More

    ಪ್ಲೇಆಫ್ ಸನಿಹ ಸಿಎಸ್​ಕೆ: ರಾಜಸ್ಥಾನ ರಾಯಲ್ಸ್​ ಹಾದಿ ಕಠಿಣ…

    ಚೆನ್ನೈ: ವೇಗಿ ಸಿಮ್ರಾನ್​ಜೀತ್​ ಸಿಂಗ್​ (26ಕ್ಕೆ 3) ಬಿಗಿ ದಾಳಿ ಹಾಗೂ ನಾಯಕ ಋತುರಾಜ್​ ಗಾಯಕ್ವಾಡ್​ (42* ರನ್​, 41 ಎಸೆತ, 1 ಬೌಂಡರಿ, 2 ಸಿಕ್ಸರ್​) ಸಮಯೋಚಿತ ಬ್ಯಾಟಿಂಗ್​ ನೆರವಿನಿಂದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಐಪಿಎಲ್​&17ರಲ್ಲಿ ರಾಜಸ್ಥಾನ ರಾಯಲ್ಸ್​ ಎದುರು 5 ವಿಕೆಟ್​ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಋತುರಾಜ್​ ಗಾಯಕ್ವಾಡ್​ ಬಳಗ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ್ದು, ಪ್ಲೇಆ್​ ಸನಿಹಕ್ಕೇರಿದೆ.
    ಚೆಪಾಕ್​ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಇಳಿದ ರಾಜಸ್ಥಾನ ರಾಯಲ್ಸ್​, ರಿಯಾನ್​ ಪರಾಗ್​ (47 ರನ್​, 35 ಎಸೆತ,1 ಬೌಂಡರಿ, 3 ಸಿಕ್ಸರ್​) ಆಸರೆಯಲ್ಲಿ 5 ವಿಕೆಟ್​ಗೆ 141 ರನ್​ಗಳ ಸಾಧಾರಣ ಮೊತ್ತ ಪೇರಿಸಿತು. ಪ್ರತಿಯಾಗಿ ಉತ್ತಮ ಆರಂಭ ಪಡೆದ ಸಿಎಸ್​ಕೆ, 18.2 ಓವರ್​ಗಳಲ್ಲಿ 5 ವಿಕೆಟ್​ಗೆ 145 ರನ್​ಗಳಿಸಿ ಸುಲಭ ಗೆಲುವು ದಾಖಲಿಸಿತು.

    ಋತುರಾಜ್​ ಸಮಯೋಚಿತ ಆಟ
    ಸುಲಭ ಗುರಿ ಬೆನ್ನತ್ತಿದ್ದ ಸಿಎಸ್​ಕೆಗೆ ರಚಿನ್​ ರವೀಂದ್ರ (27) ಹಾಗೂ ಋತುರಾಜ್​ ಗಾಯಕ್ವಾಡ್​ ಉತ್ತಮ ಆರಂಭ ಒದಗಿಸಿದರು. ಇವರಿಬ್ಬರು ಮೊದಲ ವಿಕೆಟ್​ಗೆ 22 ಎಸೆತದಲ್ಲಿ 32 ರನ್​ಗಳಿಸಿ ಅಡಿಪಾಯ ಹಾಕಿಕೊಟ್ಟರು. ಆಗ ದಾಳಿಗಿಳಿದ ಆರ್​.ಅಶ್ವಿನ್​ ಈ ಜತೆಯಾಟ ಮುರಿದರು. ನಂತರ ಗಾಯಕ್ವಾಡ್​ ಜತೆಯಾದ ಡೆರಿಲ್​ ಮಿಚೆಲ್​ (22)ಚೇಸಿಂಗ್​ಗೆ ಬಲ ತುಂಬಿದರು. ಮಿಚೆಲ್​ ಬಿರುಸಿನಾಟಕ್ಕೆ ಋತುರಾಜ್​ ಸಾಥ್​ ನೀಡಿದರು. ನಂತರ ಮೊಯಿನ್​ ಅಲಿ (10), ಶಿವಂ ದುಬೆ (18) ಹಾಗೂ ರವೀಂದ್ರ ಜಡೇಜಾ (5) ಉಪಯುಕ್ತ ಕೊಡುಗೆ ನೀಡಿದರು.6ನೇ ವಿಕೆಟ್​ಗೆ ಜತೆಯಾದ ಗಾಯಕ್ವಾಡ್​ ಹಾಗೂ ಇಂಪ್ಯಾಕ್ಟ್​ ಪ್ಲೇಯರ್​ ಸಮೀರ್​ ರಿಜ್ವಿ (15*) ಜೋಡಿ ಇನ್ನು 10 ಎಸೆತ ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿಸಿತು. 5 ರನ್​ ಅಗತ್ಯವಿದ್ದಾಗ ಸತತ ಬೌಂಡರಿ ಸಿಡಿಸಿದ ರಿಜ್ವಿ ಸಿಎಸ್​ಕೆ ಗೆಲುವು ಸಾರಿದರು.

    ಸಿಮ್ರಾನ್​ಜೀತ್​ ಕಡಿವಾಣ: ಸಿಎಸ್​ಕೆ ಬೌಲರ್​ಗಳ ಶಿಸ್ತಿನ ದಾಳಿಯ ಎದುರು ಎಚ್ಚರಿಕೆಯ ಆರಂಭ ಪಡೆದ ರಾಜಸ್ಥಾನ ರಾಯಲ್ಸ್​ಗೆ ಯುವ ವೇಗಿ ಸಿಮ್ರಾನ್​ಜೀತ್​ ಆಘಾತ ನೀಡಿದರು. ಜೋಸ್​ ಬಟ್ಲರ್​ (21) ಹಾಗೂ ಯಶಸ್ವಿ ಜೈಸ್ವಾಲ್​ (24) ಉತ್ತಮ ಆರಂಭ ಒದಗಿಸಿದರು. ಪವರ್​ ಪ್ಲೇ ಬಳಿಕ ದಾಳಿಗಿಳಿದ ಸಿಮ್ರಾನ್​ಜೀತ್​, ಇನಿಂಗ್ಸ್​ನ 7ನೇ ಓವರ್​ನಲ್ಲಿ ಜೈಸ್ವಾಲ್​, 9ನೇ ಓವರ್​ನಲ್ಲಿ ಬಟ್ಲರ್​ ವಿಕೆಟ್​ ಪಡೆದು ಕಡಿವಾಣ ಹೇರಿದರು. ನಾಯಕ ಸಂಜು ಸ್ಯಾಮ್ಸನ್​ (15) ಸಹ ಬೇಗನೆ ಡಗೌಟ್​ ಸೇರಿದರು. ಆಗ ರಿಯಾನ್​ ಪರಾಗ್​ ಹಾಗೂ ಧ್ರುವ ಜುರೆಲ್​ ತಂಡಕ್ಕೆ ಆಸರೆಯಾದರು. 29 ಎಸೆತದಲ್ಲಿ 40 ರನ್​ಗಳಿಸಿದ ಇವರಿಬ್ಬರು ತಂಡದ ಮೊತ್ತ ಏರಿಸಿದರು. ಸ್ಲಾಗ್​ ಓವರ್​ಗಳಲ್ಲಿಯೂ ಬಿಗಿ ದಾಳಿ ನಡೆಸಿದ ಸಿಎಸ್​ಕೆ, ರಾಜಸ್ಥಾನ ಬ್ಯಾಟರ್​ಗಳಿಗೆ ಕಡಿವಾಣ ಹೇರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts