More

    ಮೊಬೈಲ್ ಬಿಡಿ, ಪುಸ್ತಕ ಹಿಡಿಯಿರಿ

    ಚಳ್ಳಕೆರೆ: ವಿದ್ಯಾರ್ಥಿಗಳು ಮೊಬೈಲ್, ಟಿವಿ ಇಂದ ದೂರವಿದ್ದು ಶಿಕ್ಷಣದ ಕಡೆಗೆ ಹೆಚ್ಚು ಗಮನ ಹರಿಸಿದರೆ ಮಾತ್ರ ಶೈಕ್ಷಣಿಕ ಸಾಧನೆ ಸಾಧ್ಯವಾಗುತ್ತದೆ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪಿ.ಎನ್.ಕೃಷ್ಣಪ್ರಸಾದ್ ಹೇಳಿದರು.

    ತಾಲೂಕಿನ ದೊಡ್ಡೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ಕಾಲೇಜು ಹಂತದಲ್ಲಿ ವಿಜ್ಞಾನ ಮತ್ತು ಕಲಾ ವಿಭಾಗ ಎಂಬ ತಾರತಮ್ಯ ಮನೋಭಾವನೆ ಬೇಡ. ಕಲಾ ವಿಭಾಗದಲ್ಲಿಯೇ ಓದಿ ಅತ್ಯುನ್ನತ ಸಾಧನೆ ಮಾಡಿದವರ ಆದರ್ಶ ರೂಢಿಸಿಕೊಳ್ಳಬೇಕು. ಕಲಿಯುವ ಶಿಕ್ಷಣ ಯಾವುದೇ ಆದರೂ ಶ್ರದ್ಧೆ ಮತ್ತು ನಿಷ್ಠೆ ಇದ್ದರೆ ಮಾತ್ರ ಯಶಸ್ಸು ದೊರಕುತ್ತದೆ ಎಂದು ಕಿವಿ ಮಾತು ಹೇಳಿದರು.

    ನಿವೃತ್ತ ಶಿಕ್ಷಕ ಅನ್ವರ್ ಮಾಸ್ಟರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಸ್ತು, ಬದ್ಧತೆ ಇರಬೇಕು. ಶಿಕ್ಷಣ ಕಲಿತ ಶಾಲೆಗೆ ಕೀರ್ತಿ ತರುವ ಛಲ ಬೆಳೆಸಿಕೊಳ್ಳಬೇಕು. ಇದರಿಂದ ಶಾಲೆ ಮತ್ತು ಗ್ರಾಮ ಮಾದರಿಯಾಗಿ ಉಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

    ಪ್ರಾಚಾರ್ಯ ಎಸ್.ಲಕ್ಷ್ಮಣ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯರಾದ ಶಿವಣ್ಣ, ಯರಬಾಲಪ್ಪ, ಮಾಜಿ ಸದಸ್ಯ ಸೋಮಶೇಖರ್, ಉಪನ್ಯಾಸಕರಾದ ವಸಂತಕುಮಾರ್, ಕರಿಯಪ್ಪ, ಹೀನಾ ಕೌಸರ್, ಒ.ನಾಗರಾಜ, ಆರ್.ನಾಗರಾಜ್, ಸಿಬ್ಬಂದಿ ದುರುಗಪ್ಪ, ಚನ್ನಪ್ಪ ಇದ್ದರು.

    ವಿದ್ಯಾರ್ಥಿನಿಯರಾದ ಸಂಗೀತಾ, ಸ್ವರೂಪಾ, ಸ್ನೇಹಾ ಪ್ರಾರ್ಥಿಸಿದರು. ಉಪನ್ಯಾಸಕ ಕರಿಯಪ್ಪ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts