More

    ಲಘುವಾಗಿ ಮಾತನಾಡೋದು ಬಿಡಿ ಎಚ್‌ಡಿಕೆಗೆ ಸಿಪಿವೈ ಎಚ್ಚರಿಕೆ

     

    ಚನ್ನಪಟ್ಟಣ
    ಜಿಲ್ಲೆಯ ಎಲ್ಲ ರಾಜಕಾರಣಿಗಳ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಕುವಾರಸ್ವಾಮಿ ರೂಢಿಸಿಕೊಂಡಿದ್ದಾರೆ. ನನ್ನ ಹಾಗೂ ಸಚಿವ ಅಶ್ವತ್ಥ ನಾರಾಯಣ ವಿರುದ್ಧವೂ ನಾಲಗೆ ಹರಿಬಿಟ್ಟಿದ್ದಾರೆ. ಈ ರೀತಿ ಹಗುರವಾಗಿ ಮಾತನಾಡುವುದು ಅವರ ಯೋಗ್ಯತೆಗೆ ಸರಿ ಬರುವುದಿಲ್ಲ ಎಂದು ಮೇಲ್ಮನೆ ಸದಸ್ಯ ಸಿ.ಪಿ.ಯೋಗೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು.
    ತಾಲೂಕಿನ ದೊಡ್ಡಮಳೂರಿನ ಶ್ರೀರಾಮ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಚ್.ಡಿ. ಕುವಾರಸ್ವಾಮಿ ಸರ್ವಶ್ರೇಷ್ಠ ರಾಜಕಾರಣಿಯಂತೆ ಎಲ್ಲರ ಬಗ್ಗೆ ಹಗುರವಾಗಿ ವಾತನಾಡುತ್ತಾರೆ. ಇದನ್ನು ಮುಂದುವರಿಸಿದ್ದೇ ಆದಲ್ಲಿ ಅವರನ್ನು ಅಡ್ಡಗಟ್ಟಿ ಪ್ರಶ್ನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
    ನಾನು ತೆಂಗಿನಕಾಯಿ, ಬಾಳೆ ದಿಂಡು ವ್ಯಾಪಾರ ವಾಡಿದ್ದೇನೆ. ರಿಯಲ್ ಎಸ್ಟೇಟ್ ಸೇರಿ ನಾನಾ ವೃತ್ತಿ ಮಾಡಿದ್ದೇನೆ. ಇದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ ಸಿಪಿವೈ, ಕುವಾರಸ್ವಾಮಿಗೆ ಹಿನ್ನೆಲೆ ಇರಬಹುದು. ಆದರೆ, ನಾನು ಜನರ ಮಧ್ಯೆ ಬೆಳೆದಿರುವ ನಾಯಕ. ಪಟೇಲನ ಮಗನೇ ಪಟೇಲ ಆಗಬೇಕು ಎಂದೇನಿಲ್ಲ, ಜನಪರ ಕಾಳಜಿ ಇರುವ ಯಾರಾದರೂ ಮುಂದೆ ಬರಬಹುದು ಎಂದು ಗುಡುಗಿದರು.

    ನಯಾಪೈಸೆ ಕೊಡುಗೆ ಇಲ್ಲ
    ತಾಲೂಕಿನ ನೀರಾವರಿ ಯೋಜನೆಗಳಿಗೆ ಕುಮಾರಸ್ವಾಮಿಯವರ ನಯಾಪೈಸೆ ಕೊಡುಗೆ ಇಲ್ಲ. ಕಣ್ವ ಎಡದಂಡೆ, ಬಲದಂಡೆ. ಮಾಕಳಿ ನೀರಾವರಿ ಯೋಜನೆ ಎಲ್ಲವೂ ನನ್ನ ಕೊಡುಗೆ. ಅವರಿಗೆ ಮಾಕಳಿ ನೀರಾವರಿ ಯೋಜನೆ ಏನೆಂದೇ ಗೊತ್ತಿಲ್ಲ. ಇವೆಲ್ಲ ನನ್ನ ಕಾಳಜಿಯಿಂದ ಕಾರ್ಯಗತಗೊಂಡ ಯೋಜನೆಗಳು ಎಂದು ಯೋಗೇಶ್ವರ್ ಸ್ಪಷ್ಟಪಡಿಸಿದರು.

    ಚುನಾವಣೆಯಲ್ಲಿ ನಿರ್ಧಾರವಾಗಲಿದೆ
    2023ರ ಚುನಾವಣೆಯಲ್ಲಿ ತಾಲೂಕಿನಿಂದ ನಾನು ಸ್ಪರ್ಧಿಸುತ್ತೇನೆ, ಅವರೂ ಸ್ಪರ್ಧಿಸಲಿ. ಅಲ್ಲಿ ಯಾರು ಏನು ವಾಡಿದ್ದಾರೆ ಎಂದು ಜನ ತೀಮಾನಿಸುತ್ತಾರೆ. ವಾಧ್ಯಮಗಳು ಮೈಕ್ ಹಿಡಿದ ತಕ್ಷಣ ಯಾರ ಬಗ್ಗೆ ಬೇಕಾದರೂ ವಾತನಾಡುವ ಪಂಡಿತೋತ್ತಮ ಕುವಾರಸ್ವಾಮಿ. ಸಾರ್ವಜನಿಕ ಜೀವನದಲ್ಲಿ ಇತಿಮಿತಿಯಲ್ಲಿರಬೇಕು ಎಂದು ಎಚ್ಚರಿಸಿದರು.

    1001 ಗಣೇಶ ವಿತರಣೆ
    ಈ ಬಾರಿ ಜನ್ಮದಿನ ಪ್ರಯುಕ್ತ ಆಚರಣೆಗಳನ್ನು ಮಾಡದೆ, ಇಡೀ ತಾಲೂಕಿನಲ್ಲಿ ಗಣೇಶನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದೇನೆ. ತಾಲೂಕಿನಾದ್ಯಂತ 1001 ಗಣೇಶ ಮೂರ್ತಿಗಳನ್ನು ವಿತರಿಸಲು ನಿರ್ಧರಿಸಲಾಗಿದೆ. ಈ ಬಾರಿ ಎಲ್ಲ ಕೆರೆ-ಕಟ್ಟೆಗಳು ತುಂಬಿ ತುಳುಕುತ್ತಿರುವ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಗೌರಿ-ಗಣೇಶ ಹಬ್ಬ ಆಚರಿಸಲು ಗಣೇಶ ಮೂರ್ತಿಗಳನ್ನು ವಿತರಿಸಲಾಗುತ್ತಿದೆ ಎಂದು ಯೋಗೇಶ್ವರ್ ತಿಳಿಸಿದರು.

    ಇವೆಲ್ಲವೂ ಸಂವಿಧಾನದ ಅದ್ಭುತಗಳು
    ತೆಂಗಿನಕಾಯಿ ಮಾರಿಕೊಂಡಿದ್ದ ಯೋಗೇಶ್ವರ್ ನೀರಾವರಿ ತಜ್ಞರಾದರಾ ಎಂದು ಕೇವಲವಾಗಿ ಮಾತನಾಡಿದ್ದಾರೆ. ಹಾಗಿದ್ದರೆ ನೀರಾವರಿ ಯೋಜನೆಗಳ ಬಗ್ಗೆ ಅರಿವಿಲ್ಲದ ಅವರು ಹೇಗೆ ನೀರಾವರಿ ತಜ್ಞರಾದರು ಎಂದು ಪ್ರಶ್ನಿಸಿದ ಯೋಗೇಶ್ವರ್, ಟೀ ಮಾರುತ್ತಿದ್ದ ನರೇಂದ್ರ ಮೋದಿ ದೇಶದ ಪ್ರಧಾನಿಯಾದರು, ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ದೇಶದ ರಾಷ್ಟ್ರಪತಿಯಾದರೂ, ಆಟೋ ಓಡಿಸುತ್ತಿದ್ದ ಏಕನಾಥ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿಯಾದರೂ ಇವೆಲ್ಲವೂ ನಮ್ಮ ದೇಶದ ಸಂವಿಧಾನದ ಅದ್ಭುತ. ಹೀಗಿರುವಾಗ ಒಂದು ವೃತ್ತಿಯ ಬಗ್ಗೆ ಹಗುರುವಾಗಿ ಮಾತನಾಡುವುದು ಎಷ್ಟು ಸರಿ ಎಂದು ಸಿಪಿವೈ ಪ್ರಶ್ನಿಸಿದರು.

    ಎಚ್‌ಡಿಕೆ ವಿರುದ್ಧ ಹೊಸಬಾಂಬ್
    30 ವರ್ಷಗಳ ಹಿಂದೆ ನಾನು ರಿಯಲ್ ಎಸ್ಟೇಟ್ ಆರಂಭಿಸಿದಾಗ ಎಚ್‌ಡಿಕೆ ಕುಟುಂಬ ನನ್ನನ್ನು ಬ್ಲಾಕ್‌ಮೇಲ್ ಮಾಡಿ ನನ್ನಿಂದ ಹಣ ಪಡೆದಿತ್ತು ಎಂದು ಯೋಗೇಶ್ವರ್ ಹೊಸ ಬಾಂಬ್ ಸಿಡಿಸಿದರು.
    ಅಂದು ನಾನು ರಿಯಲ್ ಎಸ್ಟೇಟ್ ಆರಂಭಿಸಿದಾಗ ಭೂ ಪರಿವರ್ತನೆ ಮುಂತಾದ ಕೆಲಸಗಳು ಆಗದಂತೆ ತಡೆ ಹಿಡಿಯಲಾಗಿತ್ತು. ನನ್ನನ್ನು ಹೆದರಿಸಿ ತೊಂದರೆ ಮಾಡಿ ನನ್ನಿಂದ ದುಡ್ಡು ತರಿಸಿಕೊಂಡಿದ್ದರು. ಅವರ ಬೆಂಬಲಿಗರಾದ ಬ್ಯಾಟಪ್ಪ, ನರಸಿಂಹ, ವೆಂಟೇಶ್ ಎಂಬುವರು ನನ್ನನ್ನು ಹೆದರಿಸಿ ಹಣ ಕೊಡಿಸಿದ್ದರು. ನಾನು ಶಾಸಕನಾಗಿದ್ದಾಗ ಕುವಾರಸ್ವಾಮಿ ಬನಶಂಕರಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮೆಗಾ ಸಿಟಿಯಲ್ಲಿ ಸಮಸ್ಯೆಯಾಗಲು ಅವರೇ ಕಾರಣ. ಕಿರಿಕಿರಿ ಮಾಡಿ ನನ್ನಿಂದ ಹಣ ಪಡೆದಿದ್ದರು ಎಂದು ಯೋಗೇಶ್ವರ್ ಆರೋಪಿಸಿದರು.
    ಬಮುಲ್ ವಾಜಿ ನಿರ್ದೇಶಕ ಎಸ್.ಲಿಂಗೇಶ್‌ಕುವಾರ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲುವೇಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಕೆ.ಟಿ.ಜಯರಾಮು, ನಗರಾಧ್ಯಕ್ಷ ಶಿವು, ಮುಖಂಡರಾದ ಎಂ.ಎ. ಆನಂದಸ್ವಾಮಿ, ವಿ.ಬಿ.ಚಂದ್ರು, ಕೂಡ್ಲೂರು ಪುಟ್ಟಸ್ವಾಮಿ, ಬ್ರಹ್ಮಣೀಪುರ ಪ್ರಸನ್ನ ಮಾಧ್ಯಮ ಪ್ರಮುಖರಾದ ಮುದಗೆರೆ ಜಯಕುವಾರ್, ಗೋಪಿ ಮುಂತಾದವರು ಇದ್ದರು.

    ಸಮಸ್ಯೆಗಳಿಗೆ ಮಿಡಿಯುತ್ತಿರುವೆ
    ತಾಲೂಕಿನ ಕೋಡಂಪುರ – ಬಾಣಗಹಳ್ಳಿ ಸೇತುವೆ ಕುಸಿದು ಬಿದ್ದಿದೆ. ಇನ್ನೂ ಕೆಲವು ಕಡೆ ಸೇತುವೆಗಳ ಅಗತ್ಯವಿದೆ. ತಾಲೂಕಿನಲ್ಲಿ ಐದಾರು ಸೇತುವೆಗಳ ಅಗತ್ಯವಿದ್ದು, ಇದಕ್ಕಾಗಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಆನೆ ಹಾವಳಿಯಿಂದ ತಾಲೂಕಿನ ರೈತರು ಅನುಭವಿಸುತ್ತಿರುವ ಸಂಕಷ್ಟವನ್ನು ಕಂಡು ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಶ್ರಮಿಸಿದ್ದೇನೆ. ಅರಣ್ಯ ಸಚಿವರು ಮತ್ತು ಅಧಿಕಾರಿಗಳ ಮೇಲೆ ನಿರಂತರ ಒತ್ತಡ ತಂದು ಎರಡು ಒಂಟಿ ಸಲಗಗಳನ್ನು ಸೆರೆಹಿಡಿದು ಸ್ಥಳಾಂತರಿಸುವ ಕಾರ್ಯಾಚರಣೆಗೆ ಅನುಮತಿ ತಂದಿದ್ದೇನೆ. ನಿಜವಾದ ಜನಪರ ಕಾಳಜಿ ಇಟ್ಟುಕೊಂಡು ನಾನು ಕೆಲಸ ವಾಡುತ್ತಿದ್ದೇನೆ. ನನ್ನ ಕೆಲಸಕ್ಕೂ ಯಾರ ಸರ್ಟಿಫಿಕೇಟ್ ಅವಶ್ಯಕತೆ ಇಲ್ಲ ಎಂದು ಸಿಪಿವೈ ಕುಟುಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts