More

    ದುಶ್ಚಟದಿಂದ ದೂರವಿರಲು ಸಿಪಿಐ ಸಲಹೆ

    ಚನ್ನಗಿರಿ: ಯುವಕರು ದುಶ್ಚಟದಿಂದ ದೂರವಿದ್ದು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಸಿಪಿಐ ಆರ್.ಆರ್.ಪಾಟೀಲ್ ತಿಳಿಸಿದರು.

    ತಾಲೂಕು ಸಂತೇಬೆನ್ನೂರು ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ದುಶ್ಚಟ ಅಪರಾಧ ಕೃತ್ಯಗಳನ್ನು ಮಾಡಿಸುತ್ತದೆ. ಇದರಿಂದ ದೂರವಿದ್ದು ಉತ್ತಮ ಸಂಸ್ಕಾರ, ಉನ್ನತ ಶಿಕ್ಷಣ ಪಡೆದು ಜೀವನ ಉಜ್ವಲಗೊಳಿಸಿಕೊಳ್ಳಬೇಕು. ಹುಟ್ಟಿದ ಊರು, ಶಿಕ್ಷಣ ನೀಡಿದ ಶಾಲೆ, ಜಿಲ್ಲೆ, ರಾಜ್ಯ, ದೇಶಕ್ಕೆ ಕೀರ್ತಿ ತರುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.

    ಜಿಲ್ಲಾ ಜನಜಾಗೃತಿ ವೇದಿಕೆ ನಿರ್ದೇಶಕ ಎಂ.ಬಿ.ನಾಗರಾಜ್ ಕಾಕನೂರು ಮಾತನಾಡಿ, ಮದ್ಯ ಜೀವ ತೆಗೆಯುತ್ತದೆ. ಅರಿತು ಬಾಳಿದರೆ ಸತ್ಕಾರ, ಮರೆತು ಬಾಳಿದರೆ ಶವ ಸಂಸ್ಕಾರ. ಇಷ್ಟೇ ಜೀವನದ ಸಾರ ಎಂದರು.

    ಚಲನಚಿತ್ರ ಯುವ ನಿರ್ದೇಶಕ ನಾಗರಾಜ್ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಪಿಎಸ್‌ಐ ಶಿವರುದ್ರಪ್ಪ ಮೇಟಿ, ಪತ್ರಕರ್ತ ವೀರೇಶ್, ಪ್ರಸಾದ್, ಡಾ.ಗಂಗಾರೆಡ್ಡಿ, ಎಎಸ್‌ಐ ರೇವಣಸಿದ್ದಪ್ಪ, ಚಂದ್ರಪ್ಪ, ಅಂಜನಪ್ಪ, ಮಾರುತಿ, ತೇಜಸ್ವಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts