More

    ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನಿಗೆ ಒತ್ತಾಯ

    ಬಾಳೆಹೊನ್ನೂರು: ದೇಶಾದ್ಯಂತ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗಿದ್ದು ಈ ಬಗ್ಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಜರಂಗದಳದ ಸದಸ್ಯರು ನಾಡಕಚೇರಿ ಅಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

    ಜಿಲ್ಲಾ ಸಂಚಾಲಕ ಶಶಾಂಕ್ ಹೇರೂರು ಮಾತನಾಡಿ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿವೆ. ಹಿಂದು ಸಮಾಜದ ಮುಗ್ಧ ಹೆಣ್ಣು ಮಕ್ಕಳು ಈ ಸಂಚಿಗೆ ಬಲಿಯಾಗುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಅನೇಕ ಕೋಮು ಸಂಘರ್ಷ, ಆತ್ಮಹತ್ಮೆ, ಹಲ್ಲೆ, ಕೊಲೆಗಳಂತಹ ಪ್ರಕರಣಗಳು ಹೆಚ್ಚುತ್ತಿವೆ ಎಂದು ದೂರಿದರು.

    ಪ್ರಮುಖವಾಗಿ ಕಾಲೇಜು ಕ್ಯಾಂಪಸ್, ಮಹಿಳಾ ಹಾಸ್ಟೆಲ್, ಹೋಟೆಲ್, ಸಿನಿಮಾ ಮಂದಿರ, ಮೊಬೈಲ್ ಸೆಂಟರ್ ಮುಂತಾದ ಕೇಂದ್ರಗಳನ್ನು ಗುರಿಯಾಗಿಟ್ಟುಕೊಂಡು ಲವ್ ಜಿಹಾದ್ ತಂತ್ರ ಮಾಡಲಾಗುತ್ತಿದೆ. ಪ್ರೀತಿ, ಪ್ರೇಮ, ಅತ್ಯಾಚಾರ, ವಿಹಾರ ನಡೆಸಿ ಬ್ಲ್ಯಾಕ್​ವೆುೕಲ್, ಅಪಹರಣ ಇತ್ಯಾದಿ ಹಂತದವರೆಗೂ ತಲುಪಿ ಮತಾಂತರ ಕೃತ್ಯಗಳು ನಡೆಯುತ್ತಿವೆ ಎಂದು ಆರೋಪಿಸಿದರು.

    ಬಜರಂಗದಳದ ತಾಲೂಕು ಸಂಚಾಲಕ ಸಂದೀಪ್ ಶೆಟ್ಟಿ, ರವೀಂದ್ರಾಚಾರ್, ಸುಜಿತ್ ಪೂಜಾರಿ, ನವೀನ್ ಕರಗಣೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts