More

    VIDEO: ಯಾರ್ರೀ ಅವರು… ಜಮೀರ್​ ಅಹ್ಮದ್​? ಸರ್ಕಾರದ ಕೆಲಸಕ್ಕೆ ಅವರ ಅಪ್ಪಣೆ ಬೇಕಾ.. ; ಶಾಸಕ ಜಮೀರ್​ ವಿರುದ್ಧ ಕೆಂಡಾಮಂಡಲರಾದ ಸಿಎಂ ಯಡಿಯೂರಪ್ಪ

    ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಗಲಭೆಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಶಾಸಕ ಜಮೀರ್​ ಅಹ್ಮದ್​ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಂದು ಕೃಷ್ಣಾದಲ್ಲಿ ಮಾತನಾಡಿದ ಅವರು, ಪಾದರಾಯನಪುರದಲ್ಲಿ ನಡೆದ ಗೂಂಡಾಗಿರಿಯ ಬಗ್ಗೆ ನಿನ್ನೆ ರಾತ್ರಿಯಿಡೀ ಚರ್ಚೆಯಾಗಿದೆ. ಯಾರ ಆರೋಗ್ಯ ಕಾಪಾಡಲು ಕಾಳಜಿ ವಹಿಸಿದ್ದೆವೋ ಅವರೇ ಗಲಭೆ ಸೃಷ್ಟಿಸಿದ್ದಾರೆ. ಇದನ್ನು ಸಹಿಸುವುದಿಲ್ಲ. ಆರೋಪಿಗಳ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿ ಏನು ಕ್ರಮ ಕೈಗೊಳ್ಳಬಹುದೋ ಅದನ್ನೆಲ್ಲ ಕೈಗೊಳ್ಳುತ್ತೇವೆ ಎಂದಿದ್ದಾರೆ.

    ಗೂಂಡಾ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್​ ಎಂಬ ಪ್ರಶ್ನೆಯಲ್ಲ. ಯಾರು ತಪ್ಪು ಮಾಡಿದರೂ ಅವರ ವಿರುದ್ಧ ಕಠಿಣ ಕ್ರಮ ವಹಿಸುತ್ತೇವೆ ಎಂದು ಹೇಳಿದ್ದಾರೆ.

    ಪಾದರಾಯನಪುರಕ್ಕೆ ರಾತ್ರಿ ಹೋಗಬಾರದಿತ್ತು. ಆದರೂ ನನ್ನ ಗಮನಕ್ಕೆ ತರದೆ ಆರೋಗ್ಯಾಧಿಕಾರಿಗಳು, ಪೊಲೀಸರು ಹೋಗಿದ್ದಾರೆ ಎಂದು ಶಾಸಕ ಜಮೀರ್​ ಅಹ್ಮದ್​​ ಹೇಳಿದ್ದರ ಬಗ್ಗೆ ಪ್ರಶ್ನಿಸಿದಾಗ ಮುಖ್ಯಮಂತ್ರಿ ಒಮ್ಮೆಲೇ ಜಮೀರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಅವರು ಯಾರ್​ ರೀ..? ಅವರಿಗೆ ಏನ್​ ಸಂಬಂಧ? ಜಮೀರ್​ ಯಾರು ನಮಗೆ ಹೇಳೋದಿಕ್ಕೆ..ನಮ್ಮ ಕೆಲಸ ಮಾಡಲು ಜಮೀರ್​ ಅಹ್ಮದ್​ ಅಪ್ಪಣೆ ಬೇಕಾ? ಅವರಿಗೂ, ಇದಕ್ಕೂ ಏನು ಸಂಬಂಧ ಎಂದು ಕಟುವಾಗಿ ಪ್ರಶ್ನಿಸಿದರು.
    ಅವರು ಈ ರೀತಿ ನೀಡ್ತಿರೋ ಹೇಳಿಕೆಯಿಂದ ನಾವೇನು ಅಂದುಕೊಳ್ಳಬೇಕು? ಗಲಾಟೆಗೆ ಅವರೇ ಪ್ರಚೋದನೆ ನೀಡುತ್ತಿದ್ದಾರೆಂದು ಭಾವಿಸಬೇಕಾ..ಶಾಸಕರಾಗಿ ಅವರು ಮೊದಲು ಜನರಿಗೆ ತಿಳಿವಳಿಕೆ ಹೇಳಲಿ. ಅದರ ಬದಲು ಸಮರ್ಥನೆ ಮಾಡಿಕೊಳ್ಳುವುದು ಸರಿಯಲ್ಲ. ಜಮೀರ್ ಅವರದ್ದು ಬೇಜವಾಬ್ದಾರಿಯ ಪರಮಾವಧಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಮುಧೋಳ, ಜಮಖಂಡಿಯಲ್ಲಿ ಹೆಚ್ಚಾಗಿದೆ ಕರೊನಾ ಭೀತಿ; ರಸ್ತೆಗಳಿಗೆ ಕಲ್ಲು, ಮಣ್ಣು ಸುರಿಯುತ್ತಿರುವ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts