More

    ಡಾ. ಚಂದ್ರು ಲಮಾಣಿಗೆ ಸೋಮವಾರ ಮಧ್ಯಾಹ್ನ ಡೆಡ್​ ಲೈನ್?​.

    ಶಿವಾನಂದ ಹಿರೇಮಠ, ಗದಗ
    ಲೋಕಾಯುಕ್ತ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿರುವ ಶಿರಹಟ್ಟಿ ಬಿಜೆಪಿ ಅಭ್ಯಥಿರ್ ಡಾ. ಚಂದ್ರು ಲಮಾಣಿಗೆ ರಾಜ್ಯ ಬಿಜೆಪಿ ಮುಖಂಡರು ಸೋಮವಾರ ಮಧ್ಯಾಹ್ನದ ಒಳಗಾಗಿ ಆರೋಗ್ಯ ಇಲಾಖೆಯಿಂದ ರಾಜೀನಾಮೆ ಸ್ವೀಕೃತಿ/ಅಂಗೀಕಾರ ಪತ್ರವನ್ನು ಒದಗಿಸುವಂತೆ ಡೆಡ್​ ಲೈನ್​ ನೀಡಿದ್ದಾರೆ ಎಂಬುದನ್ನು ಬಿಜೆಪಿ ಉನ್ನತ ಮೂಲಗಳು ವಿಜಯವಾಣಿಗೆ ತಿಳಿಸಿವೆ.


    ಶಿರಹಟ್ಟಿ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಆಗಿದ್ದ ಡಾ. ಚಂದ್ರು ಲಮಾಣಿ ಸಲ್ಲಿಸಿದ್ದ ರಾಜೀನಾಮೆಯು ಆರೋಗ್ಯ ಇಲಾಖೆಯಿಂದ ಅಂಗೀಕಾರ ಆಗಿಲ್ಲ ಎಂಬ ವಿಷಯ ರಾಜ್ಯಾದ್ಯಂತ ಚರ್ಚೆ ಗ್ರಾಸವಾಗಿದೆ. ಡಾ.ಚಂದ್ರು ಮೇಲೆ ಲೋಕಾಯುಕ್ತ ಪ್ರಕರಣ ಇರುವ ಹಿನ್ನೆಲೆ ಪ್ರಕರಣ ಇತ್ಯರ್ಥ ಆಗುವವರೆಗೂ ರಾಜೀನಾಮೆ ಸ್ವೀಕೃತಿ ಸಾಧ್ಯವಿಲ್ಲ ಎಂಬುದು ವಿರೋಧಿ ಬಣದ ಸ್ಪಷ್ಟಣೆ. ವಿರೋಧಿ ಬಣವು ದಾಖಲೆ ಸಮೇತ ಸುದ್ದಿಗೋಷ್ಠಿ ನಡೆಸಿ ಈ ವಿಷಯ ಬಹಿರಂಗ ಪಡಿಸಿದ್ದರು. ಪಕ್ಷಕ್ಕೂ ಈ ವಿಷಯ ಮುಜುಗುರು ತಂದಿತ್ತು. ಈ ಎಲ್ಲ ವಿಷಯಗಳ ಹಿನ್ನೆಲೆ ಮುಂದಾಗಬಹುದಾದ ಕಾನೂನು ತೊಡಕುಗಳನ್ನು ರಾಜ್ಯ ಬಿಜೆಪಿ ಮುಖಂಡರು ಭಾನುವಾರ ಸಮಾಲೋಚನೆ ನಡೆಸಿದ್ದಾರೆ. ಅಭ್ಯಥಿರ್ಗಳ ನಾಮಪತ್ರ ಸಲ್ಲಿಸಲು ಇನ್ನು ಕೇವಲ ಮೂರೇ ದಿನ ಬಾಕಿ ಇರುವ ಹಿನ್ನೆಲೆ ಇಂತಹ ವಿಷಯಗಳು ಆದಷ್ಟು ಬೇಗ ಇತ್ಯರ್ಥಗೊಳಿಸಬೇಕು ಎಂಬ ನಿರ್ಣಯಕ್ಕೆ ಬಿಜೆಪಿ ಮುಖಂಡರು ಬಂದಿದ್ದಾರೆ. ಹಾಗಾಗಿ ಆರೋಗ್ಯ ಇಲಾಖೆಯಿಂದ ರಾಜೀನಾಮೆ ಅಂಗೀಕಾರ ಪತ್ರವನ್ನು ಸೋಮವಾರ ಮಧ್ಯಾಹ್ನ ಒಳಗಾಗಿ ಒದಗಿಸುವಂತೆ ಭಾನುವಾರ ಡಾ. ಚಂದ್ರು ಗೆ ಸೂಚಿಸಿದ್ದಾರೆ. ರಾಜೀನಾಮೆ ಸ್ವೀಕೃತಿ ಪತ್ರವನ್ನು ಡಾ. ಚಂದ್ರು ಒದಗಿಸಿದ್ದೇ ಆದಲ್ಲಿ ಮುಂದಿನ ಪ್ರಕ್ರಿಯೆ ಸರಳಗೊಳ್ಳಬಹುದು.

    ಬೆಂಗಳೂರು ಠಿಕಾಣಿ:
    ಶಿರಹಟ್ಟಿ ಕ್ಷೇತ್ರದಲ್ಲಿ ಅರ್ಧ ಡಜನ್​ ಗೂ ಹೆಚ್ಚು ಆಕಾಂಗಳಿದ್ದು, ಟಿಕೆಟ್​ ನೀಡುವಂತೆ ಹುಬ್ಬಳ್ಳಿಯ ಪ್ರಹ್ಲಾದ್​ ಜೋಶಿ ಮನೆ, ಬೆಂಗಳೂರಿನ ಸಿಎಂ ಬೊಮ್ಮಾಯಿ ಮತ್ತು ಬಿ. ಎಸ್​. ಯಡಿಯೂರಪ್ಪ ಮನೆ ಎಡತಾಕುತ್ತಿದ್ದಾರೆ. ಇದರ ಜತೆಗೆ ಮುಂದೆ ಕೈಗೊಳ್ಳಬೇಕಾದ ಕಾನೂನು ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಈ ಮಧ್ಯೆ ಅಭ್ಯಥಿರ್ ಚಂದ್ರು ಲಮಾಣಿ ತಮ್ಮದೇ ಮಾರ್ಗದಲ್ಲಿ ಇಲಾಖೆಯಿಂದ ಸ್ವೀಕೃತಿ ಪತ್ರ ಪಡೆಯಲು ಪ್ರಯತ್ನಿಸುತಿದ್ದಾರೆ. ಈ ಕುರಿತು ಸ್ಪಷ್ಟಣೆ ಕೇಳಲು ವಿಜಯವಾಣಿ ಕರೆ ಮಾಡಿದ್ದು, ಚಂದ್ರು ಲಮಾಣಿ ಸ್ವೀಕರಿಸಲಿಲ್ಲ.

    ಸಾಧ್ಯತೆಗಳೇನು?

    ಡಾ. ಚಂದ್ರು ಲಮಾಣಿ ರಾಜೀನಾಮೆ ಕುರಿತ ದಾಖಲೆಗಳು ಡಿಪಿಆರ್​ ವಿಭಾಗದಲ್ಲಿದ್ದು, ಡಿಪಿಆರ್​ ವಿಭಾಗವು ಸರ್ಕಾರಿ ಸೇವಾ ಮಾನದಂಡಗಳನ್ನು ಆರೋಗ್ಯ ಇಲಾಖೆಗೆ ಸೂಚಿಸಬೇಕು. ಇದಕ್ಕೂ ಮೊದಲು ಅಭ್ಯಥಿರ್ ಡಾ. ಚಂದ್ರು ಲಮಾಣಿ ಮೇಲಿನ ಲೋಕಾಯುಕ್ತ ಪ್ರಕರಣದ ಪ್ರಸ್ತುತ ಸ್ಥಿತಿ ಕುರಿತು ಮಾಹಿತಿ ನೀಡುವಂತೆ ಡಿಪಿಆರ್​ ವಿಭಾಗ ಲೋಕಾಯುಕ್ತಕ್ಕೆ ಮಾಹಿತಿ ಕೇಳಬಹುದು. ಈ ವರದಿಗಳ ಆಧಾರದಲ್ಲಿ ಆರೋಗ್ಯ ಇಲಾಖೆ/ ಸ್ಕ್ರೀನಿಂಗ್​ ಕಮಿಟಿಯು ರಾಜೀನಾಮೆ ಅಂಗೀಕಾರ ಮಾಡಬಹುದೇ? ಇಲ್ಲವೇ? ಎಂಬ ಕುರಿತು ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

    ಕೋಟ್​:
    ಈ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಡಿಪಿಆರ್​ ವಿಭಾಗಕ್ಕೆ ಕಳುಹಿಸಲಾಗಿದೆ. ಸರ್ಕಾರಿ ಸೇವೆ ಮತ್ತು ರಾಜೀನಾಮೆ ಸಲ್ಲಿಸಿದ ನಂತರದ ಅನುಸರಿಸಬೇಕಾದ ಮಾನದಂಡಗಳೇನು ಎಂಬದುನ್ನು ಡಿಪಿಆರ್​ ವಿಭಾಗವೇ ಸೂಚಿಸಬೇಕು. ಆ ಸೂಚನೆಯಂತೆ ಇಲಾಖೆ ನಿರ್ಧರಿಸುತ್ತದೆ.
    – ಅನೀಲ್​ ಕುಮಾರ್​
    ಆರೋಗ್ಯ ಇಲಾಖೆ, ಪ್ರಧಾನ ಕಾರ್ಯದರ್ಶಿ. ಬೆಂಗಳೂರು


    ಕೋಟ್​:
    ಭವಿಷ್ಯದಲ್ಲಿ ಎದುರಾಗಬಹುದಾದ ಕಾನೂನು ತೊಡಕುಗಳನ್ನು ಮನಗಣನೆ ಮಾಡಿಕೊಂಡು ಸೋಮವಾರ ಮಧ್ಯಾಹ್ನ ಒಳಗಾಗಿ ರಾಜೀನಾಮೆ ಅಂಗೀಕಾರ ಪತ್ರ ಒದಗಿಸುವಂತೆ ಅಭ್ಯಥಿರ್ ಡಾ. ಚಂದ್ರುಗೆ ಸೂಚಿಸಿದ್ದೇವೆ. ಮುಂದಿನ ನಿರ್ಧಾರ ಪಕ್ಷ ತೆಗೆದುಕೊಳ್ಳಲಿದೆ.
    ಲಿಂಗರಾಜ ಪಾಟೀಲ
    ಅಧ್ಯಕ್ಷರು, ಬಿಜೆಪಿ ರಾಜ್ಯ ಶಿಸ್ತು ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts