More

    ಗದಗ: ಕುಮಾರಸ್ವಾಮಿ ಜತೆ ಫೋಟೋ ವೈರಲ್? ವಿರೋಧಿಗಳ ಕುತಂತ್ರ ಎಂದ ಚಂದ್ರು ಲಮಾಣಿ. ಆರೋಪ ತಿರಸ್ಕಾರ

    ಶಿವಾನಂದ ಹಿರೇಮಠ ಗದಗ,
    ಶಿರಹಟ್ಟಿ ಮತಕ್ಷೇತ್ರದ ಕಾಂಗ್ರೆಸ್​ ಮತ್ತು ಬಿಜೆಪಿಯಲ್ಲಿ ಆಕಾಂಗಲ ಟಿಕೆಟ್​ ವಾರ್​ ಗಂಭೀರ ಸ್ವರೂಪ ಪಡೆದಿದ್ದು, ಗೆಲುವಿಗಿಂತಲೂ ಟಿಕೆಟ್​ ಗಿಟ್ಟಿಸಿಕೊಳ್ಳುವುದೇ ಮಹಾಭಾರತದ ಯುದ್ಧದಂತೆ ಬಾಸವಾಗುತ್ತಿದೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲೂ ಪರಸ್ಪರ ಕೆಸೆರೆರಚಾಟ ಶುರುವಾಗಿದೆ.
    ಶಿರಹಟ್ಟಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್​ ಆಕಾಂಕ್ಷಿ ಆಗಿರುವ ಚಂದ್ರು ಲಮಾಣಿ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ ಎನ್ನುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಜಿಲ್ಲಾ ಬಿಜೆಪಿ ಮುಖಂಡರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಇತ್ತ ಕೆಲವು ಜೆಡಿಎಸ್​ ಕಾರ್ಯಕರ್ತರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ, ಈ ಫೋಟೋ ಇವತ್ತಿನದೋ ಅಥವಾ ಹಳೆಯದೋ ಅಥವಾ ರಾಜಕೀಯ ಹುನ್ನಾರ ನಡೆಯುತ್ತಿದೆಯೋ ಎಂಬುದರ ಬಗ್ಗೆ ಈ ವರೆಗೂ ಸ್ಪಷ್ಟತೆ ಇಲ್ಲ. ಫೋಟೋ ಮಾತ್ರ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
    ಚಂದ್ರು ಲಮಾಣಿ ಬಿಜೆಪಿ ಪಕ್ಷ ಬಿಟ್ಟು ಜೆಡಿಎಸ್​ ಪಕ್ಷ ಸೇರಿಕೊಳ್ಳಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಕೆಲವೇ ದಿನಗಳಲ್ಲಿ ಬಿಜೆಪಿ ಪಟ್ಟಿ ಬಿಡುಗಡೆಯಾಗಲಿದ್ದು ಈ ವದಂತಿಗಳಿಗೆ ಸದ್ಯದಲ್ಲಿಯೇ ತೆರೆ ಬೀಳಲಿದೆ.
    ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಹೊಸಬರಿಗೆ ಅವಕಾಶ ತೆರೆದಿಡಬಹುದಾದ ಕ್ಷೇತ್ರವೆಂದರೆ ಅದು ಶಿರಹಟ್ಟಿ ಮೀಸಲು ಕ್ಷೇತ್ರ ಮಾತ್ರ. ಈ ನಡುವೆ ಶಾಸಕ ರಾಮಣ್ಣ ಲಮಾಣಿ ಕೂಡ ಹಿಮದೆ ಬಿದ್ದಿಲ್ಲ. ಎಲ್ಲದರ ನಡುವೆ ಈ ಸುದ್ದಿ ರಾಜಕೀಯ ಕ್ಷೇತ್ರದಲ್ಲಿ ಮಹತ್ವ ಪಡೆದುಕೊಂಡಿದ್ದು, ಚಂದ್ರು ಲಮಾಣಿ ಆರೋಪವನ್ನು ತಳ್ಳಿ ಹಾಕಿದ್ದಾರೆ. ಮತ್ತು ಸ್ಪಷ್ಟಣೆ ನೀಡಿದ್ದಾರೆ.

    ಚಂದ್ರು ಲಮಾಣಿ ಸ್ಪಷ್ಟಣೆ:

    ಕಳೆದ 2.5 ವರ್ಷಗಳ ಹಿಂದೆ ತಾಲೂಕಿನ ಸುಗ್ನಳ್ಳಿ ಗ್ರಾಮದ ಕೆರೆಯೊಂದರ ಉದ್ಘಾಟನೆಗೆ ಕುಮಾರಸ್ವಾಮಿ ಕ್ಷೇತ್ರಕ್ಕೆ ಬಂದಿದ್ದರು. ಆ ಸಂದರ್ಭದಲ್ಲಿ ಲೆ$್ಮಶ್ವರದ ಮುಕ್ತಿ ಮಂದಿರ ರಸ್ತೆಯಲ್ಲಿರುವ ನನ್ನ ಆಸ್ಪತ್ರೆಗೂ ಕುಮಾರಸ್ವಾ ಭೇಟಿ ನೀಡಿದ್ದರು. ನಮ್ಮ ಆಸ್ಪತ್ರೆ ಇದ್ದ ವಾರ್ಡ್​ ಸದಸ್ಯರು ಜೆಡಿಎಸ್​ ಪಕ್ಷದವರಾಗಿದ್ದರು ಮತ್ತು ಆಸ್ಪತ್ರೆ ಮುಂಭಾಗದ ರಸ್ತೆ ದುರಸ್ತಿ ಕಾರ್ಯ ಮಾಡುವಂತೆ ಮನವಿ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಈ ಫೋಟೋ ತೆಗೆಯಲಾಗಿತ್ತು. ನನ್ನ ಏಳ್ಗೆ ಸಹಿಸಲಾಗದ ಕಾಂಗ್ರೆಸ್​ ಮುಖಂಡರು ಮತ್ತು ಕೆಲ ಸ್ವಪಕ್ಷೀಯರು ಚುನಾವಣಾ ಸಂದರ್ಭದಲ್ಲಿ ರ್ದುಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಚಂದ್ರು ಲಮಾಣಿ ವಿಜಯವಾಣಿಗೆ ತಿಳಿಸಿದ್ದಾರೆ.

    ಕೋಟ್​:
    ಸಾಮಾಜಿಕ ಜಾಲತಾಣಗಳಲ್ಲಿ ಶಿರಹಟ್ಟಿ ಶಾಸಕರ ವಿರುದ್ಧ ಮತ್ತು ಆಕಾಂಗಳ ವಿರುದ್ಧ ಸ್ವಪಯರು ಅತೃಪ್ತ ಹೇಳಿಕೆಗಳನ್ನು ಬರೆದು ಪಕ್ಷಕ್ಕೆ ಹಾನಿ ಮತ್ತು ಮುಜುಗುರು ತರುತ್ತಿರುವ ಕುರಿತು ಮಾಹಿತಿ ಬಂದಿದೆ. ಅಂತವರ ವಿರುದ್ಧ ನಿರ್ಧಾಣ್ಯವಾಗಿ ಕ್ರಮ ಕೈಗೊಳ್ಳಲು ಮತ್ತು ಉಚ್ಚಾಟಣೆ ಮಾಡಲು ಜಿಲ್ಲಾಧ್ಯಕ್ಷರಿಗೆ ಸೂಚಿಸಲಾಗಿದೆ. ಪಕ್ಷವೇ ಶ್ರೇಷ್ಠವಾಗಿದ್ದು, ಪಕ್ಷದ ಮುಂದೆ ಎಲ್ಲರೂ ತಲೆಬಾಗಲೇಬೇಕು.
    – ಲಿಂಗರಾಜ ಪಾಟೀಲ, ಅಧ್ಯಕ್ಷರು, ರಾಜ್ಯ ಬಿಜೆಪಿ ಶಿಸ್ತು ಸಮಿತಿ

    ಕೋಟ್​:
    ಕಾಂಗ್ರೆಸ್​ ರಾಜಕಾರಣಕ್ಕೂ, ಚಂದ್ರು ಲಮಾಣಿ ರಾಜಕಾರಣಕ್ಕೂ ಸಂಬಂಧವೇ ಇಲ್ಲ. ಕಾಂಗ್ರೆಸ್​ ಮೇಲಿನ ಆರೋಪ ನಿರಾಧಾರ. ಅವರ ಪೋಟೋ ರ್ದುಬಳಕೆ ಮಾಡಿಕೊಂಡು ರಾಜಕೀಯ ಲಾಭ ಪಡೆದುಕೊಳ್ಳುವ ನೀಚ ಮಟ್ಟದ ರಾಜಕಾರಣ ನನಗೂ ಇಲ್ಲ. ಕಾಂಗ್ರೆಸ್​ ಪಕ್ಷಕ್ಕೂ ಇಲ್ಲ.
    -ರಾಮಕೃಷ್ಣ ದೊಡ್ಡಮನಿ,
    ಕಾಂಗ್ರೆಸ್​ ಮಾಜಿ ಶಾಸಕ, ಶಿರಹಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts