More

    ಫಾಸ್ಟ್​ಟ್ಯಾಗ್ ರೀಚಾರ್ಜ್ ಸೋಗಿನಲ್ಲಿ ಧೋಖಾ, ಬ್ಯಾಂಕ್ ಅಧಿಕಾರಿ ಎಂದು ಹೇಳಿ ಕರೆ ಮಾಡಿ ವಂಚನೆ 

    ಬೆಂಗಳೂರು:  ಟೋಲ್ ಶುಲ್ಕ ಪಾವತಿಗೆ ಫಾಸ್ಟ್​ಟ್ಯಾಗ್ ಕಡ್ಡಾಯ ಆದೇಶವನ್ನೇ ದುರುಪಯೋಗಪಡಿಸಿಕೊಂಡಿರುವ ಸೈಬರ್ ಕಳ್ಳರು ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ವ್ಯಕ್ತಿ ಬಳಿ 50 ಸಾವಿರ ರೂ. ದೋಚಿದ್ದಾರೆ.

    ಬಾಬುಸಾಬ್​ಪಾಳ್ಯದ ರಾಹುಲ್ (34) ವಂಚನೆಗೆ ಒಳಗಾದವರು. ಜ.11ರಂದು ರಾಹುಲ್ ಮೊಬೈಲ್​ಗೆ ಫಾಸ್ಟ್​ಟ್ಯಾಗ್  ರೀಚಾರ್ಜ್ ಸಮಸ್ಯೆ ಪರಿಹರಿಸಿಕೊಳ್ಳಲು ಕರೆ ಮಾಡುವಂತೆ ಸಹಾಯವಾಣಿ ಸಂಖ್ಯೆಸಹಿತ ಸಂದೇಶ ಬಂದಿದೆ.

    ಇದಾದ ಮೇಲೆ ಜ.13ರಂದು ರಾಹುಲ್ ಮೊಬೈಲ್​ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಆಕ್ಸಿಸ್ ಬ್ಯಾಂಕ್ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಫಾಸ್ಟಾ್ಯಗ್ ರೀಚಾರ್ಜ್ ಮಾಡಲು ನಿಮ್ಮ ಮೊಬೈಲ್​ಗೆ ಸಪೋಟ್ ಆಗುವಂತೆ ಒಂದು ಲಿಂಕ್ ಕಳುಹಿಸುತ್ತೇವೆ. ಅದರ ಮೇಲೆ ಕ್ಲಿಕ್ ಮಾಡಿ ಯುಪಿಎ ಪಿನ್ ನಮೂದಿಸಿ ಕಳುಹಿಸುವಂತೆ ಸೂಚಿಸಿದ್ದಾನೆ.

    ಬ್ಯಾಂಕ್ ಅಧಿಕಾರಿ ಇರಬೇಕೆಂದು ನಂಬಿದ ರಾಹುಲ್, ಲಿಂಕ್ ಮೇಲೆ ಕ್ಲಿಕ್ ಮಾಡಿ ಯುಪಿಎ ಪಿನ್ ನಮೂದಿಸಿ ಕಳುಹಿಸಿದಾಗ ಅವರ ಬ್ಯಾಂಕ್ ಖಾತೆಯಿಂದ 5 ಸಾವಿರ ರೂ. ಬ್ಯಾಂಕ್ ಖಾತೆಯಿಂದ ಕಡಿತವಾಗಿದೆ. ತಕ್ಷಣ ಎಚ್ಚೆತ್ತ ರಾಹುಲ್, ಕರೆ ಮಾಡಿ ವಿಚಾರಿಸಿದಾಗ ವಾಪಸ್ ಕೊಡುತ್ತೇವೆ. ಲಿಂಕ್​ನಲ್ಲಿ ಇರುವ ಫಾಮ್ರ್ ತುಂಬಿ ಮತ್ತೊಮ್ಮೆ ಕಳುಹಿಸುವಂತೆ ವಂಚಕ ಸೂಚಿಸಿದ್ದಾನೆ.

    ಅದನ್ನೂ ನಂಬಿದ ರಾಹುಲ್, ಆತ ಹೇಳಿದಂತೆ ಮಾಡಿದಾಗ ಹಂತಹಂತವಾಗಿ 50 ಸಾವಿರ ರೂ. ಬೇರೊಂದು ಖಾತೆಗೆ ವರ್ಗಾವಣೆಗೊಂಡಿದೆ. ವಂಚನೆಗೆ ಒಳಗಾಗಿರುವುದು ಖಚಿತವಾಗಿ ರಾಹುಲ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಹೆಣ್ಣೂರು ಠಾಣೆ ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts