More

    ಕಾಯ್ದೆಯಿಂದ ಗೋಹತ್ಯೆ ತಪ್ಪಿಸಲು ಸಾಧ್ಯ

    ಸೊರಬ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದಲ್ಲಿ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆಯಿಂದ ಕೆಲವಡೆ ಸಾಧಕ-ಬಾಧಕಗಳು ಇರಬಹುದು. ಆದರೆ ಕಾಯ್ದೆಯಿಂದ ಗೋಹತ್ಯೆಯನ್ನು ತಪ್ಪಿಸಲು ಸಾಧ್ಯವಿದೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

    ಶನಿವಾರ ಪಟ್ಟಣದ ದಿವಾಕರ ಭಟ್ ಭಾವೆ ಫಾಮರ್್​ನಲ್ಲಿ ತಾಲೂಕು ಬಿಜೆಪಿ ಹಮ್ಮಿಕೊಂಡ 2 ದಿನದ ಮಂಡಲ ಪ್ರಶಿಕ್ಷಣವರ್ಗ ಉದ್ಘಾಟಿಸಿ ಮಾತನಾಡಿ, ಗೋ ಸಂರಕ್ಷಣೆ ಮತ್ತು ಗೋವಿನ ವಿಚಾರವಾಗಿ ನಿರ್ದಿಷ್ಟವಾದ ಕಾನೂನನ್ನು ಮುಖ್ಯಮಂತ್ರಿಗಳು ಜಾರಿಗೆ ತಂದಿದ್ದಾರೆ. ಇದರ ಸಾಧಕ-ಬಾಧಕಗಳು ಕೆಲವಡೆ ಇರಬಹುದು. ಆದರೆ ಗೋಹತ್ಯೆಯನ್ನು ಕಾನೂನು ಬದ್ಧವಾಗಿ ತಪ್ಪಿಸಲು ಮಾಡಿರುವ ಕಾಯ್ದೆಯಾಗಿದೆ. ಕೇಂದ್ರದಲ್ಲೂ ರಾಮ ಮಂದಿರ ನಿರ್ಮಾಣ ವಿಚಾರ ಮತ್ತಿತರರ ಗಟ್ಟಿ ನಿಲುವುಗಳನ್ನು ಹೊಂದಲು ಸಂಘಟನೆ ಪ್ರಮುಖ ಕಾರಣವಾಗಿದೆ. ಪಕ್ಷದ ಶಿಸ್ತು, ಧ್ಯೇಯ ಹಾಗೂ ನಾಯಕತ್ವದ ಗುಣಗಳನ್ನು ಬೆಳಸಿಕೊಳ್ಳಲು ಪ್ರಶಿಕ್ಷಣ ವರ್ಗ ಅನುಕೂಲವಾಗಲಿದೆ. ಪ್ರಶಿಕ್ಷಣ ವರ್ಗದ ಸಂದರ್ಭದಲ್ಲಿ ಸಂಘ ಪರಿವಾರದ ಹಿನ್ನೆಲೆಯಿಂದ ಬಂದ ಪಕ್ಷದ ಹಿರಿಯರು ಮಾರ್ಗದರ್ಶನ ನೀಡಲಿದ್ದಾರೆ ಎಂದರು.

    ಬಿಜೆಪಿಯ ವಿಕಾಸ ಮತ್ತು ಇತಿಹಾಸದ ಕುರಿತು ಮಾತನಾಡಿದ ಪಕ್ಷದ ಸೊರಬ ಪ್ರಭಾರಿ ಎಸ್.ಎನ್.ಚನ್ನಬಸಪ್ಪ, ದೇಶದ ಉಳಿವಿಗಾಗಿ ಆರಂಭವಾದ ಜನಸಂಘ ಕಾಲದಿಂದಲೂ ಪಕ್ಷದ ವಿಚಾರಧಾರೆಗಳು ಬದಲಾಗಿಲ್ಲ. ಕಾಶ್ಮೀರ ಹೋರಾಟ, ರಾಮ ಜನ್ಮ ಭೂಮಿ ಹೋರಾಟ, ಏಕತಾ ಯಾತ್ರೆ ಸೇರಿ 12ಕ್ಕೂ ಹೆಚ್ಚು ಪ್ರಮುಖ ಹೋರಾಟಗಳ ಮೂಲಕ ರಾಜಕೀಯ ಸಂಘಟನೆಯಾಗಿ ಹೊರ ಹೊಮ್ಮಿದ ಬಿಜೆಪಿಯಲ್ಲಿ ನಿಸ್ವಾರ್ಥವಾಗಿ, ಅಕಾರಕ್ಕಾಗಿ ಆಸೆ ಪಡೆದೆ ರಾಷ್ಟ್ರ ನಿರ್ವಣಕ್ಕಾಗಿ ಉದಯಿಸಿದೆ ಎಂದು ಹೇಳಿದರು.

    ವಿಧಾನಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ದರಾಮಣ್ಣ ಪಕ್ಷದ ಹಿಂದಿನ 6 ವರ್ಷಗಳಲ್ಲಿ ನಡೆದ ಅಂತ್ಯೋದಯ ಪ್ರಯತ್ನಗಳು ಕುರಿತು ಮಾತನಾಡಿದರು. ಪ್ರಶಿಕ್ಷಣ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಸಾಯಿ ವರಪ್ರಸಾದ್, ಪುರಸಭೆ ಅಧ್ಯಕ್ಷ ಎಂ.ಡಿ.ಉಮೇಶ್, ಉಪಾಧ್ಯಕ್ಷ ಮಧುರಾಯ್ ಜಿ.ಶೇಟ್, ಸದಸ್ಯರಾದ ನಟರಾಜ್ ಉಪ್ಪಿನ, ಜಯಲ್ಷ್ಮ, ಪ್ರೇಮಾ ಟೋಕಪ್ಪ, ಪ್ರಮುಖರಾದ ಭೋಗೇಶ್ ಶಿಗ್ಗಾದ್, ಕೊಟ್ರೇಶ್ ಗೌಡ, ದೇವೇಂದ್ರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts