More

    ಗ್ರಾಹಕರಿಗೆ ಸಬ್ಸಿಡಿ, ಸಾಲ ಸೌಲಭ್ಯ ಕರುಣಿಸಿ

    ಚನ್ನಗಿರಿ: ಆರ್ಥಿಕವಾಗಿ ಹಿಂದುಳಿದವರ ಅನುಕೂಲಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಬ್ಸಿಡಿ ನೀಡಿದರೆ ಬ್ಯಾಂಕ್‌ಗಳ ವ್ಯವಸ್ಥಾಪಕರು ಸಾಲ ನೀಡುವಲ್ಲಿ ನಿರ್ಲಕ್ಷ್ಯ ತೋರುವ ಕಾರಣ ಯೋಜನೆಗಳು ವಿಫಲವಾಗುತ್ತಿವೆ ಎಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ತಿಳಿಸಿದರು.

    ಪಟ್ಟಣದ ತಾಪಂ ಸಭಾಂಗಣದಲ್ಲಿ ಕರೆದಿದ್ದ ಬ್ಯಾಂಕ್ ವ್ಯವಸ್ಥಾಪಕರ ಸಭೆಯಲ್ಲಿ ಶುಕ್ರವಾರ ಮಾತನಾಡಿ, ಅನೇಕ ಕಾರಣ ನೀಡಿ ಬ್ಯಾಂಕ್‌ನಲ್ಲಿ ಅರ್ಜಿಗಳನ್ನು ಪರಿಶೀಲಿಸದೇ ವಾಪಸ್ ಕಳುಹಿಸಲಾಗುತ್ತಿದೆ.
    ಫಲಾನುಭವಿಗಳಿಗೆ ಯೋಜನೆಯ ಫಲ ಸಿಗುತ್ತಿಲ್ಲ. ಮೇಲಾಧಿಕಾರಿಗಳಿಗೆ ನೀಡುವಂತೆ ತಿಳಿಸಿದರೂ ಯಾರಿಗೂ ಸಾಲ ಸಿಗದೇ ಸರ್ಕಾರದ ಯೋಜನೆ ನಿಂತು ಹೋಗುತ್ತದೆ. ಅಧಿಕಾರಿಗಳು ಜನರಿಗೆ ಸ್ಪಂದಿಸಬೇಕೆಂದು ತಿಳಿಸಿದರು.

    ಫಲಾನುಭವಿಗಳ ಪಟ್ಟಿಯಲ್ಲಿ ಅರ್ಹರೆಂದು ಕಂಡು ಬಂದರೆ ಸಾಲ ನೀಡಬೇಕು. ಮತ್ತು ನ್ಯೂನತೆಗಳು ಇದ್ದರೆ ಅದಕ್ಕೆ ಉತ್ತರ ನೀಡಬೇಕು. ಇಲ್ಲದಿದ್ದರೆ ಅವರ ಹೆಸರಲ್ಲಿ ಬರುವ ಸಬ್ಸಿಡಿ ವಾಪಸ್ ಹೋಗುತ್ತದೆ. ಇದರಿಂದ ಯಾರಿಗೂ ಲಾಭವಾಗುವುದಿಲ್ಲ ಎಂದರು.

    ಸಾಲ ಪಡೆದ ಫಲಾನುಭವಿಗಳು ನಿಗಧಿತ ಸಮಯದಲ್ಲಿ ಮರುಪಾವತಿ ಮಾಡಬೇಕು. ಇಲ್ಲದಿದ್ದರೆ ಇತರರಿಗೆ ಸೌಲಭ್ಯ ಒದಗಿಸುವುದು ಕಷ್ಟವಾಗುತ್ತದೆ ಎಂದರು.

    ಲೀಡ್ ಬ್ಯಾಂಕ್ ಮ್ಯಾನೇಜರ್ ಸುಶ್ರುತ್‌ಶಾಸ್ತ್ರಿ ಮಾತನಾಡಿ, ಸರ್ಕಾರ ಲಾಕ್‌ಡೌನ್ ವೇಳೆ ಸಂಕಷ್ಟದಲ್ಲಿರುವವರ ಖಾತೆಗೆ ಸಹಾಯಧನ ಹಾಕುತ್ತಿದೆ. ಬ್ಯಾಂಕ್‌ನವರು ಯಾವುದೇ ಕಾರಣಕ್ಕೂ ಸಾಲಕ್ಕೆ ಈ ಹಣ ತೆಗೆದುಕೊಳ್ಳಬಾರದು. ಹಾಗೊಮ್ಮೆ ಕಡಿತವಾದರೆ ಪರಿಶೀಲಿಸಿ ಫಲಾನುಭವಿಗಳ ಖಾತೆಗೆ ಹಣ ಹಾಕಬೇಕು ಎಂದರು.

    ಲಾಕ್‌ಡೌನ್ ಸಮಯದಲ್ಲಿ ಉತ್ತಮ ಸೇವೆಯನ್ನು ಗ್ರಾಹಕರಿಗೆ ನೀಡಿದ್ದಾರೆ. ಪ್ರಧಾನಮಂತ್ರಿ 500 ರೂನಂತೆ ಇದುವರೆಗೆ 3.25 ಕೋಟಿ ಹಣವನ್ನು ಫಲಾನುಭವಿಗಳ ಖಾತೆಗೆ ಹಾಕಲಾಗಿದೆ.

    ಖಾತೆ ತೆರೆಯಲು ಗ್ರಾಹಕರು ಬಂದರೆ ವಾಪಸ್ ಕಳಿಸಬೇಡಿ. ಮುಂದಿನ ದಿನಗಳಲ್ಲಿ ಸರ್ಕಾರದ ಎಲ್ಲ ಕೆಲಸಗಳು ಬ್ಯಾಂಕ್ ಮೂಲಕ ಆಗಲಿದೆ ಎಂದರು.

    ಜಿಪಂ ಅಧ್ಯಕ್ಷೆ ದೀಪಾ ಜಗದೀಶ್, ಜಿಪಂ ಬ್ಯಾಂಕ್‌ಗಳ ಉಸ್ತುವಾರಿ ಅಧಿಕಾರಿ ಮಲ್ಲಿಕಾರ್ಜುನಪ್ಪ ಸಭೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts