಹೆಚ್ಚಿಸಿದೆ.

    ಸಚಿವರ ತಂದೆಗೆ ಕರೊನಾ ಪಾಸಿಟಿವ್ ಬಂದರೆ ಜಿಲ್ಲಾಡಳಿತಕ್ಕೇಕೆ ಚಿಂತೆ ಎಂಬ ಪ್ರಶ್ನೆ ಉದ್ಭವಿಸಬಹುದು. ಅದಕ್ಕೆ ಕಾರಣವಿದೆ. ಕೇಶವರೆಡ್ಡಿ ಅವರು ಚಿಕ್ಕಬಳ್ಳಾಪುರದ ಜಿಲ್ಲಾ ಪಂಚಾಯ್ತಿಯ ಹಾಲಿ ಸದಸ್ಯರು. ಕಳೆದ ಜೂನ್ 19ರಂದು ಜಿಲ್ಲಾಧಿಕಾರಿ ಆರ್. ಲತಾ ಅವರ ಹುಟ್ಟುಹಬ್ಬಕ್ಕೆ ಕೇಶವರೆಡ್ಡಿ ಅವರೇ ಸ್ವತಃ ಹೋಗಿ, ನೇರವಾಗಿ ಶುಭಾಶಯ ಕೋರಿದ್ದರು. ಇದನ್ನೂ ಓದಿ ಸಂಘರ್ಷದ ನಡುವೆಯೇ ಮಹೋನ್ನತ ಸಾಹಸ; 72 ತಾಸುಗಳಲ್ಲಿ ಗಾಲ್ವಾನ್​ ನದಿ ಸೇತುವೆ ಕಾಮಗಾರಿ ಪೂರ್ಣ

    ಚಿಕ್ಕಬಳ್ಳಾಪುರದಲ್ಲಿನ ಸಚಿವರ ಕಚೇರಿಯಲ್ಲಿಯೂ ಕೇಶವರೆಡ್ಡಿ ಅವರು ಸ್ಥಳೀಯ ಮುಖಂಡರಗಳೊಂದಿಗೆ ಸಭೆ ನಡೆಸಿದ್ದರು. ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರದಲ್ಲಿ ಇರುವ ತಮ್ಮ ನಿವಾಸದಲ್ಲಿ ಎರಡು ದಿನ ಇದ್ದು ಜನರೊಂದಿಗೆ ಬೆರೆತ್ತಿದ್ದರು.

    ಕೇಶವರೆಡ್ಡಿ ಅವರೊಂದಿಗೆ ನೇರ ಸಂಪರ್ಕದಲ್ಲಿದ್ದ ಕೋಚಿಮುಲ್ ಮಾಜಿ ನಿರ್ದೇಶಕರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮುಖಂಡರಲ್ಲಿಯೂ ಈಗ ಆತಂಕ ಶುರುವಾಗಿದೆ. ಕೇಶವರೆಡ್ಡಿಯವರ ಸಂಪರ್ಕಕ್ಕೆ ಬಂದಿದ್ದ ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ಅಧಿಕಾರಿಗಳಿಗೆ ಕ್ವಾರಂಟೈನ್ ಭೀತಿಯೂ ಎದುರಾಗಿದೆ.

    ಚೀನಾ ಸಂಘರ್ಷದಲ್ಲಿ ಬಲಿಯಾದ ಯೋಧನ ಕುಟುಂಬಕ್ಕೆ ಐದು ಕೋಟಿ ರೂ., ಪತ್ನಿಗೆ ಸಹಾಯಕ ಆಯುಕ್ತೆ ಹುದ್ದೆ ನೀಡಿದ ತೆಲಂಗಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts