More

    ಮತದಾನ, ಸಾಕ್ಷರತೆ ಸರಾಸರಿ ತೃಪ್ತಿದಾಯಕವಾಗಿಲ್ಲ

    ಚಿಕ್ಕಬಳ್ಳಾಪುರ: ಸಮಾಜದಲ್ಲಿ ಇತ್ತೀಚೆಗೆ ಚುನಾವಣಾ ಮತದಾನ ಮತ್ತು ಸಾಕ್ಷರತಾ ಸರಾಸರಿ ಪ್ರಮಾಣ ತೃಪ್ತಿದಾಯಕವಾಗಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಭೈರಪ್ಪ ಶಿವಲಿಂಗ ನಾಯಿಕ ಅಸಮಾಧಾನ ವ್ಯಕ್ತಪಡಿಸಿದರು.

    ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಸ್ವೀಪ್ ಸಮಿತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

    ದೇಶದಲ್ಲಿ ಪ್ರತಿಯೊಬ್ಬ ಮತದಾರರು ಸಹ ತನ್ನದೇ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಹೊಂದಿದ್ದಾನೆ. ಇದನ್ನು ಪ್ರಾಮಾಣಿಕವಾಗಿ ಚಲಾಯಿಸಲು ಚುನಾವಣೆಯ ಮಹತ್ವ, ಪ್ರಜಾಪ್ರಭುತ್ವ ವ್ಯವಸ್ಥೆಯ ಅರಿವು ಅಗತ್ಯ. ಇಲ್ಲದಿದ್ದಲ್ಲಿ ಸಾಮಾನ್ಯ ಜನರ ಅಜ್ಞಾನದಿಂದ ಚುನಾವಣೆಯಲ್ಲಿ ಭ್ರಷ್ಟಾಚಾರಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದರು.

    ಜಿಪಂ ಸಿಇಒ ಪಿ.ಶಿವಶಂಕರ್ ಮಾತನಾಡಿ, ಮತದಾರ ಯಾವುದೇ ಜಾತಿ, ಧರ್ಮ ಹಾಗೂ ಆಮಿಷಕ್ಕೊಳಗಾಗದೇ ನಿಷ್ಪಕ್ಷಪಾತವಾಗಿ ಒಳ್ಳೆಯ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಸ್ವೀಪ್ ಸಮಿತಿಯು ಜಾಗೃತಿ ಮೂಡಿಸುವ ಕೆಲಸವನ್ನು ಬಿರುಸಿನಿಂದ ಕೈಗೊಳ್ಳುತ್ತಿದೆ ಎಂದರು. ಜಿಲ್ಲಾಧಿಕಾರಿ ಆರ್.ಲತಾ, ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್, ಉಪವಿಭಾಗಾಧಿಕಾರಿ ಜಿ.ಸಂತೋಷ್ ಕುಮಾರ್, ತಹಸೀಲ್ದಾರ್ ಗಣಪತಿ ಶಾಸ್ತ್ರಿ ಮತ್ತಿತರರು ಇದ್ದರು.

    ವಿವಿಧ ಸ್ಪರ್ಧೆಗಳಲ್ಲಿ ವಿಜೇತರು: ಪ್ರೌಢಶಾಲಾ ವಿಭಾಗದ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಪಿ.ಜೆ. ಸೌಜನ್ಯ ಪ್ರಥಮ, ಎಸ್.ಸಿರಿ ದ್ವಿತೀಯ, ನಂದಿನಿ ತೃತೀಯ ಸ್ಥಾನ, ಇಂಗ್ಲಿಷ್ ಪ್ರಬಂಧ ಸ್ಪರ್ಧೆಯಲ್ಲಿ ಎಂ.ಭಾನುಪ್ರಿಯಾ ಪ್ರಥಮ, ಎಂ.ಸಮೀಕ್ಷಾ ದ್ವಿತೀಯ, ಪಿ.ಎನ್.ಮೌನಿ ತೃತೀಯ ಸ್ಥಾನ, ಭಿತ್ತಿ ಪತ್ರ ರಚನೆಯಲ್ಲಿ ಎನ್.ಚಂದುಕುಮಾರ್ ಪ್ರಥಮ, ಪೂಜಾ ಜೈನ್ ದ್ವಿತೀಯ, ಎಲ್.ಹರ್ಷಿತ ತೃತೀಯ, ರಸಪ್ರಶ್ನೆಯಲ್ಲಿ ಮಾಹಂತ್ ಮತ್ತು ಅಭಿಲಾಷ್ ಪ್ರಥಮ, ಆರ್.ತರುಣ್ ಮತ್ತು ವಿ.ಎ.ಆಕಾಶ್ ದ್ವಿತೀಯ, ಎಂ.ಪಿ.ವರ್ಷಿಣಿ ಮತ್ತು ಸಿ.ಎಸ್.ಗೌತಮಿ ತೃತೀಯ, ಪದವಿ ಪೂರ್ವ (ಪಿ.ಯು.ಸಿ) ವಿಭಾಗದ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಎನ್.ಹೇಮಾವತಿ ಪ್ರಥಮ, ಬಿ.ಎಂ.ಮೇಘನಾ ದ್ವಿತೀಯ, ಎ.ಎನ್.ವಿಷ್ಣು ತೃತೀಯ, ಇಂಗ್ಲಿಷ್ ಪ್ರಬಂಧ ಸ್ಪರ್ಧೆಯಲ್ಲಿ ಬಿ.ಕುಸುಮಗೌಡ ಪ್ರಥಮ, ಸೈಯದ್ ಗಜನ್ ಫಾ ಮಹದಿ ದ್ವಿತೀಯ, ಆರ್.ದಿವ್ಯಶ್ರೀ ತೃತೀಯ, ಭಿತ್ತಿ ಪತ್ರ ರಚನೆಯಲ್ಲಿ ಎಚ್.ಜೆ.ಹರ್ಷವರ್ಧನ್ ಪ್ರಥಮ, ಜಿ.ಭರತ್ ದ್ವಿತೀಯ, ಡಿ.ನವೀನ್ ಕುಮಾರ್ ತೃತೀಯ, ಪದವಿ ವಿಭಾಗ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಕೆ.ವಿ.ಮುನೀಂದ್ರ ಪ್ರಥಮ, ಆರ್.ಮೌನಿಕ ದ್ವಿತೀಯ, ಎ.ಶ್ಯಾಮಲಾ ತೃತೀಯ, ಇಂಗ್ಲಿಷ್ ಪ್ರಬಂಧ ಸ್ಪರ್ಧೆಯಲ್ಲಿ ಎಚ್.ಮುಸ್ಕಾನ್ ಪ್ರಥಮ, ಎಸ್.ಸಾಯಿಮಾನಸ ದ್ವಿತೀಯ, ಎಂ.ಎ.ಸುಮ ತೃತೀಯ, ಭಿತ್ತಿ ಪತ್ರ ರಚನೆಯಲ್ಲಿ ಕೆ.ಆರ್.ರೇಖಾ ಪ್ರಥಮ, ಎಸ್.ಎನ್.ಶ್ರಾವಣಿ ದ್ವಿತೀಯ, ಬಿ.ಎ.ಯಶಸ್ವಿನಿ ತೃತೀಯ ಬಹುಮಾನ ಪಡೆದರು.

    ಅತ್ಯುತ್ತಮ ಬಿಎಲ್‌ಒಗಳು: ಬೂತ್ ಮಟ್ಟದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಬಿಎಲ್‌ಒ ಎಂ.ರಾಜಣ್ಣ ಮತ್ತು ಎಸ್.ಗಿರಿಜಾ (ಗೌರಿಬಿದನೂರು), ಕೆ.ಎಲ್.ರಾಮರಾಜು ಮತ್ತು ಶಾಹಿಸ್ತಾನ್ವಾಜ್ (ಬಾಗೇಪಲ್ಲಿ), ಎಚ್.ಸಿ.ಶಾಂತಪ್ಪ ಮತ್ತು ಎಚ್.ಡಿ.ಸರ್ವಮಂಗಳ (ಚಿಕ್ಕಬಳ್ಳಾಪುರ), ಡಿ.ಸಿ.ಉಮಾ ಮತ್ತು ಪಿ.ರಾಮಚಂದ್ರ (ಶಿಡ್ಲಘಟ್ಟ), ಕೆ.ವೇದಾವತಿ ಮತ್ತು ಸಿ.ವಿ.ಆಂಜನೇಯ ಪ್ರಸಾದ್ (ಚಿಂತಾಮಣಿ)ಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

    ಅತ್ಯುತ್ತಮ ಇಎಲ್‌ಸಿಗಳು: ಅತ್ಯುತ್ತಮ ಮತದಾರರ ಸಾಕ್ಷರತಾ ಸಂಘಗಳಲ್ಲಿ ಕಾರ್ಯನಿರ್ವಹಿಸಿದ ಎಚ್.ಜೆ.ರಬ್ಬಾನಿ (ಗುಡಿಬಂಡೆ), ಕೋದಂಡರಾಮರೆಡ್ಡಿ (ಚಿಂತಾಮಣಿ), ಸಿ.ಎಂ.ಸುರೇಶ (ಶಿಡ್ಲಘಟ್ಟ), ಶ್ರೀಕೃಷ್ಣ (ಬಾಗೇಪಲ್ಲಿ), ರಾಮಲಿಂಗಪ್ಪ (ಚಿಕ್ಕಬಳ್ಳಾಪುರ), ಜೆ.ಸಿ.ರಾಮಚಂದ್ರಯ್ಯ (ಗೌರಿಬಿದನೂರು) ಅವರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts