More

    ವಾಗೀಶ ಪಂಡಿತಾರಾಧ್ಯರು ಸಮನ್ವಯಾಚಾರ್ಯರು; ಚನ್ನಮಲ್ಲಿಕಾರ್ಜುನ ಸ್ವಾಮೀಜಿ

    ರಾಣೆಬೆನ್ನೂರ: ತಾಲೂಕಿನ ಮುದೇನೂರ ಗ್ರಾಮದವರಾಗಿದ್ದ ಶ್ರೀಶೈಲ ಜಗದ್ಗುರು ಲಿಂಗೈಕ್ಯ ವಾಗೀಶ ಪಂಡಿತಾರಾಧ್ಯರು ಸರ್ವ ಮತಗಳನ್ನು ಸಮಭಾವದಿಂದ ಕಂಡು ಸಮನ್ವಯಾಚಾರ್ಯರಾಗಿದ್ದರು ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
    ನಗರದ ಚೆನ್ನೇಶ್ವರ ಮಠದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಜ್ಞಾನವಾಹಿನಿ ಮಾಸಿಕ ಧರ್ಮಸಭೆ ಹಾಗೂ ಶ್ರೀಶೈಲ ಪೀಠದ ಲಿಂ. ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯರು ಮತ್ತು ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯರ ಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
    ವಾಗೀಶ ಪಂಡಿತಾರಾಧ್ಯರು ಗುರು ವಿರಕ್ತರಲ್ಲಿ ಎಂದೂ ಭೇದವನ್ನು ಎಣಿಸಲಿಲ್ಲ. ಅವರೊಬ್ಬ ಶ್ರೇಷ್ಠ ಆಯುರ್ವೇದ ತಜ್ಞರಾಗಿದ್ದರು ಎಂದರು.
    ಪ್ರಸಾದ ಸೇವಾಕರ್ತ ವೀರಣ್ಣ ಜಂಬಗಿ ಸಮಾರಂಭ ಉದ್ಘಾಟಿಸಿದರು. ಲಿಂ. ವಾಗೀಶ ಪಂಡಿತಾಧ್ಯರ ಸಿದ್ಧಿ ಮತ್ತು ಸಾಧನೆ ಕುರಿತು ಹರಿಹರದ ರಮಣಶ್ರೀ ಮತ್ತು ಚನ್ನಬಸವ ಪ್ರಶಸ್ತಿ ಪುರಸ್ಕೃತ ಎಚ್.ಎ. ಭಿಕ್ಷಾವರ್ತಿಮಠ ಉಪನ್ಯಾಸ ನೀಡಿದರು.
    ಬ್ಯಾಡಗಿಯ ವರ್ತಕ ನಾಗರಾಜ ಕೆಂಬಿ, ಸ್ಥಳೀಯ ಕೆಎಲ್‌ಇ ಶಿಕ್ಷಣ ಸಂಸ್ಥೆ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಬಸವರಾಜಪ್ಪ ಪಟ್ಟಣಶೆಟ್ಟಿ, ವರ್ತಕ ಸಿದ್ಧಲಿಂಗಸ್ವಾಮಿ ನ್ಯಾಮತಿ, ಶಂಭಣ್ಣ ಕುಶಲದ, ಬಾಬಣ್ಣ ಶೆಟ್ಟರ, ಮಠದ ಕಾರ್ಯದರ್ಶಿ ಅಮೃತಗೌಡ ಹಿರೇಮಠ, ವಿ.ವಿ. ಹರಪನಹಳ್ಳಿ, ಕಸ್ತೂರಿ ಪಾಟೀಲ, ಹಾಲಸಿದ್ದಯ್ಯ ಶಾಸ್ತ್ರಿಗಳು, ಗುಡ್ಡಪ್ಪ ಹಿಂದಿನಮನಿ, ರಜನಿ ಕರೆಗಾರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts