More

    ಕೆಫೆ ಕಾಫಿ ಡೇಯ ಸಿದ್ದಾರ್ಥ್​ ಹೆಗ್ಡೆ ಪತ್ನಿ ಸೇರಿ ಐವರಿಗೆ ಕೊನೆಗೂ ಸಿಕ್ತು ಜಾಮೀನು!

    ಮೂಡಿಗೆರೆ: ಮಾಳವಿಕಾ ಸಿದ್ದಾರ್ಥ ಹೆಗ್ಡೆ ಸೇರಿದಂತೆ ಕಾಫಿ ಡೇ ಗ್ಲೋಬಲ್​ ಲಿಮಿಟೆಡ್​ ಕಂಪನಿಯ ಐವರು ನಿರ್ದೇಶಕರಿಗೆ ಮೂಡಿಗೆರೆ ಜೆಎಂ​ಎಫ್​ಸಿ ನ್ಯಾಯಾಲಯ ಶುಕ್ರವಾರ ಜಾಮೀನು ನೀಡಿದೆ.

    ಮಾಳವಿಕಾ ಸಿದ್ದಾರ್ಥ ಹೆಗ್ಡೆ, ಕಂಪನಿ ನಿರ್ದೇಶಕರಾದ ಸದಾನಂದ ಪೂಜಾರ್​, ಜಯರಾಜ್​ ಸಿ.ಹುಬ್ಲಿ, ಕಿರೀಟಿ ಸಾವಂತ್​ ಮತ್ತು ಜಾವಿದ್​ ಫರ್ವೀಜ್​ ನ್ಯಾಯಾಲಯಕ್ಕೆ ಹಾಜರಾಗಿದ್ದು, ಅವರಿಗೆ ಜಾಮೀನು ಮಂಜೂರು ಮಾಡಿದೆ. ಮತ್ತೊಬ್ಬ ನಿರ್ದೇಶಕ ನಿತಿನ್​ ಬಾಗಮನೆ ಈಗಾಗಲೇ ಹೈಕೋರ್ಟ್​ನಲ್ಲಿ ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದು ಮೇಲ್ಮನವಿ ಸಲ್ಲಿಸಿರುವುದರಿಂದ ಅವರು ಮೂಡಿಗೆರೆ ನ್ಯಾಯಾಲಯಕ್ಕೆ ಶುಕ್ರವಾರ ಹಾಜರಾಗಲಿಲ್ಲ ಎನ್ನಲಾಗಿದೆ. ಅಂದಹಾದೆ ಏನಿದು ಪ್ರಕರಣ?

    ಏನಿದು ಪ್ರಕರಣ?: ಕಾಫಿ ಡೇ ಗ್ಲೋಬಲ್​ ಲಿಮಿಟೆಡ್​ ಕಂಪನಿ ನೀಡಿದ್ದ ಚೆಕ್​ಗಳು ಅಮಾನ್ಯವಾಗಿವೆ ಎಂದು ಮಾಕೋನಹಳ್ಳಿಯ ಕಾಫಿ ಬೆಳೆಗಾರ ಕೆ. ನಂದೀಶ್​ ಎಂಬುವರು ಜುಲೈ 15ರಂದು ಮೂಡಿಗೆರೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

    ಕಾಫಿ ಡೇ ಗ್ಲೋಬಲ್​ ಇಂಡಿಯಾ ತಮ್ಮಿಂದ ಖರೀದಿ ಮಾಡಿದ ಕಾಫಿಗೆ 45 ಲಕ್ಷ ರೂ. ಹಣ ಕೊಡಬೇಕಿದ್ದು, ವಿವಿಧ ಮೊತ್ತದ 10 ಚೆಕ್​ ನೀಡಿದ್ದರು ಎನ್ನಲಾಗಿದ್ದು, ಈ ಚೆಕ್​ಗಳು ಬೌನ್ಸ್​ ಆಗಿದ್ದರಿಂದ ನ್ಯಾಯಾಲಯದ ಮೊರೆ ಹೋಗಿದ್ದರು.

    ಅ. 6ರಂದು ನ್ಯಾಯಾಲಯಕ್ಕೆ ಹಾಜರಾಗಲು ಕಂಪನಿಯ ಎಂಟು ನಿರ್ದೇಶಕರಿಗೆ ಸಮನ್ಸ್​ ಜಾರಿಯಾಗಿತ್ತು. ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಬಂಧನಕ್ಕೆ ಜಾಮೀನುರಹಿತ ವಾರಂಟ್​ ಹೊರಡಿಸಲಾಗಿತ್ತು.

    ಈ ದೃಶ್ಯ ನೋಡಿದ್ರೆ ನಿಮ್ಮ‌ ಮೈ ಜುಮ್ ಅನ್ನೋದು ಗ್ಯಾರಂಟಿ!

    ಭಿಕ್ಷುಕನಾಗಿ ಚಿಂದಿ ಆಯುತ್ತಿದ್ದ ನಿವೃತ್ತ ಪೊಲೀಸಪ್ಪನಿಗೆ ಹೊಸ ಜೀವನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts