More

    ನಾನು ಹೆಚ್ಚು ಮಾತನಾಡಲ್ಲ…ನಮ್ಮ ಕೆಲಸಗಳು ಮಾತನಾಡಬೇಕು: ಬೊಮ್ಮಾಯಿ

    ಹಾವೇರಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಸಮಾಜಕ್ಕೂ ಮುಂದೆ ಬರುವ ಅವಕಾಶ ಇದೆ. ನಾನು ಹೆಚ್ಚು ಮಾತನಾಡಲ್ಲ. ನಮ್ಮ ಕೆಲಸಗಳು ಮಾತನಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

    2 ಡಿ ಮೀಸಲಾತಿ ನೀಡಿದ್ದಕ್ಕಾಗಿ ಶಿಗ್ಗಾಂವಿಯಲ್ಲಿ ಆದಿ ಬಣಜಿಗ ಸಮಾಜದಿಂದ ಆಯೋಜಿಸಿದ್ದ ಕೃತಜ್ಞತಾ ಸಮಾರಂಭದಲ್ಲಿ ಅವರು ಮಾತನಾಡಿದರು. ನಾನು ಹೆಚ್ಚು ಮಾತನಾಡಲ್ಲ. ನಮ್ಮ ಕೆಲಸಗಳು ಮಾತನಾಡಬೇಕು. ಸಣ್ಣ ಸಮಾಜಗಳನ್ನ ಹುಡುಕಿ ನ್ಯಾಯ ಕೊಡಿಸಿದ್ದೇವೆ. ನಿಮ್ಮ ಆಶೀರ್ವಾದ ಪಕ್ಷದ ಹಿರಿಯರು ಸ್ಥಾನಮಾನ ಕೊಟ್ಟಿದ್ದಕ್ಕೆ ಇದನ್ನ‌ ಮಾಡಲು ಸಾಧ್ಯವಾಯಿತು.

    ಇದನ್ನೂ ಓದಿ: ಅಯ್ಯೋ ನನ್ನ ಹೇರ್‌ ಸ್ಟೈಲ್‌ ಚೆನ್ನಾಗಿಲ್ಲ.. ಅಪಾರ್ಟ್‌ಮೆಂಟ್​​​ನಿಂದ ಜಿಗಿದು ಪ್ರಾಣ ಬಿಟ್ಟ!

    ಸಣ್ಣ, ಕಾಯಕ ನಿಷ್ಟೆ ಸಮಾಜಗಳು ವರ್ಗಿಕರಣದಲ್ಲಿ ಬಿಟ್ಟು ಹೋಗಿದೆ. ಹಲವು ಹೋರಾಟ ಮಾಡಿದರೂ ಈ ಸಮಾಜಗಳಿಗೆ ನ್ಯಾಯ ಸಿಕ್ಕಿರಲಿಲ್ಲ ಎನ್ನುವ ಅರಿವು ನನಗೆ ಇತ್ತು. ದೇಶದಲ್ಲಿ ಎರಡು ಪಟ್ಟು ಹೆಚ್ಚು ಪ್ರವಾಹ ಪರಿಹಾರವನ್ನು ಕೊಡುತ್ತಿರುವ ಸರ್ಕಾರ ನಮ್ಮದು. ನಾನು ಅಧಿಕಾರಕ್ಕೆ ಬಂದಾಗ 5,000 ಕೋಟಿ ರೂ. ತೆರಿಗೆ ಬಾಕಿ ಇತ್ತು. ನಂತರ 13 ಸಾವಿರ ಕೋಟಿ ಟ್ಯಾಕ್ಸ್ ಸಂಗ್ರಹಿಸಿದ್ದೇವೆ. ಸೋರಿಕೆ ಕಡಿಮೆ ಮಾಡಿ, ಬೊಕ್ಕಸ ತುಂಬಿಸಿ ಜನಕಲ್ಯಾಣ ಯೋಜನೆಗಳಿಗೆ ತೊಡಗಿಸಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ನೀರೊಳಗಿನ ಪ್ರಯಾಣ; 21 ಕಿ.ಮೀ. ನೀರಿನಡಿ ಬುಲೆಟ್ ರೈಲು ಸಂಚಾರ
    ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂವಿಧಾನ ಬದ್ದ ಸ್ಥಾನಮಾನ ಕೊಟ್ಟಿದ್ದು ಮೋದಿಯವರು. ಹೀಗಾಗಿ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ದುಡಿಮೆಗೆ ಬೆಲೆ ಸಿಗಬೇಕು, ಇದು ನನ್ನ ನೀತಿ. ಶಿಕ್ಷಣ ಉದ್ಯೋಗದಲ್ಲಿ ಮುಂದೆ ಬರಬೇಕು. ಸ್ವಾಭಿಮಾನದ ಬದುಕನ್ನ ನೀವು ನಡೆಸಬೇಕು ಎಂದಿದ್ದಾರೆ.
    ಸಂಘಟನೆ ಜತೆಗೆ ವಿದ್ಯಾಸಂಸ್ಥೆ ,ಹಣಕಾಸಿನ ಸಂಸ್ಥೆ ನಿರ್ಮಾಣ ಮಾಡಿ, ನನ್ನ ಸಹಕಾರ ಇರುತ್ತದೆ. ರಾಜಕಾರಣ ಬರುತ್ತದೆ ಹೋಗುತ್ತದೆ, ನಮ್ಮ ಸಂಬಂಧ ಸದಾಕಾಲ ಹೀಗೆ ಇರಲಿ. ನನ್ನ ಉಸಿರು ಇರುವವರೆಗೆ ನಿಮ್ಮ ಜತೆಗೆ ಸದಾಕಾಲ ಇರುತ್ತೇನೆ ಎಂದರು.

    ವೈಎಸ್ ವಿ ದತ್ತ ಇಂಟರ್ನ್ಯಾಷನಲ್ ಪಕ್ಷದ ಜೊತೆ ಹೋಗಿದ್ದಾರೆ..ನಮ್ಮ ಸಣ್ಣ ಪಕ್ಷದಲ್ಲಿ ಅವರಿಗೆ ಎಲ್ಲಿದೆ ಜಾಗ?: ಎಚ್​ಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts