More

    ಚುನಾವಣೆ ಹೊಸ್ತಿಲಲ್ಲಿ ರಾಮನ ಜಪ;  ಹಳೇ ಯೋಜನೆಗಳ ಜಾರಿಯ ಸುಳಿವಿಲ್ಲ

    ರಾಮನಗರ: ಜಿಲ್ಲೆಗೆ ಯೋಜನೆಗಳ ಮಹಾಪೂರ ಹರಿಸುವ ಮೂಲಕ ಚುನಾವಣೆ ಹೊಸ್ತಿಲಲ್ಲಿ ಘಟಾನುಘಟಿ ನಾಯಕರನ್ನು ಮಣಿಸುವ ಯತ್ನವನ್ನು ಮುಖ್ಯಮಂತ್ರಿ ಮಾಡುತ್ತಾರೆ ಎನ್ನುವ ಭರವಸೆ ಹುಸಿಯಾಗಿದೆ.

    ಜಿಲ್ಲೆಯ ಮಟ್ಟಿಗೆ ಮಹತ್ವವಾದ ಯೋಜನೆಗಳನ್ನು ಘೋಷಣೆ ಮಾಡದೆ ನಿರಾಸೆ ಮೂಡಿಸಿದ್ದಾರೆ.

    ಹಿಂದೆ ಘೋಷಣೆ ಆಗಿದ್ದ ಎಷ್ಟೋ ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಅಗತ್ಯ ಅನುದಾನ ನೀಡುವ ಬಗ್ಗೆ ಸುಳಿವು ನೀಡದೆ ಮತ್ತೆ ಕೆಲವು ಸಣ್ಣ-ಪುಟ್ಟ ಯೋಜನೆಗಳನ್ನು ನೀಡಿರುವುದು ಬಿಟ್ಟರೆ ಉಳಿದಂತೆ ಮಹತ್ತರ ಯೋಜನೆಗಳನ್ನು ನೀಡಿಲ್ಲ.

    ಮತ್ತೆ ಮೇಕೆದಾಟು? ಮೇಕೆದಾಟು ಅಣೆಕಟ್ಟೆ ಯೋಜನೆ ಜಾರಿ ಈಗ ಸುಪ್ರೀಂ ನಿರ್ಧಾರದ ಮೇಲೆ ನಿಂತಿದ್ದು, ತಮಿಳುನಾಡು ಸರ್ಕಾರ ಸಲ್ಲಿಸಿರುವ ದಾವೆಯನ್ನು ಇತ್ಯರ್ಥಗೊಳಿಸಿ ಯೋಜನೆ ಜಾರಿಗೆ ಬದ್ಧವಿರುವುದಾಗಿ ಸಿಎಂಘೋಷಣೆ ಮಾಡಿದ್ದಾರೆ. ಕಳೆದ ಬಜೆಟ್‌ನಲ್ಲಿ ಯೋಜನೆ ಅನುಷ್ಠಾನಕ್ಕೆ ಒಂದು ಸಾವಿರ ಕೋಟಿ ರೂ. ಮೀಸಲಿಟ್ಟಿದ್ದ ಬಸವರಾಜ ಬೊಮ್ಮಾಯಿ ಈ ಬಾರಿ ದಾವೆ ಇತ್ಯರ್ಥಪಡಿಸಿ ಯೋಜನೆ ಜಾರಿಗೊಳಿಸಲಾಗುವುದು, ಇದಕ್ಕೆ ಬೇಕಾದ ಅನುದಾನವನ್ನೂ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

    ಚುನಾವಣೆ ಹೊಸ್ತಿಲಲ್ಲಿ ರಾಮನ ಜಪ;  ಹಳೇ ಯೋಜನೆಗಳ ಜಾರಿಯ ಸುಳಿವಿಲ್ಲ
    MEKEDATU

    ಒಂದಿಷ್ಟು ಹೊಸತು:

    ಚುನಾವಣೆ ಹೊಸ್ತಿಲಲ್ಲಿ ರಾಮನ ಜಪ;  ಹಳೇ ಯೋಜನೆಗಳ ಜಾರಿಯ ಸುಳಿವಿಲ್ಲ

    ಜಿಲ್ಲೆಯ ಪಾಲಿಗೆ ಮುಖ್ಯಮಂತ್ರಿ ಮಹತ್ವದ ಯೋಜನೆಗಳನ್ನು ನೀಡಿಲ್ಲವಾದರೂ ಒಂದಿಷ್ಟು ಹೊಸ ಯೋಜನೆಗಳನ್ನು ನೀಡಿದ್ದಾರೆ. ಇವುಗಳಲ್ಲಿ ಪ್ರಮುಖವಾಗಿ ಐಐಟಿ ಮಾದರಿಯಲ್ಲಿ ರಾಮನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಉನ್ನತೀಕರಣ, ಇಂಟಿಗ್ರೇಡೆಟ್ ಟೌನ್‌ಶಿಪ್ ನಿರ್ಮಾಣ, ಮಂಚನೆಬೆಲೆ ಜಲಾಶಯದ ಹಿನ್ನೀರಿನಲ್ಲಿ ಜಂಗಲ್ ರೆಸಾರ್ಟ್ ನಿರ್ಮಾಣವೂ ಸೇರಿದೆ. ಆಯುಷ್ಮಾನ್ ಭಾರತ್ ಹೆಲ್ತ್ ಅಡಿಯಲ್ಲಿ 50 ಹಾಸಿಗೆ ಸಾಮರ್ಥ್ಯದ ಕ್ರಿಟಿಕಲ್ ಕೇರ್ ಬ್ಲಾಕ್‌ಗಳ ಸ್ಥಾಪನೆ, ಸಾಂಪ್ರದಾಯಿಕ ಕೌಶಲಗಳ ಪುನರುಜ್ಜೀವನಗೊಳಿಸುವ ಯೋಜನೆಯಲ್ಲಿ ಚನ್ನಪಟ್ಟಣದ ಬೊಂಬೆಯನ್ನೂ ಸಿಎಂ ಬಜೆಟ್‌ನಲ್ಲಿ ಆಯ್ಕೆ ಮಾಡಿದ್ದಾರೆ.

    ಜಿಲ್ಲೆಗೆ ಸಿಕ್ಕಿದ್ದೇನು?

    •  ಐಐಟಿಯಂತೆ ಕೆಐಟಿ ಮಾದರಿಯಲ್ಲಿ ಮುಂದಿನ 5 ವರ್ಷಗಳಲ್ಲಿ ರಾಮನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಉನ್ನತೀಕರಣ.
    •  ರಾಮನಗರದಲ್ಲಿ ಪಿಎಂ-ಆಯುಷ್ಮಾನ್ ಭಾರತ್ ಹೆಲ್ತ್ ಅಡಿಯಲ್ಲಿ 50 ಹಾಸಿಗೆ ಸಾಮರ್ಥ್ಯದ ಕ್ರಿಟಿಕಲ್ ಕೇರ್ ಬ್ಲಾಕ್‌ಗಳ ಸ್ಥಾಪನೆ.
    • ಭೂ ಒಡೆತನ ಯೋಜನೆಯಡಿ ಘಟಕ ವೆಚ್ಚದ ಮೊತ್ತವನ್ನು 15 ಲಕ್ಷ ರೂ.ಗಳಿಂದ 25 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದ್ದು, ಜಿಲ್ಲೆಯೂ ಆಯ್ಕೆ.
    •  ರಾಮನಗರದಲ್ಲಿ ಇಂಟಿಗ್ರೇಟೆಡ್ ಟೌನ್‌ಶಿಪ್ ನಿರ್ಮಿಸಲು ಎಕ್ಸ್‌ಪ್ರೆಷನ್ ಆ್ ಇಂಟರೆಸ್ಟ್ ಆಹ್ವಾನ.
    •  ಜಿಲ್ಲೆಯ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ಘೋಷಣೆ.
    • ಮಂಚನೆಬೆಲೆ ಹಿನ್ನೀರಿನಲ್ಲಿ ಜಂಗಲ್ ರೆಸಾರ್ಟ್ ನಿರ್ಮಿಸಲು 10 ಕೋಟಿ ರೂ ಮೀಸಲು.
    •  ಸಾಂಪ್ರದಾಯಿಕ ಕೌಶಲಗಳ ಪುನರುಜ್ಜೀವನಗೊಳಿಸುವ ಯೋಜನೆಯಲ್ಲಿ ಚನ್ನಪಟ್ಟಣದ ಬೊಂಬೆಯೂ ಆಯ್ಕೆ.
    • ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ದಾವೆಯನ್ನು ಶೀಘ್ರವೇ ಇತ್ಯರ್ಥಪಡಿಸಿ, ಕಾಮಗಾರಿ ನಡೆಸಲು ಕ್ರಮವಹಿಸಲಾಗುವುದು, ಅಗತ್ಯ ಅನುದಾನ ನೀಡಲಾಗುವುದು

    ರಾಮನ ಜಪ: ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಸರ್ಕಾರ ರಾಮನ ಜಪ ಮಾಡಿದ್ದು, ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಾಗಿ ಹೇಳುವ ಮೂಲಕ ತನ್ನ ಹೇಳಿಕೆಗೆ ಅಧಿಕೃತ ಮುದ್ರೆ ಒತ್ತಿದೆ. ಆದರೆ, ಇದಕ್ಕೆ ಎಷ್ಟು ಅನುದಾನ ಮೀಸಲಿಟ್ಟಿದೇವೆ ಎಂದು ಸಿಎಂ ಹೇಳಿಲ್ಲ. ಆದರೂ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಮನಾಮ ಜಪ ಮಾಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರ ತವರು ಜಿಲ್ಲೆಯಲ್ಲಿ ಹೊಸ ದಾಳ ಉರುಳಿಸಿದ್ದಾರೆ. ಆದರೂ ಪ್ರಸ್ತುತ 34 ಗುಂಟೆ ಜಮೀನು ಮಾತ್ರ ಲಭ್ಯವಿದ್ದು, ಉಳಿದ ಜಮೀನು ಹುಡುಕಾಟಕ್ಕಾಗಿ ಜಂಟೀ ಸರ್ವೇ ನಡೆಸಲು ಜಿಲ್ಲಾಡಳಿತ ಅರಣ್ಯ ಇಲಾಖೆ ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ಸೂಚಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts